Advertisement

Malpe ದಾಖಲೆ ಪರಿಶೀಲನೆಯ ನೆಪ; ಮೀನು ಗೋವಾ ಪೊಲೀಸರ ಪಾಲು?

12:29 AM Jan 04, 2024 | Team Udayavani |

ಮಲ್ಪೆ: ಮೀನುಗಾರಿಕೆ ಮುಗಿಸಿ ಬರುತ್ತಿದ್ದ ಮಲ್ಪೆ ಬಂದರಿನ ಆಳಸಮುದ್ರ ಬೋಟನ್ನು ತಡೆದು ನಿಲ್ಲಿಸಿದ ಗೋವಾ ರಾಜ್ಯದ ಕರಾವಳಿ ಕಾವಲು ಪೊಲೀಸರು ಎನ್ನಲಾದ 5 ಜನರ ತಂಡ ಬೋಟಿನಲ್ಲಿದ್ದ ಬೆಲೆ ಬಾಳುವ ಮೀನುಗಳನ್ನು ದೋಚಿದ್ದಾರೆ ಎಂದು ಮೀನುಗಾರರು ಆರೋಪಿಸಿದ್ದಾರೆ.

Advertisement

ಮಲ್ಪೆಯ ಆಳಸಮುದ್ರ ಬೋಟು 12 ನಾಟಿಕಲ್‌ ಮೈಲು ದೂರದಲ್ಲಿ ಮಹಾರಾಷ್ಟ್ರ ದ ಸಮುದ್ರದಲ್ಲಿ ಮೀನುಗಾರಿಕೆ ಮುಗಿಸಿ ಡಿ. 31ರಂದು ಮಲ್ಪೆ ಕಡೆಗೆ ಬರುತ್ತಿದ್ದಾಗ ಗಸ್ತು ನಿರತ ಗೋವಾ ರಾಜ್ಯದ ಕರಾವಳಿ ಕಾವಲು ಪೊಲೀಸರು ಮಲ್ಪೆ ಬೋಟನ್ನು ದೂರದಿಂದ ನೋಡಿ ಧಾವಿಸಿ ಬಂದು ತಡೆದು ನಿಲ್ಲಿಸಿದರು ಎನ್ನಲಾಗಿದೆ.

ದಾಖಲೆ ಪರಿಶೀಲನೆ ನೆಪದಲ್ಲಿ ಬೋಟಿನ ಒಳಗೆ ಬಂದ ಅವರು ಒಂದು ಬುಟ್ಟಿ ಬೊಂಡಸ, 4 ಕೆಜಿ ತೂಕದ 4 ಅಂಜಲ್‌ ಮತ್ತು 20 ಕೆಜಿ ಬಿಳಿ ಪಾಂಪ್ರಟ್‌ ಸೇರಿದಂತೆ 25 ಸಾವಿರ ರೂ. ಮೌಲ್ಯದ ಮೀನನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಬೋಟಿನ ತಂಡೇಲರು ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next