Advertisement

‘INDIA’ ಒಕ್ಕೂಟದ ಜತೆ‌ ನಿರಂತರ ಸಂಪರ್ಕ, ನಿಗಾ ವಹಿಸಲು ತಂಡ ರಚನೆ: ಖರ್ಗೆ ಹೇಳಿಕೆ

01:21 PM Feb 21, 2024 | Team Udayavani |

ಕಲಬುರಗಿ: ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷವೂ ಸಿದ್ದತೆಗಳನ್ನು ನಡೆಸಿದ್ದು, ದಿನಕ್ಕೊಂದು ರಾಜ್ಯದ ಸಭೆ ನಡೆಸಿ ಪರಾಮರ್ಶಿಸಲಾಗುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

Advertisement

ತಮ್ಮ‌ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಭೆ ನಡೆಸುವುದರ ಜತೆಗೆ ಇಂಡಿಯಾ ಒಕ್ಕೂಟದದೊಂದಿಗೆ ನಿರಂತರ ಮಾತುಕತೆ ಹಾಗೂ ಬೆಳವಣಿಗೆ ಮೇಲೆ ನಿಗಾ ವಹಿಸಲು ತಂಡ ರಚಿಸಲಾಗಿದೆ.‌

ಮುಕುಲ್ ವಾಸ್ನಿಕ್ ನೇತೃತ್ವದಲ್ಲಿ ಆರು ಜನರ ತಂಡವು ಒಕ್ಕೂಟದ ಮುಖಂಡರೊಂದಿಗೆ ಚರ್ಚೆ ಹಾಗೂ ಸಮಾಲೋಚನೆಯಲ್ಲಿ ನಿರತವಾಗಿದೆ ಎಂದು ವಿವರಣೆ ನೀಡಿದರು. ‌

ಮೋದಿ ಸರ್ವಾಧಿಕಾರಣೆ ತೋರುತ್ತಿದ್ದು, ಮುಂದೆ ಮತ್ತೆ ಅಧಿಕಾರಕ್ಕೆ ಬಂದರೆ ಇದರ ಎಲ್ಲೇ ಮೀರುತ್ತದೆ. ಈಗಾಗಲೇ ಸ್ವಾಯತ್ತತೆ ಸಂಸ್ಥೆ ಗಳನ್ನು ದುರುಪಯೋಗ ಪಡೆಸಿಕೊಂಡಿರುವುದು ಎಲ್ಲರಿಗೂ ತಿಳಿದ ವಿಷಯ. ‌ಈ ಸಲ ನಾಲ್ಕು ನೂರಕ್ಕಿಂತ ಹೆಚ್ಚಿನ‌ ಸೀಟು ಗೆಲ್ಲುವುದಾಗಿ ಹೇಳುತ್ತಿದ್ದಾರೆ.‌ ಬೇರೆಯವರಿಗೆ ಏನು ಸಿಗೋದಿಲ್ಲ. 543 ಸೀಟು ತಾವೇ ಗೆಲ್ಲೋದಾಗಿ ಹೇಳುತ್ತಿದ್ದಾರೆ.‌ ಹೀಗಾದ್ರೆ ದೇಶಕ್ಕೆ ಒಳ್ಳೆಯದಲ್ಲ‌ ಎಂದು ಖರ್ಗೆ ವಾಗ್ದಾಳಿ ನಡೆಸಿದರು.

ಮೋದಿ ಸರ್ಕಾರ ಜಾಹೀರಾತು ಸರ್ಕಾರವಾಗಿದೆ. ಮಾಧ್ಯಮಗಳಲ್ಲಿ ದಿನಾಲು ಬರುತ್ತಿರುವ ನಿರಂತರ ಜಾಹೀರಾತು ಇದಕ್ಕೆ ಸಾಕ್ಷಿಯಾಗಿವೆ. ಪತ್ರಿಕೆಗಳಲ್ಲಿ ಹಾಗೂ ಟಿವಿಗಳಲ್ಲಿ ದಿನಾಲು ಬೆಳಿಗ್ಗೆಯಾದರೆ ಮೋದಿ‌ ಜಾಹೀರಾತು ಬಂದೇ ಬರುತ್ತದೆ.‌ ಮೋದಿ‌ ಇಲ್ಲದೇ ದೇಶ ನಡೆಯುವುದಿಲ್ಲ ಎನ್ನುವ ರೀತಿಯಲ್ಲಿ ಬಿಂಬಿಸಲಾಗುತ್ತಿದೆ ಎಂದು ಟೀಕಿಸಿದರು. ‌

Advertisement

ಬಿಜೆಪಿ ನಾಯಕರು ಪದೇ- ಪದೇ ಕಲಬುರಗಿಗೆ ಅವರ ಅಭ್ಯರ್ಥಿ‌ ನೋಡಲು ಇಲ್ಲವೇ ತಮ್ಮನ್ನು ಹೇಗೆ ಹಣೆಯಬೇಕೆಂಬ ನಿಟ್ಟಿನಲ್ಲಿ ಆಗಮಿಸುತ್ತಿದ್ದಾರೆ.‌ಕಳೆದ ಚುನಾವಣೆಯಲ್ಲಂತು ರಾಷ್ಟ್ರೀಯ ‌ನಾಯಕರು ಕಲಬುರಗಿಗೆ ಬಂದು ಠೀಕಾಣಿ ಹೂಡಿದ್ದರು ಎಂದು ಖರ್ಗೆ ಟೀಕಿಸಿದರು.

ಇದನ್ನೂ ಓದಿ: Char Dham Yatra: ಸೈಕಲ್ ಏರಿ ಚಾರ್ಧಾಮ್ ಯಾತ್ರೆ ಹೊರಟ ಬಿಹಾರದ ಯುವಕ…

Advertisement

Udayavani is now on Telegram. Click here to join our channel and stay updated with the latest news.

Next