Advertisement
ಉಡುಪಿಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಈ ಹೋಟೆಲ್ ನಲ್ಲಿ “ಗ್ರ‍್ಯಾಂಡ್ ದಿ ಪೆಸಿಫಿಕ್ 1 ಹಾಲ್” ಸುಮಾರು 2000 ಅತಿಥಿಗಳಿಗೆ ಸ್ಥಳಾವಕಾಶ ಕಲ್ಪಿಸುತ್ತದೆ. ಇದರಲ್ಲಿ ಮದುವೆಗಳು, ದೊಡ್ಡ ದೊಡ್ಡ ಸಮ್ಮೇಳನಗಳು ಮತ್ತು ಅದ್ಧೂರಿಯ ಕಾರ್ಯಕ್ರಮಗಳನ್ನು ನಡೆಸಲು ಅನುಕೂಲಕರವಾಗಿದೆ.
Related Articles
Advertisement
ಗ್ರಾಹಕರ ವಾಸ್ತವ್ಯವು ಆರೋಗ್ಯದಾಯಕ, ಅನುಕೂಲಕರವಾಗಿರಬೇಕು ಎಂಬ ಉದ್ದೇಶದಿಂದ ರೂಮುಗಳನ್ನು ವಿನ್ಯಾಸಗೊಳಿಸಲಾಗಿದೆ. ಆಧುನಿಕ ವಾಸ್ತು ಶೈಲಿಯನ್ನು ಒಳಗೊಂಡಿರುವ ಈ ನೂತನ ಹೋಟೆಲ್‌ನಲ್ಲಿ ದಕ್ಷಿಣ ಹಾಗೂ ಉತ್ತರ ಭಾರತದ ಆಹಾರ ಖಾದ್ಯ, ಕಾಂಟಿನೆಂಟಲ್, ಚೈನಿಸ್ ಆಹಾರ ಉತ್ಪನ್ನಗಳನ್ನು ಹೊಂದಿರುವ, ‘ಕೋರಲ್’ ರೆಸ್ಟೋರೆಂಟ್, ಜಾಸ್ ಸ್ಪೋರ್ಟ್ಸ್ ಬಾರ್ ಮತ್ತು ಜಾಸ್ ಎಕ್ಸಿಕ್ಯೂಟಿವ್ ಲಾಂಜ್‌ಗಳಿವೆ. ವಿವಿಧ ಬಗೆಯ ಪ್ರಾದೇಶಿಕ ಆಹಾರ ಉತ್ಪನ್ನಗಳು ಇಲ್ಲಿನ ಮತ್ತೊಂದು ವಿಶೇಷ.
ದಿ ಓಷಿಯನ್ ಪರ್ಲ್ ಟೈಮ್ಸ್ ಸ್ಕ್ವೇರ್ ನಲ್ಲಿ ಜನತೆಗೆ ಐಷಾರಾಮಿಯ ಮತ್ತು ಆಧುನಿಕತೆಯ ರಸ ಗಳಿಗೆಯನ್ನು ಅನುಭವಿಸುವ ಪ್ರಮುಖ ತಾಣವಾಗಲಿದೆ. ಜೊತೆಗೆ ವ್ಯಾಪಾರ ಮತ್ತು ಉತ್ತಮ ಮನರಂಜನೆಗಾಗಿ ಟೈಮ್ಸ್ ಸ್ಕ್ವೇರ್ ಮಾಲ್ ಇದ್ದು ವ್ಯಾಪಾರಸ್ಥರಿಗೆ ಮತ್ತು ಪ್ರವಾಸಿಗರಿಗೆ ಅನುಕೂಲವಾಗಲಿದೆ.
ಸಂಸ್ಥೆಯ ಸಾಗರ್ ಹಾಗೂ ಸ್ವಾಗತ ರೆಸ್ಟೋರೆಂಟ್ ಗಳು ಈಗಾಗಲೇ ದೆಹಲಿ ಸಹಿತ ಉತ್ತರ ಭಾರತದಾದ್ಯಂತ ಜನಪ್ರಿಯಗೊಂಡಿವೆ. ಓಶಿಯನ್ ಪರ್ಲ್ ಹೋಟೆಲ್ ಮಂಗಳೂರು ಉಡುಪಿ, ಉಜಿರೆ, ಹುಬ್ಬಳ್ಳಿಗಳಲ್ಲಿ ಈಗಾಗಲೇ ಗ್ರಾಹಕರ ಮೆಚ್ಚುಗೆ ಗಳಿಸಿದೆ.
ಉಡುಪಿ ಜಿಲ್ಲೆಯ ಅತಿ ದೊಡ್ಡ ಮಾಲ್ ಆಗಿರುವ ‘ಟೈಮ್ಸ್ ಸ್ಕ್ವೇರ್ ಮಾಲ್ʼ ಇದರ ಮಾಲೀಕರಾದ ಡಾ. ಜೆರ್ರಿ ವಿನ್ಸೆಂಟ್ ಡಯಾಸ್ ಅವರನ್ನು ಉಲ್ಲೇಖಿಸಲೇಬೇಕು. ಕಳೆದ ಮೂರು ದಶಕಗಳಿಂದ ಮಾಂಡವಿ ರಿಯಲ್ ಎಸ್ಟೇಟ್ ಮತ್ತು ಡೆವಲಪರ್ಸ್ ನ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ. ಡಯಾಸ್ ಅವರು ಉಡುಪಿಯ ಕ್ರೆಡೈ ಸಂಸ್ಥೆಯ ಮಾಜಿ ಅಧ್ಯಕ್ಷರೂ ಆಗಿದ್ದಾರೆ. ಲಯನ್ಸ್ ಕ್ಲಬ್ ಮತ್ತು ಇತರ ಸಮಾಜ ಸೇವಾ ಸಂಸ್ಥೆಗಳ ಮೂಲಕ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಡಾ. ಡಯಾಸ್ ಅವರು ತಮ್ಮ ಮಾನವೀಯ ಕಾರ್ಯಗಳಿಗಾಗಿ ಅನೇಕ ವಿಶಿಷ್ಟ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಜಾತಿ ಮತ ನೋಡದೆ, ಸಹಾಯ ಬೇಡಿ ಬಂದವರಿಗೆ ನೆರವು ನೀಡುವ ಮೂಲಕ ಅಶಕ್ತರಿಗೆ, ಬಡವರಿಗೆ, ಕೊಡುಗೈ ದಾನಿಯಾಗಿದ್ದಾರೆ.
ಸಾಗರ ರತ್ನ ಮತ್ತು ಓಶಿಯನ್ ಪರ್ಲ್ ಸಮೂಹ ಸಂಸ್ಥೆಗಳ ಯಶಸ್ಸಿನ ಹಿಂದಿರುವ ಪ್ರಮುಖ ಶಕ್ತಿ ಮತ್ತು ವ್ಯಕ್ತಿ ಎಂದರೆ ಜಯರಾಮ್ ಬನಾನ್. ಅವರು ಈ ಎರಡೂ ಸಂಸ್ಥೆಗಳ ಅಧ್ಯಕ್ಷರೂ ಹೌದು, ‘ಸಾಗರ ರತ್ನʼ, ‘ಶ್ರೀರತ್ನʼ ಮತ್ತು ‘ಸ್ವಾಗತ್ʼ ರೆಸ್ಟೋರೆಂಟ್‌ಗಳ ಮಾಲೀಕರು. ದೆಹಲಿ, ಉತ್ತರ ಭಾರತದಾದ್ಯಂತ ‘ಸಾಗರ ರತ್ನʼ ಹೆಸರಿನ ವೆಜ್ ಮತ್ತು ‘ಸ್ವಾಗತ್ʼ ಹೆಸರಿನ ನಾನ್ ವೆಜ್ ರೆಸ್ಟೋರೆಂಟ್ ಮತ್ತು ಇಂಡಸ್ಟ್ರಿಯಲ್ ಕ್ಯಾಂಟೀನ್ ಗಳನ್ನು ನಡೆಸುತ್ತಿದ್ದಾರೆ. ಅವರ ಸಾಧನೆಗೆ, ಸಮಾಜಕ್ಕೆ ನೀಡಿದ ಕೊಡುಗೆಗೆ ಪ್ರತಿಷ್ಠಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯೂ ಲಭಿಸಿದೆ.
ಜಯರಾಮ್ ಬನಾನ್‌ರವರ ಹಿರಿಯ ಪುತ್ರ ರೋಷನ್ ಬನಾನ್ ತಂದೆಯೊಂದಿಗೆ ಉದ್ಯಮದಲ್ಲಿದ್ದಾರೆ. ತಂದೆಯ ಸರಳತೆ, ವ್ಯವಹಾರ ಚತುರತೆ ಸಹಜವಾಗಿಯೇ ರೋಷನ್ ಗೂ ಬಂದಿದೆ. ಹೋಟೆಲ್ ಉದ್ಯಮದ ಜೊತೆ ಜೊತೆಗೆ ಸಮಾಜಮುಖಿ ಚಿಂತನೆ, ಸಾಮಾಜಿಕ ಬದ್ಧತೆ, ಜನಪರ ಚಟುವಟಿಕೆಗಳಲ್ಲೂ ಸಕ್ರಿಯರಾಗಿದ್ದಾರೆ.