Advertisement
ನಗರದ ಕೌಲಪೇಠ ಸೇರಿದಂತೆ ವಿವಿಧಓಣಿಗಳಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿ ಮತಯಾಚನೆ ನಡೆಸಿದರು.ಈ ಕ್ಷೇತ್ರದಿಂದ ಹಲವು ಬಾರಿ ಆಯ್ಕೆಯಾದವರು, ಬಡವರ ಕಣ್ಣೀರು ಒರೆಸುವ ಕೆಲಸ ಮಾಡಿಲ್ಲ. ವಿದ್ಯಾವಂತರಿಗೆ
ಕೆಲಸ ಕೊಡಿಸುವ ಕಾರ್ಯವಾಗಿಲ್ಲ. ಇದರಿಂದ ಇಡೀ ಬಾಗಲಕೋಟೆ ನಗರ, ಗ್ರಾಮೀಣ ಭಾಗದಲ್ಲಿ ನಿರುದ್ಯೋಗ ಸಮಸ್ಯೆ ತೀವ್ರವಾಗಿದೆ ಎಂದರು.
ಸಮಸ್ಯೆಗಳ ಮಧ್ಯೆ ಈಗ ಚುನಾವಣೆ ಬಂದಿದೆ. ಜನರು, ನಿಮ್ಮ ಕೆಲಸಕ್ಕಾಗಿ ಕೈ ಕಟ್ಟಿಕೊಂಡು ನಿಲ್ಲುವ ಸಂಪ್ರದಾಯಕ್ಕೆ ಕೊನೆ ಹಾಡಬೇಕು. ಮತದಾರಿಗೆ ಈಗ ಬಹುದೊಡ್ಡ ಅವಕಾಶವಿದೆ. ಪ್ರಜ್ಞಾವಂತಿಕೆಯಿಂದ ಮತ ಚಲಾಯಿಸಬೇಕು. ಯಾವುದೇ ಜಾತಿ, ಆಮಿಷಗಳಿಗೆ ಬಲಿಯಾಗಬೇಡಿ. ನಿರ್ಭಯದಿಂದ ಬದಲಾವಣೆಗೆ
ಮುಂದಾಗಿ ಎಂದು ಮನವಿ ಮಾಡಿದರು. ಬಾಗಲಕೋಟೆಯಲ್ಲಿ ಬಹುತೇಕರ ಜನರು ನೆಮ್ಮದಿಯಾಗಿ ಬದುಕುತ್ತಿಲ್ಲ. ಭಯದಲ್ಲೇ ಬದುಕುವ ಪರಿಸ್ಥಿತಿ ಇದೆ. ಇದಕ್ಕೆ ಕಡಿವಾಣ ಹಾಕಬೇಕು. ಎಲ್ಲವೂ ನನ್ನಿಂದಲೇ ಎನ್ನುವವರಿಗೆ ಮತದಾನದ ಮೂಲಕ ಬುದ್ದಿ ಕಲಿಸಬೇಕು.
ಕ್ಷೇತ್ರದ ಅಭಿವೃದ್ಧಿ ಎಷ್ಟು ಮುಖ್ಯವೋ, ಸಮಾಜದಲ್ಲಿ ಶಾಂತಿ-ನೆಮ್ಮದಿ ನೆಲೆಸುವುದೂ ಅಷ್ಟೇ ಮುಖ್ಯ ಎಂದು ಮಲ್ಲಿಕಾರ್ಜುನ ಚರಂತಿಮಠ ಹೇಳಿದರು.
Related Articles
Advertisement
ಮುಖಂಡರಾದ ಸಂತೋಷ ಹೊಕ್ರಾಣಿ, ಬಸವರಾಜ ಕಟಗೇರಿ, ರವಿ ಕುಮಟಗಿ, ಅಶೋಕ ಮುತ್ತಿನಮಠ, ಅಶೋಕ ಮಹೇಂದ್ರಕರ, ನಾಗರಾಜ ಕೆರೂರ, ಸಚಿನ್ ಮರಿಶೆಟ್ಟಿ, ಸಂಜೀವ ಡಿಗ್ಗಿ, ಶ್ರೀಶೈಲ ಅಂಗಡಿ, ರಾಜು ಗೌಳಿ, ಅರುಣ ಲೋಕಾಪುರ, ಶಂಕರ ಮಗಜಿ, ವಿಶಾಲ ಮಾಂಡಗಿ, ಮುತ್ತು ಸಜ್ಜನ, ಅಶೋಕ ಸಾಳಿಂಕೆ, ವಿಜಯ ಮನಗೂಳಿ, ಶಂಕ್ರಯ್ಯ ಹಂಚಿನಮಠ, ವೀರೇಶ ಹಿರೇಮಠ, ಚರಣ ಜಾಧವ, ವಿಠಲ ಕಾಳಬರ, ಈರಣ್ಣ ವಿಜಯಪುರ,ಹನಮಂತ ಕರಾಡೆ, ನಾಗರಾಜ ಕಾಂಬಳೆ, ಶಾಂತಾಬಾಯಿ ಗೋಣಿ, ವಿಜಯಲಕ್ಷ್ಮೀ ಅಂಗಡಿ, ಗಂಗಮ್ಮ ರಜಪೂತ, ಉಮಾ ಗವಿಮಠ, ಸುಭದ್ರಾ ದಶಮನಿ, ಸಂಗಮ್ಮ ನಾಶಿ, ರೇಖಾ ಮುರಡಿ ಮುಂತಾದವರು ಪಾಲ್ಗೊಂಡಿದ್ದರು. ಜನರ ಸ್ವಾವಲಂಬನೆಯ ಬದುಕಿಗೆ ಯಾವ ಆಸರೆಯೂ ಇಲ್ಲ. ಮನೆ-ಭೂಮಿ ಕಳೆದಕೊಂಡ ಸಂತರಸ್ತರನ್ನು, ಸ್ವಾತಂತ್ರ್ಯ ಯೋಧರಂತೆ ಕಾಣಬೇಕು ಎಂದು ಹಿರಿಯರು ಹೇಳುತ್ತಾರೆ. ಆದರೆ, ನಮ್ಮಲ್ಲಿ ಸಂತ್ರಸ್ತರನ್ನು ಅತ್ಯಂತ ಕಡೆಯಾಗಿ ನೋಡಲಾಗುತ್ತಿದೆ. ಬಿಟಿಡಿಎ ಕಚೇರಿಗೆ ಹೋದರೆ, ಹಣ ಕೊಡದೇ ಯಾವ ಕೆಲಸವೂ ಆಗಲ್ಲ. ಇಂತಹ ಹಲವಾರು ಸಮಸ್ಯೆಗಳ ಮಧ್ಯೆ ಈಗ ಚುನಾವಣೆ ಬಂದಿದೆ. ಜನರು, ನಿಮ್ಮ ಕೆಲಸಕ್ಕಾಗಿ ಕೈಕಟ್ಟಿಕೊಂಡು ನಿಲ್ಲುವ ಸಂಪ್ರದಾಯಕ್ಕೆ ಕೊನೆ ಹಾಡಬೇಕು.
-ಮಲ್ಲಿಕಾರ್ಜುನ ಚರಂತಿಮಠ,
ಪಕ್ಷೇತರ ಅಭ್ಯರ್ಥಿ