Advertisement

ಮಲ್ಯ ಆಸ್ತಿ ಜಪ್ತಿ: ನಿಲುವು ತಿಳಿಸಲು ಹೈ ಸೂಚನೆ

11:41 AM Apr 18, 2017 | Team Udayavani |

ಬೆಂಗಳೂರು: ಜಪ್ತಿ ಮಾಡಿದ ಮದ್ಯದ ದೊರೆ ವಿಜಯ್‌ ಮಲ್ಯ ಒಡೆತನದ ಯುನೈಟೆಡ್‌ ಬ್ರಿವರೀಸ್‌ ಹೋಲ್ಡಿಂಗ್‌ ಲಿಮಿಟೆಡ್‌(ಯುಬಿಎಚ್‌ಎಲ್‌)ನ ಷೇರುಗಳನ್ನು ಮಾರಾಟ ಮಾಡಿದ ಹಣವನ್ನು ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಖಾತೆಯಲ್ಲಿ ಠೇವಣಿ ಇಡುವ ಕುರಿತು ತಮ್ಮ ನಿಲುವು ಸೂಚಿಸುವಂತೆ ಜಾರಿ ನಿರ್ದೇಶನಾಲಯಕ್ಕೆ ಹೈಕೋರ್ಟ್‌ ಸೂಚಿಸಿದೆ.

Advertisement

ವಿಚಾರಣೆ ವೇಳೆ ಕಂಪನಿ ಪರ ಹಿರಿಯ ವಕೀಲ ಉದಯ್‌ ಹೊಳ್ಳ ವಾದ ಮಂಡಿಸಿ, ಯುಬಿಎಚ್‌ಎಲ್‌ನ ಷೇರುಗಳನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ. ಇವು ನಿಷ್ಕ್ರಿಯವಾಗಲು ಬಿಡಬಾರದು. ಈ ಷೇರುಗಳನ್ನು ಮಾರಾಟ ಮಾಡಿ  ಅದರಿಂದ ಬಂದ ಹಣವನ್ನು ಬ್ಯಾಂಕ್‌ಗಳ ಸಾಲ ಮರುಪಾವತಿಗೆ ಬಳಸಬಹುದು ಅಥವಾ ಹೈಕೋರ್ಟ್‌ನ ರಿಜಿಸ್ಟ್ರಾರ್‌ ಜನರಲ್‌ ಬಳಿಯಾದರೂ ಇರಿಸಬಹುದು ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಇಡಿ ಪರ ವಕೀಲ ಎಸ್‌.ಮಹೇಶ್‌, ಮುಂದಿನ ವಿಚಾರಣೆ ವೇಳೆ ಈ ಸಂಬಂಧ ಸೂಕ್ತ ಮಾಹಿತಿ ನೀಡಲಾಗುವುದು ಎಂದು ಪ್ರತಿಕ್ರಿಯಿಸಿದರು. ವಾದ ಆಲಿಸಿದ ದ್ವಿಸದಸ್ಯ ನ್ಯಾಯಪೀಠ, ವಿಚಾರಣೆಯನ್ನು ಏ.20ಕ್ಕೆ ಮುಂದೂಡಿತು.

ದೇಶದ ವಿವಿಧ ಬ್ಯಾಂಕ್‌ಗಳಿಂದ ಪಡೆದಿದ್ದ ಸಾಲ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ಉದ್ಯಮಿ ವಿಜಯ್‌ ಮಲ್ಯ ಒಡೆತನದ ಯುಬಿಎಚ್‌ಎಲ್‌ ಸಂಸ್ಥೆ ಮುಚ್ಚಲು ಹೈಕೋರ್ಟ್‌ನ ಏಕಸದಸ್ಯ ಪೀಠ ನೀಡಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಿರುವ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಎಸ್‌.ಕೆ.ಮುಖರ್ಜಿ ಹಾಗೂ ನ್ಯಾ.ಪಿ.ಎಸ್‌.ದಿನೇಶ್‌ ಕುಮಾರ್‌ ಅವರಿದ್ದ ದ್ವಿಸದಸ್ಯ ಪೀಠ ಈ ಸೂಚನೆ ನೀಡಿ ವಿಚಾರಣೆ ಮುಂದೂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next