Advertisement
ಉಡುಪಿ ಭಾಗದಲ್ಲಿ ಪ್ರವಾಸಿಗರ ಹಾಟ್‌ಸ್ಪಾಟ್ ಆಗಿರುವ ಮಲ್ಪೆ ಬೀಚ್ ಕಡೆಗೆ ರವಿವಾರ ಬೆಳಗ್ಗಿನಿಂದಲೇ ಪ್ರವಾಸಿಗರ ವಾಹನಗಳು ಆಗಮಿಸತೊಡಗಿದ್ದವು. ಶಾಲೆಗಳು ಈಗಾಗಲೇ ಆರಂಭವಾಗಿದ್ದರೂ ಎಲ್ಲ ಶಾಲೆಗಳು ಆರಂಭವಾಗುವುದು ಜೂ. 1ರಿಂದಲೇ. ಹೀಗಾಗಿ ಹೆಚ್ಚಿನ ಪೋಷಕರು ಮಕ್ಕಳನ್ನು ಬೀಚ್ ಕರೆದುಕೊಂಡು ಬಂದಿದ್ದುದು ಕಂಡು ಬಂದಿದೆ.
ಸೀವಾಕ್ ಮತ್ತು ಪಡುಕರೆ ಬೀಚ್‌ನಲ್ಲೂ ಜನಸಾಗರ ಕಂಡುಬಂದಿದ್ದು, ಅಲ್ಲಲ್ಲಿ ವಾಹನ ದಟ್ಟಣೆ ಹೆಚ್ಚಾಗಿತ್ತು. ಮೇ 16ರಿಂದ ಸೆ. 15ರ ವರೆಗೆ ಸೈಂಟ್ ಮೇರೀಸ್ ದ್ವೀಪ ಯಾನ ಮತ್ತು ಬೀಚ್‌ನಲ್ಲಿ ಜಲಕ್ರೀಡೆಗಳನ್ನು ಸ್ಥಗಿತಗೊಳಿಸಿದ್ದರಿಂದ ಈ ಸಂತೋಷ ಸಿಗುತ್ತಿಲ್ಲ. ಕೇವಲ ಬೀಚ್‌ಗಷ್ಟೇ ಬಂದು ಹೋಗುತ್ತಿದ್ದಾರೆ. ಅಪಾಯ ಸಂಭವಿಸದಂತೆ ಎಚ್ಚರ ವಹಿಸಲಾಗುತ್ತಿದೆ. ಮುಂದೆ ಮಳೆ ಆರಂಭವಾಗಿ ಕಡಲು ಪ್ರಕ್ಷುಬ್ಧಗೊಂಡ ತತ್‌ಕ್ಷಣ ಬೀಚ್ ಉದ್ದಕ್ಕೂ ನೆಟ್ ಅಳವಡಿಸಿ ಯಾರೂ ನೀರಿಗಿಳಿಯದಂತೆ ನಿರ್ಬಂಧಿಸಲಾಗುತ್ತದೆ ಎಂದು ಬೀಚ್ ಅಭಿವೃದ್ಧಿ ಸಮಿತಿಯ ನಿರ್ವಾಹಕ ಸುದೇಶ್ ಶೆಟ್ಟಿ ತಿಳಿಸಿದ್ದಾರೆ.
Related Articles
ಪಣಂಬೂರು: ರವಿವಾರ ಉತ್ತಮ ಬಿಸಿಲಿದ್ದು, ಪಣಂಬೂರು ಬೀಚ್‌ನಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಕಂಡುಬಂದರು. ಹೊರ ಜಿಲ್ಲೆ, ಹೊರ ರಾಜ್ಯದ ಜನತೆ ದೇವಸ್ಥಾನಗಳ ಭೇಟಿಯ ಬಳಿಕ ಪ್ರವಾಸಿ ತಾಣವಾದ ಪಣಂಬೂರು ಬೀಚ್‌ಗೆ ಆಗಮಿಸಿ ನೀರಾಟವಾಡಿ ಸಂಭ್ರಮಿಸಿದರು. ಸೆಲ್ಫಿ ಕ್ಲಿಕ್ಕಿಸಿಕೊಂಡರು. ಇಲ್ಲಿನ ಖಾದ್ಯ ಸ್ಟಾಲ್‌ಗಳಲ್ಲಿ ಮಂಗಳೂರು ಖಾದ್ಯಗಳ ರುಚಿ ಅನುಭವಿಸಿದರು.
Advertisement