Advertisement
ಮಲ್ಪೆ ಸೀ ವಾಕ್ ಬಳಿ ಮಳೆಗಾಲ ಮತ್ತು ಬೇಸಗೆ ಎರಡು ಅವಧಿಯಲ್ಲಿ ಕಾಣ ಸಿಗುತ್ತಾರೆ. ಗಾಳದಿಂದ ಮೀನು ಭೇಟೆ ವೃತ್ತಿ ನಿರತ ಬಡ ಮೀನುಗಾರರಿಗೆ ಜೀವನಾಧಾರವಾಗಿದ್ದರೆ, ಪ್ರವೃತ್ತಿಯನ್ನಾಗಿಸಿ ಕೊಂಡ ಸಿರಿವಂತರಿಗೆ ಮನ ಸಂತೋಷದ ದಾರಿಯೂ ಹೌದು. ಒಂದು ಸಣ್ಣ ಮೀನು ಅವರ ಗಾಳಕ್ಕೆ ಸಿಕ್ಕಿಬಿದ್ದರೆ ಏನೋ ಒಂಥರ ಖುಷಿಯೋ ಖುಷಿ.
ಸಮುದ್ರ ತೀರದತ್ತ ಬಂದು ನುರಿತ ಮೀನುಗಾರರಂತೆ ನೀರಿಗೆ ಗಾಳ ಎಸೆದು ಸಾಮಾನ್ಯ ಮೀನುಗಾರರಂತೆ ಈ ಸಂದರ್ಭ
ಪರಿವರ್ತಿತರಾಗುತ್ತಾರೆ. ಇಲ್ಲಿ ಹಣವಂತರಿಗೆ ಮೀನು ಸಂಪಾದನೆ ನಗಣ್ಯವಾಗಿದ್ದರೂ, ಕೇವಲ ಖುಷಿಗಾಗಿ ಮಾತ್ರ. ಆಧುನಿಕ ವ್ಯವಸ್ಥೆ
ನಮ್ಮ ಕರಾವಳಿ ಸಮುದ್ರದ ತೀರ ಪ್ರದೇಶದ ಉಪ್ಪು ನೀರಿನಲ್ಲಿ ಅಥವಾ ಅಳಿವೆ ಬಾಗಿಲ ಪರಿಸರದಲ್ಲಿ ಹೆಚ್ಚಾಗಿ ಮೀನಿಗೆ ಗಾಳ ಹಾಕುವುದು ಕಂಡು ಬರುತ್ತದೆ. ಗಾಳದಲ್ಲಿ ಆಧುನೀಕರಣ ಪರಿಕರಗಳು ಬಂದ ಮೇಲೆ ಹೆಚ್ಚು ಜನರು ಪಾಲ್ಗೊಳ್ಳುತ್ತಾರೆ. ಮಳೆಗಾಲದಲ್ಲಿ ಕೆಂಬೆರಿ, ಕಲ್ಲರ್ ಕಂಡಿಗೆ, ಏರಿ, ತೊರಕೆ ಪುಲ್ಲಡಿ ಚಿಕ್ಕ ತೇಡೆ, ಬೇಸಗೆಯಲ್ಲಿ ದೊಡ್ಡ ಗಾತ್ರದ ಕೆಂಬರಿ, ಕುಲೇಜ್, ಕೊಕ್ಕರ್, ಮುರುಮೀನು ಹೆಚ್ಚಾಗಿ ಸಿಗುತ್ತದೆ.
– ದಯಾನಂದ ಕೋಟ್ಯಾನ್, ಮಲ್ಪೆ