Advertisement

ರತ್ನಗಿರಿಯಲ್ಲಿ ಮಲ್ಪೆಯ ಬೋಟು ಮುಳುಗಡೆ : 7 ಮಂದಿ ಮೀನುಗಾರರ ರಕ್ಷಣೆ, 70 ಲಕ್ಷ ರೂ. ನಷ್ಟ

01:41 AM Apr 19, 2022 | Team Udayavani |

ಮಲ್ಪೆ: ಇಲ್ಲಿನ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಆಳಸಮುದ್ರ ಬೋಟು ಮಹಾರಾಷ್ಟ್ರದ ರತ್ನಗಿರಿ ಸಮೀಪ ಮುಳುಗಡೆಗೊಂಡಿದ್ದು ಅದರಲ್ಲಿದ್ದ 7 ಮೀನುಗಾರರನ್ನು ರಕ್ಷಿಸಲಾಗಿದೆ.

Advertisement

ಕಡೆಕಾರು ಪಡುಕರೆ ಭಗವಾನ್‌ದಾಸ್‌ ಕೋಟ್ಯಾನ್‌ ಅವರಿಗೆ ಸೇರಿದ ದಿವ್ಯಶಕ್ತಿ ಆಳಸಮುದ್ರ ಬೋಟ್‌ ಎ. 10ರಂದು ಮಲ್ಪೆಯಿಂದ ತೆರಳಿತ್ತು. ಎ. 13ರಂದು ರಾತ್ರಿ 9.30ರ ವೇಳೆಗೆ ರತ್ನಗಿರಿಯ ಸಮೀಪ ಮೀನುಗಾರಿಕೆ ನಡೆಸುತ್ತಿರುವಾಗ ಗಟ್ಟಿಯಾದ ವಸ್ತು ಬೋಟಿನ ತಳಭಾಗಕ್ಕೆ ತಾಗಿದ್ದು ಪರಿಣಾಮ ಬೋಟಿನ ಒಳಕ್ಕೆ ನೀರು ಬರಲಾರಂಭಿಸಿತು. ಸಮೀಪದಲ್ಲಿದ್ದ ನೀಲಾದ್ರಿ ಮತ್ತು ಸುವರ್ಣ ಛಾಯ ಬೋಟಿನವರಿಗೆ ಮಾಹಿತಿ ನೀಡಿದಾಗ, ತತ್‌ಕ್ಷಣ ಧಾವಿಸಿ ಬಂದ ಅವರು ಬೋಟಿನಲ್ಲಿದ್ದ ದೇವೇಂದ್ರ, ಸತೀಶ, ಮಾದಪ್ಪ, ನವೀನ, ಮಹೇಂದ್ರ, ಚಂದ್ರಕಾಂತ ಮತ್ತು ರವಿ ಅವರನ್ನು ರಕ್ಷಿಸಿದರು.

ಇದನ್ನೂ ಓದಿ:ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ: ಸೆಕ್ಷನ್‌ 5ರ ಜಾರಿಗೆ ಅನುಮತಿಸಿ ಹೈಕೋರ್ಟ್‌ ಆದೇಶ

ದಿವ್ಯಶಕ್ತಿ ಬೋಟ್‌ ಸಂಪೂರ್ಣ ಮುಳುಗಡೆಗೊಂಡಿದ್ದು ಅದರಲ್ಲಿ ಡೀಸೆಲ್‌, ಮೀನು ಹಾಗೂ ಇನ್ನಿತರ ಪರಿಕರಗಳು ಸಮುದ್ರ ಪಾಲಾಗಿವೆ. ಸುಮಾರು 70 ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next