ಕಾಪು : ಮಲ್ಲಾರು ಗ್ರಾಮದ ಬಡಗರಗುತ್ತು ಬಳಿ ಅಕ್ರಮ ಕಸಾಯಿಖಾನೆಗೆ ರವಿವಾರ ಬೆಳಗ್ಗೆ ದಾಳಿ ನಡೆಸಿದ ಪೊಲೀಸರು 200 ಕೆ.ಜಿ.ಯಷ್ಟು ದನದ ಮಾಂಸ ಸಹಿತ ಹಲವು ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಕಾಪು ಎಸ್‌ಐ ಶ್ರೀಶೈಲ ಡಿ. ಮುರಗೋಡ ನೇತೃತ್ವದ ತಂಡವು ದಾಳಿ ನಡೆಸಿ ಬಡಗರಗುತ್ತು ಬಳಿಯ ರಜಾಕ್ ಅವರ ಬಾಟಲಿ ಫ್ಯಾಕ್ಟರಿಯ ಹಿಂಭಾಗದ ಹಾಡಿಯಲ್ಲಿ ಇಬ್ಬರು ವ್ಯಕ್ತಿಗಳು ಸೇರಿಕೊಂಡು ಅಕ್ರಮವಾಗಿ ದನವನ್ನು ಕಡಿದು ಮಾಂಸ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ್ದಾರೆ.
ಈ ವೇಳೆ ಕಾಪು ಭಾರತ್ ನಗರದ ನಿವಾಸಿ ಮೊಹಮ್ಮದ್ ಆರೀಫ್ ಮತ್ತು ಜತೆಗಿದ್ದ ಮತ್ತೋರ್ವ ಆರೋಪಿ ಪರಾರಿಯಾಗಿದ್ದಾನೆ. ಸ್ಥಳ ದ ಲ್ಲಿದ್ದ ಎರಡು ಕಪ್ಪು ಬಣ್ಣದ ದನದ ತಲೆಗಳು, 9 ಚೀಲದಲ್ಲಿ ತುಂಬಿದ್ದ 200 ಕೆಜಿಯಷ್ಟು ದನದ ಮಾಂಸ, ಕತ್ತಿ, ಚೂರಿ, ನೈಲಾನ್ ಹಗ್ಗ ಮತ್ತು ಬೈಕ್‌ವೊಂದನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ: ಸಕಾಲಿಕವಾಗಿ ಪತ್ತೆಯಾದ ಐಇಡಿ: ಜಮ್ಮುವಿನಲ್ಲಿ ತಪ್ಪಿದ ದೊಡ್ಡ ದುರಂತ