Advertisement

Malpe: ಗಾಯಾಳು ಮೀನುಗಾರ ಸಾವು

12:52 AM Oct 03, 2024 | Team Udayavani |

ಮಲ್ಪೆ: ಮೀನುಗಾರಿಕ ಬೋಟಿನಲ್ಲಿ ಅಡುಗೆ ಕೆಲಸ ಮಾಡುತ್ತಿರುವ ವೇಳೆ ಒಲೆಗೆ ಇಟ್ಟಿದ್ದ ಎಣ್ಣೆಯ ಬಾಣಲೆಗೆ ಬಿದ್ದು ಗಂಭೀರ ಗಾಯಗೊಂಡಿದ್ದ ಮೀನುಗಾರ ಅಂಕೋಲ ತಾಲೂಕಿನ, ಬೆಲಂಬೆರ್‌ ಗ್ರಾಮದ ನವೀನ್‌ ಗೋವಿಂದ ಗೌಡ (23) ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

Advertisement

ಸೆ. 13ರಂದು ಶೇಷಾದ್ರಿ ಬೋಟನಲ್ಲಿ ಮೀನುಗಾರಿಕೆಗೆ ತೆರಳಿದ್ದ ಅವರು ಸೆ. 16ರಂದು ರಾತ್ರಿ ಬೋಟಿನಲ್ಲಿ ಅಡುಗೆ ಕೆಲಸ ಮಾಡುತ್ತಿರುವ ವೇಳೆ ಬೋಟು ಅಬ್ಬರದ ಅಲೆಗೆ ಅಲುಗಾಡಿದ ಪರಿಣಾಮ ನವೀನ್‌ ಗೋವಿಂದ ಗೌಡ ಅವರು ಗ್ಯಾಸ್‌ ಒಲೆಯ ಮೇಲೆ ಇಟ್ಟಿದ್ದ ಎಣ್ಣೆಯ ಬಾಣಲೆಗೆ ಬಿದ್ದಿದ್ದರು. ಅವರ ಮುಖ ಹಾಗೂ ಬಲಗೈ ಸುಟ್ಟು ಹೋಗಿತ್ತು. ಸೆ. 17ರಂದು ಮುಂಜಾನೆ ಅವರನ್ನು ತೀರಕ್ಕೆ ಕರೆದುಕೊಂಡು ಬಂದು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಸೆ. 26ರಂದು ರಾತ್ರಿ ಮೃತಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next