Advertisement
ಟೆಬ್ಮಾ ಶಿಪ್ ಯಾರ್ಡ್‌ಗೆ ಈ ಹಿಂದೆ ನಡೆದ ಒಪ್ಪಂದದಂತೆ 2023ರ ಡಿಸೆಂಬರ್ 31ರಂದು ಅವಧಿ ಮುಗಿ ಯ ಲಿದ್ದು, ಒಪ್ಪಂದದಂತೆ ಸರಕಾರ ಹಿಂದೆ ಪಡೆಯಬೇಕು. ಒಂದು ವೇಳೆ ಒಪ್ಪಂದವನ್ನು ಮುರಿದರೆ ಸಮಸ್ತ ಮೀನುಗಾರರ ನೇತೃತ್ವದಲ್ಲಿ ಉಗ್ರ ಹೋರಾಟದ ಹಾದಿಯನ್ನು ತುಳಿಯಬೇಕಾಗುತ್ತದೆ ಎಂದು ಮಲ್ಪೆ ಮೀನುಗಾರ ಸಂಘ ಎಚ್ಚರಿಸಿದೆ.
Related Articles
Advertisement
ಸಿಎಂ ಮಧ್ಯೆ ಪ್ರವೇಶ, ಒಪ್ಪಂದ :
ಮಲ್ಪೆ ಬಂದರಿನಲ್ಲಿ ಬೋಟು ನಿಲ್ಲಲು ಸ್ಥಳಾವಕಾಶದ ಕೊರತೆಯಿಂದ ಮೀನುಗಾರರಿಗೆ ಆಗುತ್ತಿರುವ ಸಮಸ್ಯೆಯನ್ನು ಮನಗಂಡು 2008ರ ಡಿಸೆಂಬರ್ 18ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಟೆಬ್ಮಾ ಅಧಿಕಾರಿಗಳು, ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು, ಶಾಸಕರು, ಸಚಿವರೊಂದಿಗೆ ಬೆಂಗಳೂರಿನಲ್ಲಿ ಮೀನುಗಾರ ಸಂಘದ ಜತೆ ಸಭೆ ನಡೆಸಿ 30 ವರ್ಷದ ಅವಧಿಯನ್ನು 15 ವರ್ಷಕ್ಕೆ ಸೀಮಿತಗೊಳಿಸುವ ಮೂಲಕ ಒಪ್ಪಂದ ಮಾಡಿದ್ದರು. ಈ ಬಗ್ಗೆ ರಾಜ್ಯಪಾಲರ ಅಧೀನ ಕಾರ್ಯದರ್ಶಿ ಆದೇಶವನ್ನು ನೀಡಿದ್ದರು. ಜಿಲ್ಲಾಧಿಕಾರಿ ಸೇರಿದಂತೆ ಸಭೆಯಲ್ಲಿದ್ದ ಎಲ್ಲರೂ ಸಹಿ ಹಾಕಿದ್ದರು. ಮೀನುಗಾರರಿಗೆ ಇದು ಅಸಮಾಧಾನವಾದರೂ ಒಪ್ಪಿಗೆ ಸೂಚಿಸಿದ್ದರು. 2023ರ ಡಿ. 31ಕ್ಕೆ ಅವಧಿ ಮುಗಿಯಲಿದೆ. ಆದರೆ ಸರಕಾರ ಇದಕ್ಕೆ ಮೊದಲೇ ಕಳೆದ ವರ್ಷ ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್ ಎಂಬ ಹೆಸರಿನಲ್ಲಿ ಕಾರ್ಯಾಚರಿಸುತ್ತಿದೆ ಎಂದು ಮೀನುಗಾರ ಸಂಘಟನೆ ತಿಳಿಸಿದೆ.
ಮಲ್ಪೆ ಶಿಪ್‌ಯಾರ್ಡ್ ಬಗ್ಗೆ ಶುಕ್ರವಾರ ಬೆಂಗಳೂರಿನಲ್ಲಿ ಬಂದರು ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು. – ಎಸ್. ಅಂಗಾರ ಸಚಿವರು, ಮೀನುಗಾರಿಕೆ ಮತ್ತು ಬಂದರು ಇಲಾಖೆ
ಮೀನುಗಾರಿಕೆ ಬಂದರಿನ ಅಭಿವೃದ್ಧಿಗೆ ಮೀಸಲಾಗಿರಿಸಿದ ಜಾಗವನ್ನು ಬಂದರಿನ ಅಭಿವೃದ್ಧಿ ಹೊರತುಪಡಿಸಿ ಬೇರೆ ಯಾವುದೇ ಉದ್ದೇಶಕ್ಕೆ ಬಳಸಿಕೊಂಡಲ್ಲಿ ಮಲ್ಪೆ ಮೀನುಗಾರರ ಸಂಘದ ನೇತೃತ್ವದಲ್ಲಿ ಸಮಸ್ತ ಮೀನುಗಾರರು ಸೇರಿ ಬೀದಿಗಿಳಿದು ಹೋರಾಟ ನಡೆಸಲು ಸಿದ್ಧರಾಗಿದ್ದಾರೆ. -ದಯಾನಂದ ಕೆ. ಸುವರ್ಣ, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ