ಬೆಂಗಳೂರು: ಇನ್ನೂಬ್ಬ ಕುಟುಂಬದವರ ಮರ್ಜಿಗೆ ಒಳಗಾಗಿ ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ದೂರಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಎಐಸಿಸಿ ಅಧ್ಯಕ್ಷರ ಹುದ್ದೆಗೆ ಡ್ರಾಮಾ ಆರಂಭವಾಗಿದೆ. ಮಲ್ಲಿಕಾರ್ಜುನ ಖರ್ಗೆ ಅವರು ಸಾರ್ವಜನಿಕ ಜೀವನಕ್ಕೆ ಬರುವ ಮೊದಲು ಸೋನಿಯಾ ಗಾಂಧಿ ಭಾರತದಲ್ಲಿ ಇರಲಿಲ್ಲ. ಒಂದು ರೀತಿಯ ಜೀತ ಮನಸ್ಥಿತಿಯಲ್ಲಿ ಖರ್ಗೆ ಕಣಕ್ಕಿಳಿದಿದ್ದಾರೆ ಎಂದರು.
ಇದನ್ನೂ ಓದಿ:ಶುಕ್ರವಾರ ಬಿಜಿಪಿಯ ರಾಜ್ಯ ಕಾರ್ಯಕಾರಿಣಿ: ಮುಂದಿನ ಚುನಾವಣೆಯೇ ಪ್ರಮುಖ ಅಜೆಂಡಾ
ಈಗಾಗಲೇ ಗುಜರಾತ್, ಹಿಮಾಚಲ ಪ್ರದೇಶ, ಗೋವಾ ಸೇರಿದಂತೆ ಹಲವು ರಾಜ್ಯಗಳಲ್ಲಿ ಶಾಸಕರು ಸ್ವಇಚ್ಛೆಯಿಂದ ಕಾಂಗ್ರೆಸ್ ತೊರೆದು ಬಿಜೆಪಿ ಸೇರುತ್ತಿದ್ದಾರೆ. ಗುಲಾಂನಬಿ ಆಜಾದ್ ಕೂಡ ಕಾಂಗ್ರೆಸ್ ನಿಂದ ಅಜಾದಿ ಘೋಷಿಸಿಕೊಂಡರು ಎಂದು ಹೇಳಿದರು.
ರಾಹುಲ್ ಗಾಂಧಿ ಅವರ ಭಾರತ್ ಜೋಡೋಗೆ ಪ್ರತಿಕ್ರಿಯಿಸಿದ ಅವರು, ರಾಹುಲ್ ಗಾಂಧಿ ಅವರು ಎಲ್ಲಿ ಕಾಲಿಡುತ್ತಾರೋ ಅಲ್ಲಿ ಬಿಜೆಪಿಗೆ ವರವಾಗಲಿದೆ. ಉತ್ತರಪ್ರದೇಶದಲ್ಲಿ ಕಾಲಿಟ್ಟು ಕೈ ಪಕ್ಷ ಮುಗಿಸಿದರು. ಕೇರಳಕ್ಕೆ ಬಂದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಸರ್ಕಾರ ರಚನೆಯಾಗಲೇ ಇಲ್ಲ. ಹೀಗಾಗಿ ರಾಜ್ಯದಲ್ಲಿ ರಾಹುಲ್ ಕಾಲಿರಿಸಿದ ಹಿನ್ನೆಲೆಯಲ್ಲಿ ಬಿಜೆಪಿಗೆ ವರವಾಗಲಿದೆ ಎಂದರು