Advertisement
ಮಲ್ಲಯ್ಯನಗರ ಬಡಾವಣೆಯಲ್ಲಿ 80ಕ್ಕೂ ಅಧಿಕಕುಟುಂಬಗಳು ವಾಸವಿದ್ದು, ಪ್ರತಿಯೊಬ್ಬ ಕುಟುಂಬವುಕೂಲಿ ಕಾರ್ಮಿಕರಾಗಿದ್ದು ಒಂದೊಪ್ಪತ್ತಿನ ಊಟಕ್ಕಾಗಿ ಪ್ರತಿನಿತ್ಯ ಬೆವರಿಳಿಸಬೇಕಾದ ಅನಿವಾರ್ಯತೆಯಲ್ಲಿದ್ದು, ಇಂತಹ ನಿವಾಸಿಗಳಿಗೆ ಮೂಲ ಸೌಲಭ್ಯ ಕಲ್ಪಿಸದೆ ನಿರ್ಲಕ್ಷ್ಯಧೋರಣೆ ಅನುಸರಿಸಲಾಗಿದೆ.
Related Articles
Advertisement
ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಕೇವಲ ಚುನಾವಣೆ ಸಂದರ್ಭಗಳಲ್ಲಷ್ಟೇ ಗ್ರಾಮಕ್ಕೆ ಭೇಟಿ ನೀಡಿ ಹಲವಾರು ಸಮಸ್ಯೆಗಳನ್ನು ಈಡೇರಿಸಿ ಮಾದರಿ ಗ್ರಾಮವನ್ನಾಗಿಸುವುದಾಗಿ ಭರವಸೆ ನೀಡುತ್ತಾರೆ. ಚುನಾವಣೆ ಮುಗಿದ ಬಳಿಕ ಇತ್ತ ತಲೆಹಾಕಲ್ಲ. ಗ್ರಾಮದಲ್ಲಿರುವ ಅಂಗನವಾಡಿ ಸುತ್ತಮುತ್ತ ತ್ಯಾಜ್ಯ ನೀರು, ಗಿಡಗಳು ಬೆಳೆದುನಿಂತು ಅವ್ಯವಸ್ಥೆಯ ಆಗರವಾಗಿದ್ದರೂ ಇದುವರೆಗೂ ಅದರ ದುರಸ್ತಿ ಕಾರ್ಯಕ್ಕೆ ಮುಂದಾಗದಿರುವುದು ಅಭಿವೃದ್ಧಿಗೆ ಹಿಡಿದ ಕನ್ನಡಿಯಂತಾಗಿದೆ. ಕೂಡಲೇ ಹಕ್ಕು ಪತ್ರ ವಿತರಿಸುವಜತೆಗೆ ಮೂಲ ಸೌಲಭ್ಯ ಕಲ್ಪಿಸಿ ಸ್ಥಳೀಯ ಸಾರ್ವಜನಿಕರಿಗೆ ಸರ್ಕಾರದ ಸೌಲಭ್ಯಗಳನ್ನು ಒದಗಿಸಿ ಮಾದರಿ ಬಡಾವಣೆಯನ್ನಾಗಿಸಲು ಸ್ಥಳೀಯ ಗ್ರಾಪಂ ಆಡಳಿತ ಮಂಡಳಿ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಇತ್ತ ಗಮನಹರಿಸಬೇಕಾಗಿದೆ.
ವಿದ್ಯುತ್ ಸಂಪರ್ಕ ಇಲ್ಲ :
ಮಲ್ಲಯ್ಯನಗರ ಬಡಾವಣೆಯಲ್ಲಿ ಕಳೆದ 20 ವರ್ಷಗಳಿಂದಲೂ ವಾಸಿಸುತ್ತಿರುವ ಸುಮಾರು 30 ಕುಟುಂಬಗಳಿಗೆ ಹಕ್ಕುಪತ್ರ ವಿತರಿಸದ ಹಿನ್ನೆಲೆಯಲ್ಲಿ ಸರ್ಕಾರದ ಸೌಲಭ್ಯ ಪಡೆಯಲು ವಂಚಿತವಾಗಿದೆ.ವಿದ್ಯುತ್ ಸಂಪರ್ಕ ಪಡೆಯಲು ಅಗತ್ಯ ದಾಖಲಾತಿಗಳನ್ನು ನೀಡಬೇಕಾಗಿರುವುದರಿಂದ ಸ್ಥಳೀಯರು ಗ್ರಾಮದಲ್ಲಿ ಹಾದು ಹೋಗಿರುವ ವಿದ್ಯುತ್‌ತಂತಿಗೆ ವೈರ್‌ಗಳನ್ನು ಅಳವಡಿಸಿ ರಾತ್ರಿ ವೇಳೆ ವಿದ್ಯುತ್ ಸಂಪರ್ಕ ಪಡೆಯಬೇಕಾದ ಅನಿವಾರ್ಯತೆ ಬಂದೊದಗಿದೆ.
ಹಕ್ಕುಪತ್ರ ವಿತರಿಸಲು ತೊಂದರೆ: ಪಿಡಿಒ : ಮಲ್ಲಯ್ಯನಗರ ಬಡಾವಣೆಯಲ್ಲಿ ಈ ಹಿಂದೆವಾಸಿಸುತ್ತಿದ್ದ 187 ಕುಟುಂಬಗಳಿಗೆ ಈಗಾಗಲೇ ಹಕ್ಕು ಪತ್ರ ವಿತರಿಸಿದ್ದು, ವಲಸೆ ಹೋಗಿರುವ ನಿವಾಸಿಗಳ ಮನೆಗೆ ಇತರರು ಬಂದು ಸೇರಿರು ವುದರಿಂದ ಹಕ್ಕುಪತ್ರ ವಿತರಿಸಲು ತೊಂದರೆ ಉಂಟಾಗಿದೆ. ಮೇಲಧಿಕಾರಿಗಳ ಗಮನಕ್ಕೆ ತಂದು ಅಗತ್ಯಕ್ರಮ ವಹಿಸುವ ಜತೆಗೆ ಬಡಾವಣೆಯಲ್ಲಿ ಕಂಡುಬಂದಿರುವ ಅವ್ಯವಸ್ಥೆಗಳನ್ನು ಮುಂದಿನ ದಿನಗಳಲ್ಲಿ ಕ್ರಮ ವಹಿಸಲಾಗುವುದು ಎಂದು ಸಾದೊಳಲು ಗ್ರಾಪಂ ಪಿಡಿಒ ಪ್ರಭಾಕರ್ ತಿಳಿಸಿದ್ದಾರೆ.
ಕಾಟಾಚಾರಕ್ಕೆ ದರ್ಶನ : ಸಮಸ್ಯೆ ಹಾಗೂ ಮೂಲ ಸೌಲಭ್ಯ ಕಲ್ಪಿಸುವಂತೆ ಹಲವು ಬಾರಿ ಜಿಲ್ಲಾ ಹಾಗೂ ತಾಲೂಕು ಆಡಳಿತಮತ್ತು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆಮನವಿ ಮಾಡಿದರೂ ಯಾವುದೇ ಕ್ರಮಕ್ಕೆ ಮುಂದಾಗದೆ ಕೇವಲ ಕಾಟಾಚಾರಕ್ಕಷ್ಟೇ ಬಂದುಮುಖ ದರ್ಶನ ನೀಡುವ ಅಧಿಕಾರಿಗಳು, ನಂತರ ಯಾವುದೇ ಅಭಿವೃದ್ಧಿಗೆ ಮುಂದಾಗಿಲ್ಲವೆಂದು ಸ್ಥಳೀಯರು ಅಳಲು ತೋಡಿಕೊಳ್ಳುತ್ತಾರೆ.
ಮಲ್ಲಯ್ಯನಗರ ಬಡಾವಣೆಯಲ್ಲಿ ಅಧಿಕ ಮಂದಿ ಕೂಲಿ ಕಾರ್ಮಿಕರೇಇದ್ದು ಪ್ರತಿಯೊಂದು ಕುಟುಂಬಕ್ಕೂ ಹಕ್ಕು ಪತ್ರ ವಿತರಿಸಿ ಮೂಲ ಸೌಲಭ್ಯ ಕಲ್ಪಿಸುವಜತೆಗೆ ನನೆಗುದಿಗೆ ಬಿದ್ದಿರುವ ಅಭಿವೃದ್ಧಿಕಾರ್ಯಗಳನ್ನು ಕೈಗೊಂಡು ಸ್ಥಳೀಯನಿವಾಸಿಗಳಿಗೆ ಅನುಕೂಲ ಕಲ್ಪಿಸಬೇಕಾಗಿದೆ. –ಎಚ್.ಬಿ.ಶಿವಣ್ಣ, ಮಲ್ಲಯ್ಯನಗರ ಬಡಾವಣೆ ನಿವಾಸಿ
–ಎಸ್.ಪುಟ್ಟಸ್ವಾಮಿ, ಮದ್ದೂರು