ಕಲಬುರಗಿ: ದೇಶದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯ ಮೂರನೇ ಹಂತದಲ್ಲಿ ಜನರು ಅತ್ಯಂತ ಉತ್ಸಾಹದಿಂದ ಮತಗಟ್ಟೆಗಳಿಗೆ ಬಂದು ಮತ ಚಲಾಯಿಸುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಮತದಾನದಲ್ಲಿ ಪಾಲ್ಗೊಂಡ ಜನರು ಬಹುತೇಕರು ವ್ಯವಸ್ಥೆಯ ಕುರಿತು ಒಳ್ಳೆಯ ಮಾತುಗಳನ್ನಾಡಿದ್ದಾರೆ ಮೂರನೇ ಹಂತದ ಮತದಾನದಲ್ಲಿ ಕಾಂಗ್ರೆಸ್ ಗೆ ಜನರು ಬಹುಮತ ವ್ಯಕ್ತಪಡಿಸುತ್ತಿರುವುದು ನಮಗೆ ಆನೆ ಬಲ ಬಂದಂತಾಗಿದೆ ಎಂದರು.
ನಗರದ ಬಸವನಗರದ ಮತದಾನ ಕೇಂದ್ರದಲ್ಲಿ ಮತ ಚಲಾವಣೆ ಮಾಡಿದ ಅವರು, ನಾನು ಮತದಾನ ಮಾಡಲು ಆರಂಭಿಸಿದ ದಿನಗಳಿಂದ ಹಿಡಿದು, ಇವತ್ತಿನವರೆಗೂ ಬಸವನಗರದಲ್ಲಿಯೇ ಮತದಾನ ಮಾಡುತ್ತಿದ್ದೇನೆ ಎಂದರು.
ಕಲ್ಬುರ್ಗಿ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿಯವರು ಖಂಡಿತವಾಗಿ ಗೆಲ್ಲಲಿದ್ದಾರೆ ಎಂದು ಖರ್ಗೆ ವಿಶ್ವಾಸ ವ್ಯಕ್ತಪಡಿಸಿದರು.
ತಮ್ಮ ಪತ್ನಿ ರಾಧಾಬಾಯಿ ಖರ್ಗೆ ಅವರೊಂದಿಗೆ ಆಗಮಿಸಿದ ಅವರು ಬಸವ ನಗರದ ಹಲವು ಮತದಾರರನ್ನು ಮಾತನಾಡಿಸಿ ತಮ್ಮ ಬೆಳವಣಿಗೆಗೆ ಕಾರಣವಾದದನ್ನು ಕೂಡ ನೆನಪಿಸಿಕೊಂಡರು.
ಇದನ್ನೂ ಓದಿ: Pen Drive ಹಂಚಿದವರ ವಿರುದ್ಧ ಯಾಕೆ ಎಸ್ಐಟಿ ಕ್ರಮ ಕೈಗೊಳ್ಳಲಿಲ್ಲ: ಜಿ.ಟಿ ದೇವೇಗೌಡ ಪ್ರಶ್ನೆ