Advertisement

Malpe: ಮರಳು ಅಕ್ರಮ ಸಂಗ್ರಹ, ಕೇಸು ದಾಖಲು

08:38 PM Sep 20, 2024 | Team Udayavani |

ಮಲ್ಪೆ: ಪಡುತೋನ್ಸೆ ಗ್ರಾಮದ ಹೂಡೆ ಗುಡ್ಕೇರಿ ಕಂಬ್ಳದಲ್ಲಿ ಅಕ್ರಮವಾಗಿ ಮರಳು ಶೇಖರಣೆ ಮಾಡುತ್ತಿದ್ದ ಮೂವರನ್ನು ಮಲ್ಪೆ ಪೊಲೀಸರು ಖಚತ ಮಾಹಿತಿಯ ಮೇರೆಗೆ ಹಿಡಿದು ವಶಕ್ಕೆ ಪಡೆದುಕೊಂಡಿದ್ದಾರೆ.

Advertisement

ನಸ್ರುಲ್ಲಾ, ಮುನೀರ್‌, ಫಜೂಲ್‌ ಅವರನ್ನು ವಶಕ್ಕೆ ಪಡೆಯಲಾಗಿದ್ದು, ಅವರು ಸುವರ್ಣ ನದಿ ತೀರದಲ್ಲಿ ಮರಳನ್ನು ತೆಗೆದು ಸುಲೇಮಾನ್‌ ಅವರಿಗೆ ಸೇರಿದ ಜಾಗದಲ್ಲಿ ಶೇಖರಣೆ ಮಾಡಿದ್ದಾರೆ. ಸುಮಾರು 2 ಯೂನಿಟ್‌ ಮರಳನ್ನು ಸಂಗ್ರಹಿಸಿದ್ದು, ಪಂಚಾಯತ್‌ದಾರರ ಸಮಕ್ಷಮದಲ್ಲಿ ಮಹಜರು ಮುಖೇನ ಸ್ವಾಧೀನಪಡೆಸಿಕೊಳ್ಳಲಾಗಿದೆ. ಮರಳಿನ ಒಟ್ಟು ಮೌಲ್ಯ 10 ಸಾವಿರ ಎಂದು ಅಂದಾಜಿಸಲಾಗಿದ್ದು, ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next