Advertisement

ನೈಸರ್ಗಿಕವಾಗಿ ವರ್ತಿಸಿದರೆ ಒಳ್ಳೆಯದು; ಪ್ರಧಾನಿ ಸ್ಕೂಬಾ ಡೈವಿಂಗ್ ಗೆ ಖರ್ಗೆ ವ್ಯಂಗ್ಯ

02:53 PM Feb 26, 2024 | Team Udayavani |

ಕಲಬುರಗಿ: ದೇಶದಲ್ಲಿ ನೈಸರ್ಗಿಕವಾಗಿ ಇರುವುದನ್ನು ಇರುವಂತೆ ನೋಡಬೇಕು. ಆದರೆ, ನವಿಲುಗರಿಯನ್ನು ನೀರುನಾಳದಲ್ಲಿ ಹಾಕುವುದರಿಂದ ಅದೇನು ಬೆಳೆಯುತ್ತದೆಂದು ಎಂದು ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ವ್ಯಂಗವಾಡಿದರು.

Advertisement

ಕಲಬುರಗಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತಿನ ದ್ವಾರಕಾ ಬಳಿಯ ಆಳದ ಅರಬ್ಬಿ ಸಮುದ್ರದಲ್ಲಿ ಕೃಷ್ಣನ ಪೂಜೆ ಮಾಡಿ ನವಿಲುಗರಿ ಅರ್ಪಿಸಿದ್ದನ್ನು ಟೀಕಿಸಿದರು. ಇಂತಹ ಅತಿರೇಕ ಮತ್ತು ಅನೈಸರ್ಗಿಕ ನಡೆಗಳಿಂದ ದೇಶದ ಜನತೆಗೆ ಏನು ಸಂದೇಶ ನೀಡುತ್ತಾರೆ ಎಂದು ಪ್ರಶ್ನಿಸಿದರು. ನಿಸರ್ಗವನ್ನು ಅದು ಇದ್ದಂತೆ ಸ್ವೀಕರಿಸುವ ಬುದ್ಧನ ತತ್ವವೂ ಪ್ರತಿಪಾದಿಸುತ್ತದೆ ಎಂದರು.

ರಾಜ್ಯಸಭೆಯ ಅಡ್ಡ ಮತದಾನ ಕುರಿತು ಪ್ರಸ್ತಾಪಿಸಿ, ನಮಗೆ ಅಂತಹ ಭಯವಿಲ್ಲ, ಅಡ್ಡ, ಉದ್ದ, ಎತ್ತರದ ಮತದಾನ ಆಗುವುದಿಲ್ಲ ಎಂದರು.

ದೇಶದಲ್ಲಿ ಕಾಂಗ್ರಸ್ ಸರ್ವ ನಾಶವಾಗಲಿದೆ ಎನ್ನುವ ಶಿವರಾಜ್ ಸಿಂಗ್ ಅವರ ಆರೋಪಕ್ಕೆ ಪ್ರತಿಕ್ರಿಯಿಸಿ, ಇಂತಹ ಹೇಳಿಕೆಗಳು ಸರಿಯಲ್ಲ, ಇಗಾಗಲೇ ಒಕ್ಕೂಟದಿಂದ ಅಲಯನ್ಸ್ ಆಗಿದೆ. ಸೀಟು ಹಂಚಿಕೆಯಾಗುತ್ತಿದೆ. ಹಲವು ರಾಜ್ಯಗಳಲ್ಲಿ ಉತ್ತಮ ನಡೆಯಿದೆ. ಇಷ್ಟಿದ್ದರೂ ಸರ್ವನಾಶವಾಗುತ್ತದೆ ಎಂದರೆ, ನಮ್ಮ ಕುರಿತು ಯಾಕೆ ಮಾತನಾಡುತ್ತೀರಿ. ಸುಮ್ಮನಿದ್ದು ಬಿಡಿ ಎಂದು ತಿರುಗೇಟು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next