Advertisement

ಧೋನಿ ಬೆಂಬಲಕ್ಕೆ ನಿಂತ ಮಾಲಿಂಗ

02:00 AM Jul 06, 2019 | Sriram |

ಲಂಡನ್‌: ಈ ಬಾರಿಯ ವಿಶ್ವಕಪ್‌ನಲ್ಲಿ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶಿಸಲು ವಿಫ‌ಲವಾಗಿ ಬಹುತೇಕ ಎಲ್ಲರಿಂದ ಟೀಕೆಗೆ ಒಳಗಾದ ಧೋನಿ ಅವರನ್ನು ಶ್ರೀಲಂಕಾದ ವೇಗಿ ಲಸಿತ ಮಾಲಿಂಗ ಬೆಂಬಲಿಸಿದ್ದಾರೆ. ಧೋನಿ ಅವರು ಇನ್ನೂ ಒಂದು ಅಥವಾ ಎರಡು ವರ್ಷ ಆಡಬೇಕು ಮತ್ತು ತನ್ನ ಅನುಭವವನ್ನು ಯುವ ಆಟಗಾರರಿಗೆ ತಿಳಿಸಿಕೊಡಬೇಕು ಎಂದು ಮಾಲಿಂಗ ಹೇಳಿದರು. ಭಾರತದ ಯಶಸ್ವಿ ಗೇಮ್‌ ಫಿನಿಶರ್‌ ಖ್ಯಾತಿಯ ಧೋನಿ ವಿಶ್ವಕಪ್‌ನ ಕೆಲವು ಪಂದ್ಯಗಳಲ್ಲಿ ತನ್ನ ಬ್ಯಾಟಿಂಗ್‌ ವೈಖರಿ ಬಗ್ಗೆ ಟೀಕೆಗಳನ್ನು ಎದುರಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next