Advertisement

Malpe: ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ

08:57 PM Oct 17, 2024 | Team Udayavani |

ಮಲ್ಪೆ: ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆಯಾಗಿದ್ದಾರೆ. ಅತ್ರಾಡಿ ಗ್ರಾಮದ ಬಾಳು (89) ಅವರು ಅ. 15ರಂದು ಮನೆಯಿಂದ ಹೋದವರು ನಾಪತ್ತೆಯಾಗಿದ್ದು ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Advertisement

ಮನೆಯವರು ಪರೀಕ ಪರಿಸರದ ಸುವರ್ಣ ನದಿ ಸೇತುವೆಯ ಬಳಿ ಹುಡುಕಾಟ ನಡೆಸಿದಾಗ ಅವರ ಚಪ್ಪಲಿ ಪತ್ತೆಯಾಗಿತ್ತು. ಈ ಬಗ್ಗೆ ಸ್ಥಳೀಯರಲ್ಲಿ ವಿಚಾರಿಸಿದಾಗ ಯಾರೋ ವ್ಯಕ್ತಿಯೊಬ್ಬರು ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ತಿಳಿಸಿದ್ದರು. ಅ. 16ರಂದು ಎಲ್ಲ ಕಡೆ ಹುಡುಕಾಟ ನಡೆಸಿದರೂ ಪತ್ತೆಯಾಗಲಿಲ್ಲ.

ಅ. 17ರಂದು ತಿಮ್ಮಣ್ಣಕುದ್ರು ಹ್ಯಾಂಗಿಂಗ್‌ ಬ್ರಿಡ್ಜ್ ನದಿಯ ಬಳಿ ಬಾಳು ಅವರ ಮೃತದೇಹ ಪತ್ತೆಯಾಗಿದೆ. ಬಾಳು ಅವರು ಮಕ್ಕಳಿಲ್ಲದ ಕೊರಗಿನಿಂದ ಮಾನಸಿಕವಾಗಿ ನೊಂದಿದ್ದರು. ಇದೇ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಲ್ಪೆ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಕೆಮ್ಮಣ್ಣು: ಅಪರಿಚಿತ ಶವ ಪತ್ತೆ
ಮಲ್ಪೆ: ಇಲ್ಲಿನ ಕೆಮ್ಮಣ್ಣು ಸಮೀಪದ ಪಡುತೋನ್ಸೆಯ ಕುದ್ರು ಬಳಿ ಅ. 17ರಂದು ಅಪರಿಚಿತ ಶವವೊಂದು ಪತ್ತೆಯಾಗಿದೆ.

ಪ್ರಾಥಮಿಕ ಮಾಹಿತಿ ಮೇರೆಗೆ ಮೃತನನ್ನು ಬಾಲು ನಾಯ್ಕ ಎಂದು ಗುರುತಿಸಲಾಗಿದೆ. ಅಲ್ವಿನ್‌, ಹರಿದಾಸ್‌, ನಿಖೀಲ್‌ ಮತ್ತು ಸತ್ಯ ಅವರು ಮೃತದೇಹವನ್ನು ಮೇಲೆತ್ತುವಲ್ಲಿ ಸಹಕರಿಸಿದರು. ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರು ಶವವನ್ನು ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ.

Advertisement

ನೇಜಾರು: ವ್ಯಕ್ತಿ ಆತ್ಮಹತ್ಯೆ
ಮಲ್ಪೆ: ಮೂಡುತೋನ್ಸೆ ಗ್ರಾಮ ನೇಜಾರಿನ ರಾಜೀವ ನಗರದ ಅಶೋಕ್‌ (50) ಅವರು ಅ. 10ರಂದು ಮಧ್ಯಾಹ್ನ ತನ್ನ ಮನೆಯ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವಿಪರೀತ ಮದ್ಯ ಸೇವೆಯಿಂದಾಗಿ ಖನ್ನತೆಗೆ ಒಳಗಾಗಿದ್ದರು. ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next