ಮಲ್ಪೆ: ಯಾಂತ್ರಿಕ ಮೀನುಗಾರಿಕೆಗೆ ಜೂ. 1ರಿಂದ ಜು. 31ರ ವರೆಗೆ ಕಡ್ಡಾಯವಾಗಿ ರಜೆ. ಕರಾವಳಿಗೆ ಮುಂಗಾರು ಕಾಲಿಡುತ್ತಿದ್ದಂತೆ ಪ್ರತಿವರ್ಷ ಕರಾವಳಿಯ ಮೀನುಗಾರಿಕೆ ಸ್ಥಗಿತಗೊಳ್ಳುತ್ತದೆ. ಈಗಾಗಲೇ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಪರ್ಸಿನ್, ತ್ರಿಸೆವೆಂಟಿ, ಸಣ್ಣಟ್ರಾಲ್‌ಬೋಟ್‌ಗಳು ಸೇರಿದಂತೆ ಈಗಾಗಲೇ ಶೇ. 50ರಷ್ಟು ದೋಣಿಗಳು ದಡ ಸೇರಿವೆೆ.
ಮೀನಿಗೆ ಧಾರಣೆ ಇಲ್ಲ
ಚಂಡಮಾರುತದಂತಹ ಪ್ರಕೃತಿ ವಿಕೋಪ ಈ ಬಾರಿ ಮೀನುಗಾರಿಕೆಗೆ ಬಾಧಿಸಿಲ್ಲ. ಋತು ಆರಂಭದಿಂದಲೂ ಎಲ್ಲ ಜಾತಿಯ ಮೀನುಗಳು ದೊರೆತಿವೆ. ಬಂಗುಡೆ, ಬೂತಾಯಿ ಯಥೇಚ್ಚವಾಗಿ ಬಂದಿವೆೆ. ಆದರೆ ದೊರೆತ ಮೀನಿಗೆ ಸರಿಯಾದ ದರ ಸಿಗದೆ ನಷ್ಟ ಉಂಟಾಗಿದೆ ಎನ್ನುತ್ತಾರೆ ಮೀನುಗಾರರು.
ಗೋವಾ, ತಮಿಳುನಾಡು ಕೇರಳದಲ್ಲಿ ಹೇರಳ ಪ್ರಮಾಣದಲ್ಲಿ ಮೀನು ಇರುವುದರಿಂದ ಇಲ್ಲಿನ ಮೀನಿಗೆ ಬೇಡಿಕೆ ಕಡಿಮೆಯಾಗಿದೆ. ಇತ್ತ ಕಟ್ಟಿಂಗ್‌ಗೆ ಬೇಕಾಗುವ ರಾಣಿ ಮೀನು, ಸಿಲ್ವರ್ ಫಿಶ್ ನಿರೀಕ್ಷೆಯಂತೆ ಬಂದಿಲ್ಲ. ಅಲ್ಪ ಸ್ವಲ್ವ ಬಂದ ಕಟ್ಟಿಂಗ್ ಮೀನಿಗೆ ದರ ಕಡಿಮೆಯಾದ ಕಾರಣ ಬೋಟ್‌ನವರಿಗೆ ನಷ್ಟವಾಗುತ್ತಿದೆ ಎನ್ನುತ್ತಾರೆ ಕನ್ನಿ ಮೀನುಗಾರ ಸಂಘದ ಅಧ್ಯಕ್ಷ ದಯಾಕರ ವಿ. ಸುವರ್ಣ.
ಹೊರೆಯಾದ ಡಿಸೇಲ್ ದರ
ಡಿಸೇಲ್ ದರದ ಏರಿಕೆ ಮೀನುಗಾರರಿಗೆ ಹೊರೆಯಾಗಿ ಪರಿಣಮಿಸಿದೆ. ಸಾಕಷ್ಟು ಪ್ರಮಾಣದಲ್ಲಿ ಮೀನು ಹಿಡಿದು ತಂದರೂ ಕನಿಷ್ಠ ಸಂಪಾದನೆ ಇಲ್ಲದೆ ನಷ್ಟ ಉಂಟಾಗುತ್ತದೆ. ಡಿಸೇಲ್ ದರ ಏರಿಕೆಯಿಂದಾಗಿ ಇದೀಗ ಎಲ್ಲ ವರ್ಗದ ಬೋಟ್‌ಗಳು 4ರಿಂದ 6 ಲಕ್ಷ ರೂ. ಹೆಚ್ಚುವರಿ ಡಿಸೇಲ್‌ಗಾಗಿ ಬಳಸಬೇಕಾದ ಅನಿವಾರ್ಯತೆ ಇದೆ.