Advertisement
ಬಂದರಿನ ಹೊರ ಆವರಣದಲ್ಲಿ ಸುಮಾರು 70ಕ್ಕೂ ಅಧಿಕ ಒಣಮೀನು ಮಾರಾಟದ ಶೆಡ್ಗಳಿವೆ, ಇವರು ನಿತ್ಯ ಗೋಲಯಿ, ಅಡೆಮೀನು, ಕಲ್ಲರ್, ನಂಗ್ ಮುಂತಾದ ಮೀನುಗಳನ್ನು ಖರೀದಿಸಿ ಶೆಡ್ನ ಬಳಿ ಬಿಸಿಲಿಗೆ ಒಣಗಿಸಲು ಹಾಕುತ್ತಾರೆ. 4-5 ದಿನ ಒಣಗಿದ ಆನಂತರ ಗೋಣಿಚೀಲದಲ್ಲಿ ಪ್ಯಾಕ್ ಮಾಡಿ ಚಿಲ್ಲರೆ ಮಾರಾಟಗಾರರಿಗೆ ಮಾರಾಟ ಮಾಡಲಾಗುತ್ತದೆ. ಆದರೆ, ಇದರ ಪಕ್ಕದಲ್ಲೇ ಕೆಲವರು ರಾತ್ರಿವೇಳೆ ಕದ್ದು ಮುಚ್ಚಿ ತ್ಯಾಜ್ಯ ರಾಶಿ ತಂದು ಹಾಕುತ್ತಿರುವುದು ಸಮಸ್ಯೆಗೆ ಕಾರಣವಾಗಿದೆ. ಈ ತ್ಯಾಜ್ಯರಾಶಿಯ ಪಕ್ಕ ಇರುವ 10 ಶೆಡ್ಗಳ ಮಹಿಳೆಯರಿಗೆ ನೇರ ಹೊಡೆತ ಉಂಟಾಗಿದೆ. ಈ ಭಾಗದಲ್ಲಿ ಒಣಗಿಸಿದ ಮೀನಿಗೆ ಬೇಡಿಕೆ ಇಲ್ಲದೆ ನಷ್ಟ ಉಂಟಾಗುತ್ತಿದೆ ಎಂದು ಮಹಿಳೆಯರು ಅಳಲು ತೋಡಿಕೊಂಡಿದ್ದಾರೆ.
ಹಲವು ವರ್ಷಗಳಿಂದ ಈ ಜಾಗದಲ್ಲಿ ಕಸ ಎಸೆಯುತ್ತಾರೆ. ದೂರು ನೀಡಿದರೂ, ತೆರವು ಮಾಡಿದರೂ ಕಸ ಎಸೆಯುವುದು ನಿಂತಿಲ್ಲ. ಸಿಸಿ ಕೆಮರಾ ಅಳವಡಿಸಿದರೂ ಹೆಚ್ಚಿನವರು ಹೆಲ್ಮೆಟ್ ಹಾಕಿ ಬಂದು ಕಸ ಎಸೆಯುತ್ತಾರೆ. ಹೀಗಾಗಿ ಪತ್ತೆ ಹಚ್ಚುವುದು ಕಷ್ಟವಾಗಿದೆ. ಇಲಾಖೆ ತತ್ಕ್ಷಣ ಇಲ್ಲಿ ತ್ಯಾಜ್ಯ ಎಸೆಯದಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕಾಗಿದೆ.
– ಸುಮಿತ್ರಾ ಕುಂದರ್, ಅಧ್ಯಕ್ಷರು, ಮಹಿಳಾ ಮೀನುಗಾರರ ಸಂಘ
Related Articles
ಕಸ ಎಸೆಯುವ ಪ್ರದೇಶಕ್ಕೆ ನೆಟ್, ಸಿಸಿ ಕೆಮರಾ ಅವಳಡಿಸಿದರೂ ಜನರು ಕದ್ದು ಮುಚ್ಚಿ ತ್ಯಾಜ್ಯ ಸುರಿಯುತ್ತಿರುವುದು ತಲೆನೋವಾಗಿ ಪರಿಣಮಿಸಿದೆ. ಸದ್ಯ ಇಲ್ಲಿ ಅಳವಡಿಸಿದ ಸಿಸಿ ಕೆಮರಾ ಕೆಟ್ಟು ಹೋಗಿದ್ದು ದುರಸ್ತಿ ಪಡಿಸಲಾಗುವುದು. ತ್ಯಾಜ್ಯ ರಾಶಿ ತತ್ಕ್ಷಣದಲ್ಲಿ ತೆರವು ಗೊಳಿಸುವ ವ್ಯವಸ್ಥೆ ಮಾಡಲಾಗುವುದು, ಮುಂದೆ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು.
-ಅಂತೋನಿ, ಬಂದರು ಅಧಿಕಾರಿ, ಬಂದರು ಇಲಾಖೆ, ಮಲ್ಪೆ
Advertisement
ಅನಾಗರಿಕ ಪ್ರವೃತ್ತಿಯ ಜನರುನಾವು ಬೆಳಗ್ಗೆ 5ರಿಂದ ಸಂಜೆ 7ರವರೆಗೆ ಇಲ್ಲೇ ಇರುತ್ತೇವೆ. ಊಟ, ಚಹಾ ಎಲ್ಲವೂ ಇಲ್ಲೇ. ಇಲ್ಲಿ ಮನೆ, ಅಂಗಡಿಗಳ ತ್ಯಾಜ್ಯಗಳು, ಕೋಳಿ ತ್ಯಾಜ್ಯ, ಸತ್ತ ನಾಯಿ, ಬೆಕ್ಕುಗಳನ್ನು ರಸ್ತೆ ಬದಿಗಳಲ್ಲಿ ಎಸೆಯುತ್ತಿರುವ ಪರಿಣಾಮ ಸುತ್ತಮುತ್ತಲ ಪ್ರದೇಶ ದುರ್ವಾಸನೆ ಬೀರುತ್ತಿದೆ. ನಮ್ಮ ವ್ಯಾಪಾರಕ್ಕಂತೂ ದೊಡ್ಡ ಹೊಡೆತ ಬಿದ್ದಿದೆ ಎನ್ನುತ್ತಾರೆ ಒಣಮೀನು ವ್ಯಾಪಾರಿಗಳಾದ ಪುಷ್ಪ ಬಂಗೇರ, ಶಾಂತ ಕುಂದರ್, ಸುಮತಿ ಸಾಲ್ಯಾನ್, ಭಾರತಿ ಬಂಗೇರ, ಜಯಂತಿ ಕಾಂಚನ್, ಬೇಬಿ ಕಾಂಚನ್, ಜಲಜಾ ಅಮೀನ್, ರೇಖಾ ಕರ್ಕೇರ.