Advertisement

ನನ್ನ ಕ್ಷೇತ್ರದ ಮೇಲೇಕೆ ಕಣ್ಣು: ಮೋದಿಗೆ ಮಲ್ಲಿಕಾರ್ಜುನ ಖರ್ಗೆ ಪ್ರಶ್ನೆ

10:18 PM Feb 08, 2023 | Team Udayavani |

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಾವು ಪ್ರತಿನಿಧಿಸುತ್ತಿರುವ ಗುಲ್ಬರ್ಗಾ ಲೋಕಸಭಾ ಕ್ಷೇತ್ರದ ಮೇಲೆಯೇ ಕಣ್ಣು ಎಂದು ರಾಜ್ಯಸಭೆಯಲ್ಲಿ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

Advertisement

ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಗೊತ್ತುವಳಿ ಮೇಲೆ ಮಾತನಾಡಿದ ಖರ್ಗೆ, ಪ್ರಧಾನಿ ನರೇಂದ್ರ ಮೋದಿ ಅವರು ಅಭಿವೃದ್ಧಿ, ಆಡಳಿತದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಆದರೆ ಅವರು ಯಾವಾಗಲು ಚುನಾವಣ ಮೂಡ್‌ನ‌ಲ್ಲಿ ಇರುತ್ತಾರೆ. ಜನವರಿಯಲ್ಲಿ ನನ್ನ ಕ್ಷೇತ್ರ ಕಲಬುರಗಿಗೆ ಆಗಮಿಸಿ, ಎರಡೆರಡು ಸಮಾವೇಶ ಮತ್ತು ಸಭೆ ನಡೆಸಿದರು. ಅವರಿಗೆ ನನ್ನ ಕ್ಷೇತ್ರವೇ ಸಿಗುತ್ತದೆಯೇ? ಅವರಿಗೆ ನನ್ನ ಕ್ಷೇತ್ರದ ಮೇಲೆ ಯಾಕೆ ಕಣ್ಣು ಎಂದು ಹಾಸ್ಯವಾಗಿ ಪ್ರಶ್ನಿಸಿದರು.

ಖರ್ಗೆ ಮಾತಿಗೆ ಪ್ರಧಾನಿ ಮೋದಿ ಸಹಿತ ಇಡೀ ಸದನ ನಗೆಗಡಲಿನಲ್ಲಿ ತೇಲಿತು. ಖರ್ಗೆ ಆರೋಪಕ್ಕಿಂತ ಹಾಸ್ಯದ ರೀತಿಯಲ್ಲಿ ಹೇಳಿದ್ದು ನಗೆಗೆ ಕಾರಣವಾಗಿತ್ತು.

ಜ.19ರಂದು ಕಲಬುರಗಿಗೆ ಆಗಮಿಸಿದ್ದ ಪ್ರಧಾನಿ ಮೋದಿ ಅವರು ಸೇಡಂ ತಾಲೂಕಿನ ಮಳಖೇಡದಲ್ಲಿ ನಡೆದ ಸಾರ್ವಜನಿಕ ಸಮಾವೇಶದಲ್ಲಿ ಲಂಬಾಣಿ ತಾಂಡಾಗಳ 51,900 ನಿವಾಸಿಗಳಿಗೆ ಭೂದಾಖಲೆಗಳನ್ನು ವಿತರಿಸಿದ್ದರು. ಅನಂತರ ರಾಷ್ಟ್ರೀಯ ಹೆದ್ದಾರಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಇದೇ ವೇಳೆ ಕಲಬುರಗಿ, ಯಾದಗಿರಿ ಮತ್ತು ವಿಜಯಪುರ ಜಿಲ್ಲೆಗಳ 3 ಲಕ್ಷ ರೈತರಿಗೆ ಉಪಯೋಗವಾಗುವ 4,700 ಕೋ. ರೂ. ವೆಚ್ಚದ ನಾರಾಯಣಪುರ ಎಡದಂಡೆ ಕಾಲುವೆ ವಿಸ್ತರಣೆ, ನವೀಕರಣ ಮತ್ತು ಆಧುನೀಕರಣ ಯೋಜನೆಯನ್ನು ಉದ್ಘಾಟಿಸಿ, ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next