Advertisement

ಮಲ್ಲಿಕಾರ್ಜುನ ಖರ್ಗೆ, ಉದಾಸಿ ಹೆಚ್ಚು ಚರ್ಚೆ

12:10 AM Feb 14, 2019 | |

ಹೊಸದಿಲ್ಲಿ: 16ನೇ ಲೋಕಸಭೆಯ ಕಲಾಪ ಬುಧವಾರ ಅಂತ್ಯಗೊಂಡಿದ್ದು, ಕರ್ನಾಟಕದ ಸಂಸದರ ಪೈಕಿ ಮಲ್ಲಿಕಾರ್ಜುನ ಖರ್ಗೆ ಅತಿ ಹೆಚ್ಚು ಅಂದರೆ 155 ಚರ್ಚೆಗಳಲ್ಲಿ ಭಾಗವಹಿಸಿದ್ದಾರೆ. ಹಾವೇರಿ ಸಂಸದ ಶಿವಕುಮಾರ್‌ ಉದಾಸಿ 143 ಚರ್ಚೆಗಳಲ್ಲಿ ಭಾಗವಹಿಸಿದ್ದಾರೆ. ಚಾಮರಾಜನಗರ ಕ್ಷೇತ್ರದ ಧ್ರುವನಾರಾಯಣ (119), ತುಮಕೂರಿನ ಎಸ್‌.ಪಿ.ಮುದ್ದಹನುಮೇಗೌಡ (116) ಮತ್ತು ಉಡುಪಿ-ಚಿಕ್ಕಮಗಳೂರು ಶೋಭಾ ಕರಂದ್ಲಾಜೆ (111) ಚರ್ಚೆಯಲ್ಲಿ ಭಾಗವಹಿಸಿದ್ದಾರೆ.

Advertisement

ಇನ್ನು ಸಿ.ಎಸ್‌. ಪುಟ್ಟರಾಜು, ಎಲ್‌.ಆರ್‌.ಶಿವರಾಮೇಗೌಡ ಕೇವಲ ಒಂದು ಚರ್ಚೆಯಲ್ಲಿ ಭಾಗವಹಿಸಿದ್ದಾರೆ. ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ 2017 ಆಗಸ್ಟ್‌ನಲ್ಲಿ ಸಚಿವರಾಗುವುದಕ್ಕೂ ಮೊದಲು 1 ಬಾರಿ ಚರ್ಚೆಯಲ್ಲಿ ಭಾಗವಹಿಸಿದ್ದರು. ಸಂಸದ ಧ್ರುವನಾರಾಯಣ 4 ಖಾಸಗಿ ಮಸೂದೆಯನ್ನೂ ಮಂಡಿಸಿದ್ದಾರೆ. ಇವರನ್ನು ಹೊರತುಪಡಿಸಿ ರಾಜ್ಯದ ಯಾವುದೇ ಸಂಸದರು ಖಾಸಗಿ ಮಸೂದೆಯನ್ನು ಮಂಡಿಸಿಲ್ಲ.

ಕರಂದ್ಲಾಜೆ ಮುಂಚೂಣಿ: ಪ್ರಶ್ನೆಗಳನ್ನು ಕೇಳಿದ ರಾಜ್ಯಸಂಸದರ ಪೈಕಿ ಶೋಭಾ ಕರಂದ್ಲಾಜೆ ಮುಂಚೂಣಿಯಲ್ಲಿದ್ದು, ಒಟ್ಟು 729 ಪ್ರಶ್ನೆಗಳನ್ನು ಕೇಳಿದ್ದಾರೆ. ರಾಯಚೂರಿನ ಸಂಸದ ಬಿ.ವಿ.ನಾಯಕ್‌ 685 ಹಾಗೂ ಮೈಸೂರು ಸಂಸದ ಪ್ರತಾಪ್‌ ಸಿಂಹ 680 ಮತ್ತು ದಕ್ಷಿಣ ಕನ್ನಡದ ಸಂಸದ ನಳೀನ್‌ ಕುಮಾರ್‌ ಕಟೀಲು 682 ಪ್ರಶ್ನೆಗಳನ್ನು ಕೇಳಿದ್ದಾರೆ. ಕೋಲಾರ ಸಂಸದ ಕೆ.ಎಚ್‌. ಮುನಿಯಪ್ಪ, ಹಾಸನ ಸಂಸದ ಎಚ್‌.ಡಿ.ದೇವೇಗೌಡ ಒಂದೇ ಒಂದು ಪ್ರಶ್ನೆಯನ್ನೂ ಕೇಳಿಲ್ಲ. ಚಿಕ್ಕೋಡಿ ಸಂಸದ ಪ್ರಕಾಶ ಹುಕ್ಕೇರಿ ಮೂರು ಪ್ರಶ್ನೆ ಕೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next