Advertisement

ಮಲ್ಪೆ  ಮಾರುಕಟ್ಟೆಗೆ ತಮಿಳುನಾಡಿನ ತಾಜಾ ಮೀನುಗಳು

06:00 AM Jun 28, 2018 | |

ಮಲ್ಪೆ: ಕಡಲು ಪ್ರಕ್ಷುಬ್ದಗೊಂಡಿ ರುವುದರಿಂದ ನಾಡದೋಣಿ ಮೀನುಗಾರರಿಗೆ ಸರಿಯಾಗಿ ಮೀನುಗಾರಿಕೆಗೆ ತೆರಳಲಾಗುತ್ತಿಲ್ಲ. ತೆರಳಿದರೂ ಸಮುದ್ರದಲ್ಲಿ ಸರಿಯಾದ ಪ್ರಮಾಣದಲ್ಲಿ ಮೀನು ಸಿಗುತ್ತಿಲ್ಲ. ಈ ಕಾರಣದಿಂದ ಹೊರರಾಜ್ಯದಿಂದ ಬರುವ ಬಾಕ್ಸ್‌ ಮೀನುಗಳು ಮಲ್ಪೆ ಬಂದರಿನಲ್ಲಿ ಭಾರಿ ಬೇಡಿಕೆಯನ್ನು ಪಡೆದುಕೊಳ್ಳುತ್ತಿದೆ.

Advertisement

ಮಳೆಗಾಲದಲ್ಲಿ ನಾಡದೋಣಿಗಳಿಗೆ ಮೀನು ಸಿಗದಿದ್ದಾಗ ದೂರದ ಕೇರಳ, ತಮಿಳುನಾಡು, ಹೈದರಾಬಾದ್‌ನಿಂದ ಮೀನನ್ನು ತರಿಸಿಕೊಂಡು ಇಲ್ಲಿ ವ್ಯಾಪಾರ ನಡೆಸಲಾಗುತ್ತಿದೆ. ತಮಿಳುನಾಡು ಮತ್ತು ಆಂದ್ರಪ್ರದೇಶದಲ್ಲಿ ಈಗಾಗಲೇ ಯಾಂತ್ರಿಕ ಮೀನುಗಾರಿಕೆ ಆರಂಭಗೊಂಡಿದೆ. ಕೇರಳದ ನಾಡದೋಣಿಯ ಮೀನುಗಳು ಇಲ್ಲಿಗೆ ಲಾರಿ ಮೂಲಕ ಬರುತ್ತಿವೆ. ಹಾಗಾಗಿ ಅಲ್ಲಿನ ಮೀನುಗಳನ್ನು ತರಿಸಿ ವ್ಯಾಪಾರಿಗಳು ಮಾರಾಟ ಮಾಡುತ್ತಿದ್ದಾರೆ.

75 ಟನ್‌ ಮೀನು ಮಾರಾಟ
ಮಲ್ಪೆ ಬಂದರಿಗೆ ಪ್ರತಿನಿತ್ಯ 15ರಿಂದ 20 ಲಾರಿಗಳಿಂದ ಸುಮಾರು 75 ಟನ್‌ಗಳಷ್ಟು ಮೀನುಗಳು ಬರುತ್ತಿದೆ. ಬಂಗುಡೆ, ಬೂತಾಯಿ, ಸಿಗಡಿ, ಬೊಂಜಿಲ್‌ ಸೇರಿದಂತೆ  ಚಿಲ್ಲರೆ ಮೀನುಗಳು ರಖಂ ಆಗಿ ಮಾರಾಟವಾಗುತ್ತಿದೆ.

ಮೀನಿಗೆ ರಾಸಾಯನಿಕ ಬಳಕೆ ವದಂತಿ: 
ವ್ಯಾಪಾರ ಕುಸಿತ

ಮೀನು ಕೆಡದಂತೆ ಸಂರಕ್ಷಿಸಲು ಕೆಲವೊಂದು ರಾಸಾಯನಿಕ ವಸ್ತುವನ್ನು ಬಳಸುತ್ತಾರೆ ಎಂಬ ವದಂತಿ ಹರಡಿದ ಹಿನ್ನೆಲೆಯಲ್ಲಿ ಇಲ್ಲಿನ ಮೀನು ಮಾರಾಟಗಾರರು ಸಮಸ್ಯೆಯನ್ನು ಎದುರಿಸುವಂತಾಗಿದೆ. ಇಲ್ಲಿನ ಮಹಿಳಾ ಮೀನುಗಾರರು ನಾಡದೋಣಿಗಳ ಸಮುದ್ರದ ಮತ್ತು ಹೊಳೆಯ ತಾಜಾ ಮೀನುಗಳನ್ನೆ ಹೆಚ್ಚಾಗಿ ಮಾರಾಟ ಮಾಡುತ್ತಿದ್ದಾರೆ. ಆದರೂ ಮೀನು ಮಾರುವ ಮಹಿಳೆಯರ ಬಳಿ ನಿತ್ಯ ಮೀನು ಖರೀದಿಸುವ ಗ್ರಾಹಕರು ಮೀನಿಗೆ ಕೆಮಿಕಲ್‌ ಹಾಕಿದೇಯಾ ಎಂದು ಪ್ರಶ್ನಿಸುತ್ತಾರಂತೆ. ಕೆಲವರು ಇನ್ನು ಸ್ವಲ್ಪದಿನ ಬಿಟ್ಟು ಮೀನು ತಿನ್ನಲು ಹಿಂದೇಟು ಹಾಕಿದ್ದರಿಂದ ಏನೋ ಮೀನು ಮಾರಾಟದ ವ್ಯಾಪಾರವೂ ಕೂಡ ಕುಸಿದಿದೆ ಎನ್ನಲಾಗಿದೆ.

“ಗ್ರಾಹಕರಿಗೆ ಯಾವುದೇ ಸಂದೇಹ ಬೇಡ’
ನಮ್ಮ ಎಲ್ಲ ಮೀನು ಮಾರುಕಟ್ಟೆಗಳಲ್ಲಿ ಸಮುದ್ರದಿಂದ ಮತ್ತು ಹೊಳೆಯಿಂದ ಹಿಡಿದ ತಾಜಾ ಮೀನು ಮಾರಲಾಗುತ್ತಿದ್ದು ಯಾವುದೇ ರೀತಿಯ ಶೀತಲೀಕೃತ ಮೀನುಗಳನ್ನು ತಂದು ವ್ಯಾಪಾರ ಮಾಡುತ್ತಿಲ್ಲ. ಹಾಗಾಗಿ ಗ್ರಾಹಕರಿಗೆ ಯಾವುದೇ ಸಂದೇಹ ಬೇಡ. ಕರಾವಳಿಯ ಜಿಲ್ಲೆಗಳಲ್ಲಿ ವಿವಿಧ ಮೀನುಗಾರಿಕಾ ಬಂದರುಗಳಿಂದ ನೇರವಾಗಿ ಮೀನು ಮಾರುಕಟ್ಟೆಗಳಿಗೆ ಅತೀ ಶೀಘ್ರವಾಗಿ ತಂದು ಮಾರಾಟ ಮಾಡುತ್ತಿರುವುದರಿಂದ ಯಾವುದೇ ರಾಸಾಯನಿಕ ಬಳಕೆಯ ಅಗತ್ಯ ಇರುವುದಿಲ್ಲ.
– ಬೇಬಿ ಎಚ್‌ ಸಾಲ್ಯಾನ್‌, ಅಧ್ಯಕ್ಷರು, 
ಉಡುಪಿ ತಾಲೂಕು ಮಹಿಳಾ ಹಸಿಮೀನು ಮಾರಾಟಗಾರರ ಸಂಘ

Advertisement

ಮಲ್ಪೆ ಬಂದರು ಮಾರುಕಟ್ಟೆ: ಮೀನಿನ ದರ
25 ಕೆ.ಜಿ.ಯ ಒಂದು ಬಾಕ್ಸ್‌  ಬಂಗುಡೆಗೆ 2,800 -3,200 ರೂ., ಬೂತಾಯಿ ಮೀನಿಗೆ 3,000 -3,500 ರೂ., ಬೋಂಜಿಲ್‌ 2,500 -3,000 ರೂ., ಸಿಗಡಿ ಮೀನು 4,000-4,500 ರೂ., ಮಿಕ್ಸ್‌ ಮೀನು 1,000 – 1,300 ರೂ.ಗೆ ಮಾರಾಟವಾಗುತ್ತಿದೆ.

ಬಂಗುಡೆ ಭರ್ಜರಿ
ಪ್ರತಿವರ್ಷ ಮಳೆಗಾಲದ ಆರಂಭವಾದ ಬಳಿಕ ಹೊರರಾಜ್ಯದ ಮೀನನ್ನು ತಂದು ಇಲ್ಲಿನ ಮಾರಾಟ ಮಾಡುತ್ತಿದೇªವೆ. ಈ ಬಾರಿ ಆಂಧ್ರಪ್ರದೇಶ ಮತ್ತು ಕೇರಳದ ಮೀನುಗಳು ಕಡಿಮೆ, ತಮಿಳುನಾಡಿನಿಂದ ಹೆಚ್ಚು ಮೀನು ಬರುತ್ತಿದೆ. ಬಂಗುಡೆ ಹೆಚ್ಚಿನ ಪ್ರಮಾಣದಲ್ಲಿದ್ದು ಬೂತಾಯಿ ಹಾಗೂ ಇನ್ನಿತರ ಮೀನು ಕಡಿಮೆ ಬಂದಿದೆ. ಇಲ್ಲಿನ ನಾಡದೋಣಿಗೆ ಮೀನುಗಳು ದೊರೆತಾಗ ಹೊರರಾಜ್ಯದ ಮೀನುಗಳಿಗೆ ಬೇಡಿಕೆ ಕಳೆದುಕೊಳ್ಳುತ್ತದೆ.
– ಹುಸೇನ್‌,ಮೀನು ವ್ಯಾಪಾರಿ

ದೊಡ್ಡ ಮೀನು ಕೊಳ್ಳೋರಿಲ್ಲ
ಮೀನಿಗೆ ಕೆಮಿಕಲ್‌ ಹಾಕಿದ್ದಾರಂತಲ್ಲ… ಹೆಣಕ್ಕೆ ಕೊಡುವ ಇಂಜೆಕ್ಷನ್‌ ಮೀನಿಗೆ ಕೊಟ್ಟು ಕೆಡದಂತೆ ಮಾಡುತ್ತಾರಂತೆ.. ನೀವು ಎಲ್ಲಿಂದ ಮೀನು ತರುತ್ತೀರಿ? ಎಂದೆಲ್ಲ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳುತ್ತಾರೆ. ದೊಡ್ಡ ಮೀನನ್ನು ಯಾರೂ ಖರೀದಿಸುವುದಿಲ್ಲ ಕೆಲವರು ಸಣ್ಣ ಮೀನನ್ನು ಮಾತ್ರ  ತೆಗೆದುಕೊಳ್ಳುತ್ತಾರೆ. ಮೂರ್‍ನಾಲ್ಕು ದಿನದಿಂದ ಮೀನು ಮಾರಾಟವಾಗದೇ ಉಳಿದುಕೊಂಡು ನಷ್ಟ ಉಂಟಾಗಿದೆ.
– ಗುಲಾಬಿ ತಿಂಗಳಾಯ, 
ಕುತ್ಪಾಡಿ ಪಡುಕರೆ

– ನಟರಾಜ್‌ ಮಲ್ಪೆ

Advertisement

Udayavani is now on Telegram. Click here to join our channel and stay updated with the latest news.

Next