Advertisement
ಹಾಸನ ಜಿಲ್ಲೆಯ ಬೇಲೂರು ನಿವಾಸಿ ಗಿರೀಶ್ (26) ಮೃತಪಟ್ಟವರು. ಸಂತೋಷ್ (24) ಮತ್ತು ಹರೀಶ್ (30) ಅವರನ್ನು ರಕ್ಷಿಸಲಾಗಿದ್ದು, ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Related Articles
Advertisement
ಪ್ರಸ್ತುತ ಸಮಯ ಸಮುದ್ರದ ಅಲೆಗಳ ಆಬ್ಬರವೂ ತುಸು ಜಾಸ್ತಿಯಾಗಿದೆ. ಬೀಚ್‌ನ ಸಮುದ್ರ ತೀರದ ಅಡಿಯಲ್ಲಿ ಅಲ್ಲಲ್ಲಿ ಮಾರಿಯ ನೀರಿನ ಸೆಳೆತ (ತೋಡಿನ ಆಕಾರದಲ್ಲಿರುವ ನೀರಿನ ಸೆಳೆತ) ಇರುತ್ತದೆ. ಇದರಲ್ಲಿ ಸಿಲುಕಿಕೊಂಡವರಿಗೆ ದಡ ಸೇರಲು ಅಸಾಧ್ಯವಾಗುತ್ತದೆ. ಇದರಲ್ಲಿ ಸಿಕ್ಕಿಹಾಕಿ ಬಹುತೇಕ ಮಂದಿ ಮೇಲೆ ಬಾರದೆ ಸಮುದ್ರ ಪಾಲಾಗುವ ಪ್ರಸಂಗ ಎದುರಾಗುತ್ತದೆ. ಇದು ಹೆಚ್ಚಿನ ಊರಿನವರಿಗೇ ಗೊತ್ತಿರುವುದಿಲ್ಲ. ಅಂತಹದರಲ್ಲಿ ಅನ್ಯ ಜಿಲ್ಲೆ/ರಾಜ್ಯದ ಪ್ರವಾಸಿಗರು ಸಮುದ್ರಕ್ಕೆ ಇಳಿಯುವಾಗ ಎಚ್ಚರ ವಹಿಸಬೇಕಾಗಿದೆ ಎನ್ನುತ್ತಾರೆ ಈಶ್ವರ್ ಮಲ್ಪೆ ಅವರು.
ಪ್ರವಾಸಿಗರ ಜೀವಕ್ಕೆ ರಕ್ಷಣೆ ಇಲ್ಲ:
ಮಲ್ಪೆ ಬೀಚ್‌ನಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರವಾಸಿಗರರಿಗೆ ಸೂಕ್ತ ರಕ್ಷಣೆಯೇ ಇಲ್ಲ. ಸಮುದ್ರ ಪಾಲಾಗುವ ಪ್ರವಾಸಿಗರ ಜೀವವನ್ನು ರಕ್ಷಣೆ ಮಾಡಲು ಜೀವರಕ್ಷಕರ ತಂಡ ಕಾರ್ಯಾಚರಣೆಯಲ್ಲಿ ಇಲ್ಲ ಎಂದು ಸ್ಥಳೀಯರಾದ ಅನಿಲ್ ಬೀಚ್ ಆರೋಪಿಸಿದ್ದಾರೆ. ಪಾರ್ಕಿಂಗ್ ಚಾರ್ಚ್ ಸೇರಿದಂತೆ ಇತರ ಶುಲ್ಕವನ್ನು ವಸೂಲು ಮಾಡುತ್ತಾರೆ. ಆದರೆ ಪ್ರವಾಸಿಗರ ಜೀವಕ್ಕೆ ಇಲ್ಲಿ ಸೂಕ್ತ ರಕ್ಷಣೆ ನೀಡುತ್ತಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿ ಮತ್ತು ಸಂಬಂಧಪಟ್ಟ ಆಡಳಿತ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಜನರು ಆಗ್ರಹಿಸಿದ್ದಾರೆ.