Advertisement

ಒಂದೂವರೆ ತಿಂಗಳ ಬಳಿಕ ಷರತ್ತಿನೊಂದಿಗೆ ಮಂತ್ರಿಮಾಲ್ ಪುನಾರಂಭ

08:02 PM Feb 25, 2017 | Sharanya Alva |

ಬೆಂಗಳೂರು: ಕಳೆದ ತಿಂಗಳು ಗೋಡೆ ಕುಸಿದ ಹಿನ್ನೆಲೆಯಲ್ಲಿ ಮುಚ್ಚಲಾಗಿದ್ದ ಮಲ್ಲೇಶ್ವರಂನಲ್ಲಿರುವ ಪ್ರತಿಷ್ಠಿತ ಮಂತ್ರಿಮಾಲ್ ಪುನಾರಂಭಕ್ಕೆ ಬಿಬಿಎಂಪಿ ಶನಿವಾರ ಷರತ್ತುಬದ್ಧ ಅನುಮತಿ ನೀಡಿದೆ ಎಂದು ಮಾಧ್ಯಮಗಳ ವರದಿ ತಿಳಿಸಿದೆ.

Advertisement

ಜನವರಿ 16ರಂದು ಮಂತ್ರಿಮಾಲ್ ಗೋಡೆ ಕುಸಿದು ಇಬ್ಬರು ಗಾಯಗೊಂಡಿದ್ದರು. ಇದರಿಂದಾಗಿ ಮಂತ್ರಿಮಾಲ್ ಸುರಕ್ಷತೆಯ ಪರಿಶೀಲನೆಗಾಗಿ ಮಂತ್ರಿಮಾಲ್ ಅನ್ನು ಮುಚ್ಚಲಾಗಿತ್ತು. ಇದೀಗ ಮಂತ್ರಿಮಾಲ್ ಪುನಾರಂಭಕ್ಕೆ ಬಿಬಿಎಂಪಿ ಇಂಜಿನಿಯರ್ ಅಕ್ಯುಪೇಷನ್ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಆ ಹಿನ್ನೆಲೆಯಲ್ಲಿ ಬಿಬಿಎಂಪಿ 12 ಷರತ್ತು ವಿಧಿಸಿ ಮಂತ್ರಿಮಾಲ್ ಪುನಾರಂಭಕ್ಕೆ ಅನುಮತಿ ನೀಡಿದೆ. 

ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಅವರು ಮಂತ್ರಿಮಾಲ್ ಪುನಾರಂಭಕ್ಕೆ ಆದೇಶ ನೀಡಿದ್ದಾರೆ.  ಕಟ್ಟಡ ನಿರ್ವಹಣೆ ಬಗ್ಗೆ ಪ್ರತಿವರ್ಷ ವರದಿ ನೀಡಬೇಕು, ಗೋಡೆ ದುರಸ್ತಿ ಮಾಡಬೇಕು, ಅಗ್ನಿಶಾಮಕ ಯಂತ್ರ ಅಳವಡಿಸಬೇಕು ಎಂಬುದು ಸೇರಿದಂತೆ 12 ಷರತ್ತುಗಳನ್ನು ಬಿಬಿಎಂಪಿ ವಿಧಿಸಿದೆ ಎಂದು ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next