ಮಲ್ಪೆ: ಬಂದರಿನ 2ನೇ ಹಂತದ ಮೀನುಗಾರಿಕಾ ಜೆಟ್ಟಿ ಬೇಸಿನ್‌ನಲ್ಲಿ ಅನೇಕ ವರ್ಷಗಳಿಂದ ಹೂಳು ತುಂಬಿಕೊಂಡಿದ್ದರೂ ಇದುವರೆಗೂ ಡ್ರೆಜ್ಜಿಂಗ್ ಕಾಮಗಾರಿ ನಡೆಸಿಲ್ಲ. ಇದರಿಂದ ಮೀನುಗಾರಿಕಾ ಬೋಟ್‌ಗಳಿಗೆ ಬಂದರು ಒಳ ಪ್ರವೇಶಕ್ಕೆ ತೊಂದರೆಯಗುತ್ತಿರುವುದಲ್ಲದೆ, ನೂರಾರು ಮೀನುಗಾರರ ಸಾವಿಗೂ ಇದು ಕಾರಣವಾಗುತ್ತಿದೆ. ತತ್‌ಕ್ಷಣ ಡ್ರೆಜ್ಜಿಂಗ್ ಕಾಮಗಾರಿಯನ್ನು ನಡೆಸುವಂತೆ ಮೀನುಗಾರ ಮುಖಂಡರುಗಳು ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಸಿ.ಕೆ. ಮೂರ್ತಿ ಅವರಲ್ಲಿ ಆಗ್ರಹಿಸಿದ್ದಾರೆ.
ಮಲ್ಪೆ ಬಂದರಿಗೆ ಅವರು ಭೇಟಿ ನೀಡಿದ ಸಂದರ್ಭದಲ್ಲಿ ಬಂದರಿನ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದು ಅತೀ ಶೀಘ್ರ ಪರಿಹಾರ ಕಲ್ಪಿಸುವಂತೆ ಅವರು ಮನವಿ ಮಾಡಿದರು.
ಬಂದರಿನ ಬೇಸಿನ್‌ನಲ್ಲಿ 5-6 ಮೀಟರ್‌ನಷ್ಟು ಕೆಸರು ತುಂಬಿ ಕೊಂಡಿದ್ದು ಬೋಟಿನಿಂದ ಕಾಲುಜಾರಿ ನೀರಿಗೆ ಬಿದ್ದ ಸಂದರ್ಭದಲ್ಲಿ ಕೆಸರಲ್ಲಿ ಸಿಲುಕಿ ಮೇಲೆ ಬರಲಾಗದೆ ಅನೇಕ ಮೀನುಗಾರರು ಈಗಾಗಲೇ ಸಾವನ್ನಪ್ಪಿದ್ದಾರೆ.
ಮಾತ್ರವಲ್ಲದೆ ಬೋಟುಗಳು ಕೆಸರಿನಲ್ಲಿ ಹೂತು ಹಾನಿಗೊಳಗಾಗು ತ್ತಿವೆ. ಸೆ. 15ರಿಂದ ಹೂಳು ತೆಗೆಯುವ ಬಗ್ಗೆ ಭರವಸೆಯನ್ನು ಮೀನುಗಾರಿಕಾ ಇಲಾಖೆ ನೀಡಿದೆಯಾದರೂ ಇಂತಹ ಭರವಸೆಗಳನ್ನು ಈ ಹಿಂದೆಯೂ ಹಲ ವಾರು ಬಾರಿ ನೀಡಿದ್ದಾರೆ. ನಮಗೆ ಈ ವಿಷಯದಲ್ಲಿ ವಿಶ್ವಾಸ ಇಲ್ಲವೆಂದು ಆರೋಪಿಸಿದ ಆವರು ಸೆ. 15ರ ಒಳಗೆ ಡ್ರೆಜ್ಜಿಂಗ್ ಕಾಮಗಾರಿಯನ್ನು ಆರಂಭಿಸದಿದ್ದಲ್ಲಿ ಪ್ರತಿಭಟನೆ ನಡೆಸು ವುದೇ ಅನಿವಾರ್ಯವಾಗುತ್ತದೆ ಎಂದು ಅಧಿಕಾರಿಯವರಲ್ಲಿ ಎಚ್ಚರಿಸಿದ್ದಾರೆ.
ಡೀಪ್‌ಸೀ ಟ್ರಾಲ್‌ಬೋಟ್ ಮೀನು ಗಾರ ಸಂಘದ ಅಧ್ಯಕ್ಷ ಕಿಶೋರ್ ಡಿ. ಸುವರ್ಣ, ಪ್ರಮುಖರಾದ ಗೋಪಾಲ ಆರ್.ಕೆ., ಗೋಪಾಲ ಕುಂದರ್, ಕಿಶೋರ್ ಪಡುಕರೆ, ವಾಸುದೇವ ಸಾಲ್ಯಾನ್, ದಯಾನಂದ ಕೆ. ಸುವರ್ಣ, ನಾರಾಯಣ ಕರ್ಕೇರ, ದಯಾನಂದ ಕುಂದರ್, ರಾಜೇಂದ್ರ ಸುವರ್ಣ, ಕೃಷ್ಣ ಜಿ. ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.