Advertisement
ಬಳ್ಳಾರಿ ಮತ್ತು ಹೊಸಪೇಟೆ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಅಪೌಷ್ಟಿಕತೆಯಿಂದ ಮಕ್ಕಳು ಸಾವನ್ನಪ್ಪುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ೩೫೮ ಜನ ಮಕ್ಕಳು ಒಂದು ಜಿಲ್ಲೆಯಲ್ಲಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಅನಿಮಿಯಾ , ಹುಟ್ಟುವ ಮಗುವಿನಲ್ಲಿ ಕಡಿಮೆ ತೂಕ ಮಕ್ಕಳ ಸಾವಿಗೆ ಕಾರಣವಾಗಿದೆ. ರಾಯಚೂರು, ಬಳ್ಳಾರಿ, ಹೊಸ ಪೇಟೆ , ಬೀದರ್ , ಕಲಬುರಗಿ ಸೇರಿ ಆರೇಳು ಜಿಲ್ಲೆಗಳನ್ನು ಪತ್ತೆ ಮಾಡಿದ್ದು, ಎಂಎ ಆರ್, ಐಎಂಆರ್ ಕರ್ನಾಟಕದ್ದು ಇಡೀ ದೇಶದಲ್ಲಿ ಚೆನ್ನಾಗಿದೆ. ಪ್ಯಾರಾಮೀಟರ್ಸ್ ಕಡಿಮೆ ಇರುವುದರಿಂದಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜೊತೆ ವಿಷಯ ವಿನಿಮಯ ಮಾಡಿಕೊಂಡಿದ್ದೇವೆ ಎಂದರು.
Related Articles
Advertisement
ನೈಟ್ ಕರ್ಫ್ಯೂ ಹೇರಿರುವುದು ಸರಕಾರಕ್ಕೆ, ನಮಗೆ ಸಂತೋಷ ತರುವುದಿಲ್ಲ ಜನರ ಒಳಿತಿಗಾಗಿ ತಾಂತ್ರಿಕ ಸಮಿತಿಯ ಸಲಹೆಯ ಮೇರೆಗೆ ಈ ನಿರ್ಧಾರ ಮಾಡಿದ್ದೇವೆ. ಎಲ್ಲರೂ ಸಹಕರಿಸಿ, ಸಮಸ್ತ ಕರ್ನಾಟಕದ ಜನತೆಯ ಸುರಕ್ಷತೆಯ ನಿಟ್ಟಿನಲ್ಲಿ 10 ದಿನಕ್ಕೆ ಮಾಡಿದ್ದೇವೆ.10 ರಿಂದ 15 ದಿನದ ಸೈಕಲ್ ಇದಾಗಿದ್ದು , ಒಂದು ಸೈಕಲ್ ನೋಡಿ ಎಲ್ಲವನ್ನೂ ನೋಡಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದರು.
ಸೋಂಕಿನ ಸಂಖ್ಯೆ ಹೆಚ್ಚಾದಾಗ ಸ್ವಾಭಾವಿಕವಾಗಿ, ಮೂಲಭೂತ ಸೌಕರ್ಯಗಳ ಮೇಲೆ, ಆಸ್ಪತ್ರೆಗಳ ಮೇಲೆ ಒತ್ತಡ ಬೀರುತ್ತದೆ. ಇದನ್ನು ತಪ್ಪಿಸಬೇಕು ಎಂದರು.