Advertisement

ಕಲ್ಯಾಣ ಕರ್ನಾಟಕದಲ್ಲೇ ಅಪೌಷ್ಟಿಕತೆ ಅತೀ ಹೆಚ್ಚು!

10:03 AM Dec 18, 2019 | Team Udayavani |

ಬೆಂಗಳೂರು: ಐದು ವರ್ಷದೊಳಗಿನ ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚಿಸಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದರೂ ಪ್ರಯೋಜನವಾಗಿಲ್ಲ ಎಂಬ ಆಘಾತಕಾರಿ ಅಂಶ ಬಯಲಾಗಿದೆ. ರಾಜ್ಯದಲ್ಲಿ 5.58 ಲಕ್ಷ ಮಕ್ಕಳು ವಯಸ್ಸಿಗೆ ತಕ್ಕ ತೂಕ ಮತ್ತು ಎತ್ತರ ಇಲ್ಲದೆ ಅಪೌಷ್ಟಿಕತೆಯಿಂದ ಬಳಲುತ್ತಿದ್ದು, ಇವರಲ್ಲಿ “ಕಲ್ಯಾಣ ಕರ್ನಾಟಕ’ದ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ!

Advertisement

ಕಳೆದ ಅಕ್ಟೋಬರ್‌ನಲ್ಲಿ ರಾಜ್ಯದ 30 ಜಿಲ್ಲೆಗಳಲ್ಲೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ 37.91 ಲಕ್ಷ ಮಕ್ಕಳನ್ನು ಪರೀಕ್ಷಿಸಿದೆ. ಇವರಲ್ಲಿ 5.46 ಲಕ್ಷ ಮಕ್ಕಳು, ಸಾಧಾರಣ ಅಪೌಷ್ಟಿಕತೆ, 11,462 ಮಕ್ಕಳು ತೀವ್ರವಾದ ಅಪೌಷ್ಟಿಕತೆ ಎದುರಿಸುತ್ತಿದ್ದಾರೆ. ಒಟ್ಟಾರೆ ಶೇ. 14.72ರಷ್ಟು ಮಕ್ಕಳು ಈ ಪಿಡುಗಿಗೆ ಒಳಗಾಗಿದ್ದಾರೆ. ಒಟ್ಟಾರೆ ಸಂಖ್ಯೆಯ ಲೆಕ್ಕಾಚಾರದಲ್ಲಿ ಬೆಳಗಾವಿ, ಬಳ್ಳಾರಿ ಜಿಲ್ಲೆಗಳು ಮೊದಲ ಎರಡು ಸ್ಥಾನಗಳಲ್ಲಿದ್ದರೆ, ಜಿಲ್ಲೆಯ ಜನಸಂಖ್ಯೆ ಪರಿಗಣಿಸಿ ಶೇಕಡಾವಾರು ಲೆಕ್ಕಾಚಾರದಲ್ಲಿ ಕೊಪ್ಪಳ ಮತ್ತು ಗದಗ ಜಿಲ್ಲೆಗಳು ಮೊದಲ ಎರಡು ಸ್ಥಾನಗಳಲ್ಲಿವೆ. ಬೆಂಗಳೂರು ಗ್ರಾ., ಬೀದರ್‌ ಮತ್ತು ದಕ್ಷಿಣ ಕನ್ನಡ ಕೊನೆಯ ಸ್ಥಾನದಲ್ಲಿವೆ.

ಮಾತೃವಂದನ ಯೋಜನೆ
ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚಳ ಮಾಡಬೇಕು ಎಂಬ ಉದ್ದೇಶದಿಂದಲೇ ಕೇಂದ್ರ ಸರಕಾರ ಪ್ರಧಾನಮಂತ್ರಿ ಮಾತೃವಂದನ ಯೋಜನೆ ಪರಿಚಯಿಸಿದೆ. ಇದರಲ್ಲಿ ಗರ್ಭಿಣಿ-ಬಾಣಂತಿಯರಿಗೆ ಆರೋಗ್ಯ ಮಟ್ಟ ಸುಧಾರಿಸುವ ಸಲುವಾಗಿ ನಗದು ರೂಪದಲ್ಲಿ ಪ್ರೋತ್ಸಾಹ ಧನ ನೀಡಲಾಗುತ್ತದೆ. ಗರ್ಭಿಣಿಯಾಗಿ 6 ತಿಂಗಳಲ್ಲಿ ಒಂದು ಸಾವಿರ ರೂ., 6 ತಿಂಗಳ ಅನಂತರ ಎರಡು ಸಾವಿರ ರೂ., ಮಗು ಮೊದಲನೇ ಹಂತದ ಚುಚ್ಚುಮದ್ದು ಪಡೆದ ಬಳಿಕ ಎರಡು ಸಾವಿರ ರೂ. ನೀಡಲಾಗುತ್ತದೆ.

ಅಪೌಷ್ಟಿಕತೆ ಮಾನದಂಡವೇನು?
ಆರು ತಿಂಗಳಿನಿಂದ 5 ವರ್ಷದ ಒಳಗಿನ ಮಕ್ಕಳ ತೂಕ ಮತ್ತು ಎತ್ತರದ ಆಧಾರದ ಮೇಲೆ ಅಪೌಷ್ಟಿಕತೆ ನಿರ್ಧಾರವಾಗುತ್ತದೆ. ಅಂದರೆ ವಯಸ್ಸಿಗೆ ತಕ್ಕ ತೂಕ, ಎತ್ತರ, ಎತ್ತರಕ್ಕೆ ತಕ್ಕ ತೂಕ, ತೋಳಿನ ಸುತ್ತಳತೆಯನ್ನು ಆಧಾರವಾಗಿಟ್ಟುಕೊಳ್ಳಲಾಗುತ್ತದೆ. ಹುಟ್ಟುವ ಗಂಡು ಮಗು 3.3-2.9 ಕೆ.ಜಿ., ಹೆಣ್ಣು ಮಗು 3.2-2.8 ಕೆ.ಜಿ. ಇದ್ದರೆ ಸಹಜ; 2.5 ಕೆ.ಜಿ. ಇದ್ದರೆ ಕಡಿಮೆ, 2.1 ಕೆ.ಜಿ. ಇದ್ದರೆ ಅತೀ ಕಡಿಮೆ ಎಂದು ಗುರುತಿಸಲಾಗುತ್ತದೆ. ಒಂದು ವೇಳೆ ವರ್ಷದ ಮಗು 6.9 ಕೆ.ಜಿ., ಮೂರು ವರ್ಷದ ಮಗು 10 ಕೆ.ಜಿ., ಐದು ವರ್ಷದ ಮಗು 12.4 ಕೆ.ಜಿ. ಇದ್ದರೆ ಆ ಮಗು ತೀವ್ರವಾಗಿ ಕಡಿಮೆ ತೂಕ ಹೊಂದಿದ್ದು, ಅತಿಯಾದ ಅಪೌಷ್ಟಿಕತೆಯಿಂದ ಬಳಲುತ್ತಿದೆ ಎಂದರ್ಥವಾಗಿದೆ.

ಕಲ್ಯಾಣ ಕರ್ನಾಟಕದ 6 ಜಿಲ್ಲೆಗಳಲ್ಲಿ ಕಡಿಮೆ ತೂಕ ಹೊಂದಿರುವ ಒಟ್ಟು ಮಕ್ಕಳು
ಬೆಂಗಳೂರು ಗ್ರಾ. 25 ,ದಕ್ಷಿಣ ಕನ್ನಡ 48, ಕೊಡಗು 56,  ಉಡುಪಿ 94,
ಹಾಸನ 104, ಕೋಲಾರ 104,ಚಾಮರಾಜನಗರ 107, ಮಂಡ್ಯ 140

Advertisement

ಮಂಜುನಾಥ ಗಂಗಾವತಿ

Advertisement

Udayavani is now on Telegram. Click here to join our channel and stay updated with the latest news.

Next