Advertisement

ಮಲ್ಪೆ ಪೊಲೀಸ್‌ ಠಾಣೆ: ರಸ್ತೆ ಸುರಕ್ಷಾ ಸಪ್ತಾಹ ಮಾಹಿತಿ

11:30 PM May 31, 2019 | Team Udayavani |

ಮಲ್ಪೆ: ಇಲ್ಲಿನ ಪೊಲೀಸ್‌ ಠಾಣೆಯ ವತಿಯಿಂದ ರಾಷ್ಟ್ರೀಯ ರಸ್ತೆ ಸುರಕ್ಷಾ ಸಪ್ತಾಹದ ಪ್ರಯುಕ್ತ ಸಂಚಾರ ಸುರಕ್ಷತೆಯ ಬಗ್ಗೆ ಮಾಹಿತಿ ಕಾರ್ಯಕ್ರಮವು ಮೇ 30ರಂದು ಲಯನ್ಸ್‌ ಭವನದಲ್ಲಿ ಜರಗಿತು.

Advertisement

ಉಡುಪಿ ವೃತ್ತ ನಿರೀಕ್ಷಕ ಮಂಜುನಾಥ್‌ ಮಾತನಾಡಿ ವಾಹನ ಚಲಾಯಿಸುವಾಗ ಮಾಡುವ ನಿರ್ಲಕ್ಷ್ಯ ಬದುಕಿನ ಅತೀ ದೊಡ್ಡ ದುರಂತಕ್ಕೆ ಕಾರಣವಾಗುತ್ತಿದೆ. ಯುವಕರು ಹೆಚ್ಚಿನ ವೇಗ, ನಿರ್ಲಕ್ಷ್ಯತನದಿಂದ ವಾಹನ ಚಲಾಯಿಸುವುದು ಅಪಾಯಕಾರಿ ಎಂದು ಪರಿಗಣಿಸದೆ ಇದ್ದಲ್ಲಿ ತೊಂದರೆಗೆ ಒಳಗಾಗಬೇಕಾಗುತ್ತದೆ. ಈ ಬಗ್ಗೆ ಹೆಚ್ಚಿನ ಅರಿವು ಅಗತ್ಯ ಎಂದರು.

ಮಲ್ಪೆ ಠಾಣಾಧಿಕಾರಿ ಮಧು ಬಿ.ಇ. ಪ್ರಾಸ್ತಾವಿಕವಾಗಿ ಮಾತನಾಡಿ ವಾಹನ ಸಂಖ್ಯೆ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವುದು ಅಗತ್ಯ. ವಾಹನ ಸವಾರರು ಚಾಲನೆಯ ಅರ್ಹತೆ ಪಡೆಯದೇ ವಾಹನ ಚಲಾಯಿಸುವುದು ಅಪಘಾತಕ್ಕೆ ಕಾರಣವಾಗುತ್ತಿದೆ ಎಂದರು.

ಮಲ್ಪೆ ರಿಕ್ಷಾ ಚಾಲಕ-ಮಾಲಕರ ಸಂಘದ ಅಧ್ಯಕ್ಷ ಸದಾಶಿವ ಬೈಲಕರೆ, ಸಂಘದ ಸದಸ್ಯರಾದ ಜಗದೀಶ್‌, ಚಂದ್ರಹಾಸ್‌, ಐತಪ್ಪ ಬಂಗೇರ, ರಾಜೇಶ್‌ ಪಡುಕರೆ, ಸುಂದರ ಪೆರ್ಡೂರು, ದಿನೇಶ್‌ ಗಾಣಿಗ, ರತ್ನಾಕರ ಬಾಚನಬೈಲು, ವಾಸು ಅಮೀನ್‌, ಅಮೀನ್‌ ಸಾಹೇಬ್‌, ಗಣೇಶ್‌ ಅಮೀನ್‌, ಶಂಭು ಕರ್ಕೇರ, ಸುರೇಶ್‌ ಬೈಲಕರೆ, ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸಭೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next