Advertisement

ಅಬ್ಬರಿಸುತ್ತಿರುವ ಕಡಲು: ನೀರಿಗಿಳಿಯುವುದು ನಿಷೇಧ ‌

11:45 AM May 10, 2022 | Team Udayavani |

ಮಲ್ಪೆ: ಸಮುದ್ರದಲ್ಲಿ ಚಂಡಮಾರುತದಿಂದಾಗಿ ಕಡಲು ಪ್ರಕ್ಷುಬ್ಧಗೊಂಡು ಅಲೆಗಳ ಅಬ್ಬರ ಹೆಚ್ಚಾಗಿದ್ದು ಮುಂಜಾಗೃತ ಕ್ರಮವಾಗಿ ಮಲ್ಪೆ ಬೀಚ್‌ನಲ್ಲಿ ಆರಂಭಗೊಂಡಿರುವ ತೇಲುವ ಸೇತುವೆ ಸೇರಿದಂತೆ ಜಲಸಾಹಸ ಕ್ರೀಡೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

Advertisement

ರವಿವಾರ ಮಧ್ಯಾಹ್ನದ ಬಳಿಕ ಗಾಳಿಯ ವೇಗ ತೀವ್ರತೆಯನ್ನು ಪಡೆದುಕೊಂಡಿದ್ದು ಸೋಮ ವಾರವೂ ಅಲೆಯ ಆಬ್ಬರ ಹೆಚ್ಚಿದ್ದರಿಂದ ಬೀಚ್‌ನಲ್ಲಿ. ಪ್ಯಾರಾ ಸೈಲಿಂಗ್‌, ಬನಾನಾ ರ್ಯಾಪ್ಟಿಂಗ್‌, ಬಂಪಿ ರೈಡ್‌, ಝೋರ್ಬಿಂಗ್‌, ಪವರ್‌ ಬೈಕ್‌, ಕ್ರಿಕೆಟ್‌, ಶೂಟಿಂಗ್‌ ಸೇರಿದಂತೆ ಇನ್ನುಳಿದ ಯಾವುದೇ ಜಲಸಾಹಸ ಕ್ರೀಡೆಗಳು ನಡೆದಿಲ್ಲ. ಪ್ರವಾಸಿಗರು ಹಾಗೂ ಸಾರ್ವಜನಿಕರನ್ನು ನೀರಿಗೆ ಇಳಿಯದಂತೆ ಇಲ್ಲಿನ ಜೀವರಕ್ಷಕ ತಂಡದವರು ಬೀಚ್‌ ಉದ್ದಕ್ಕೂ ನಿಗಾ ವಹಿಸಿದ್ದಾರೆ.

ಸೈಕ್ಲೋನ್‌ ಪ್ರಭಾವ ಕಡಿಮೆಯಾದ ಮೇಲೆ ಬೋಟ್‌ ಯಾನ ಮತ್ತು ಜಲಸಾಹಸ ಕ್ರೀಡೆಗಳು ಆರಂಭಗೊಳ್ಳಲಿವೆ ಎನ್ನಲಾಗಿದೆ.

ತೆಗೆದಿರಿಸಿದ ಸೆಂಟರ್‌ ಲಾಕ್‌’

ಮಲ್ಪೆ ಬೀಚ್‌ನಲ್ಲಿ ಆರಂಭಗೊಂಡಿರುವ ತೇಲುವ ಸೇತುವೆಯ ತುಂಡಾಗಿದೆ ಹಬ್ಬಿರುವ ವದಂತಿಗೆ ಸ್ಪಷ್ಟನೆ ನೀಡಿದ ಪಾಲುದಾರರೋರ್ವರಾದ ಸುದೇಶ್‌ ಶೆಟ್ಟಿ ಅವರು ಸುರಕ್ಷತೆಯ ದೃಷ್ಟಿಯಿಂದ ರವಿವಾರ ಸಂಜೆ ಸೇತುವೆ ಸೆಂಟರ್‌ಲಾಕ್‌ ವ್ಯವಸ್ಥೆಯನ್ನು ತೆಗೆದಿರಿಸಲಾಗಿದೆ.

Advertisement

ಇದರಿಂದ ಸೇತುವೆಯ ಕೆಲವು ಬ್ಲಾಕ್‌ ಗಳು ಸಮುದ್ರದಲ್ಲಿ ತೇಲುತ್ತಿದ್ದವು. ಆದರೆ ಇದನ್ನು ಕೆಲವರು ತಪ್ಪಾಗಿ ಗ್ರಹಿಸಿಕೊಂಡು ವದಂತಿಗಳನ್ನು ಹಬ್ಬಿಸುತ್ತಿದ್ದಾರೆ. ಸೇತುವೆ ಸಂಪೂರ್ಣ ಸುರಕ್ಷಿತವಾಗಿದ್ದು ಯಾವುದೇ ತೊಂದರೆಗಳಾಗಿಲ್ಲ. ಸೇತುವೆಗೆ ಯಾವುದೇ ಹಾನಿಯಾಗಿಲ್ಲ. ಪ್ರವಾಸಿಗರು ಮತ್ತು ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದೆಂದು ಸ್ಪಷ್ಟಪಡಿಸಿದ್ದಾರೆ.

ಈಗ ನೀರಿಗಿಳಿಯುವುದು ಸುರಕ್ಷಿತ ವಲ್ಲ

ಚಂಡಮಾರುತ ಹಿನ್ನೆಲೆಯಲ್ಲಿ ಗಾಳಿಯ ತೀವ್ರತೆಯಿಂದ ಬಾರಿ ಗಾತ್ರದ ದೈತ್ಯಅಲೆಗಳು ಏಳುತ್ತಿದ್ದು ಪ್ರವಾಸಿಗರು ಈಗ ನೀರಿಗೆ ಇಳಿಯಯವು ಸುರಕ್ಷಿತಲ್ಲ. ಕಡಲಿಗೆ ಇಳಿಯದಂತೆ ಇಲ್ಲಿನ ಲೈಫ್ಗಾರ್ಡ್‌ ಹೇಳಿದರೂ ಪ್ರವಾಸಿಗರು ಮಾತನ್ನು ಧಿಕ್ಕರಿಸುತ್ತಾರೆ. ರವಿವಾರ ನೀರಿನ ಸೆಳೆತಕ್ಕೆ ಕೊಚ್ಚಿಹೋಗುತ್ತಿದ್ದ ಮೂವರ ರಕ್ಷಣೆಯನ್ನು ಇಲ್ಲಿನ ಜೀವರಕ್ಷಕಕರು ಮಾಡಿದ್ದಾರೆ. ಚಂಡಮಾರುತ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಈಗಾಗಲೇ ನಿಷೇಧ ಹೇರಿದ್ದಾರೆ. –ಪಾಂಡುರಂಗ ಮಲ್ಪೆ, ಅಧ್ಯಕ್ಷರು, ಬೀಚ್‌ ಅಭಿವೃದ್ಧಿ ಸಮಿತಿ

Advertisement

Udayavani is now on Telegram. Click here to join our channel and stay updated with the latest news.

Next