Advertisement

ಬಾಂಗ್ಲಾ ಪಂದ್ಯದ ಬಳಿಕ ಮಾಲಿಂಗ ವಿದಾಯ

01:07 PM Jul 23, 2019 | Sriram |

ಕೊಲಂಬೊ: ಶ್ರೀಲಂಕಾದ ಹಿರಿಯ ಬೌಲರ್‌ ಲಸಿತ ಮಾಲಿಂಗ ಬಾಂಗ್ಲಾದೇಶ ವಿರುದ್ಧದ ಮೊದಲ ತವರಿನ ಪಂದ್ಯದ ಬಳಿಕ ಏಕದಿನ ಕ್ರಿಕೆಟಿಗೆ ವಿದಾಯ ಹೇಳಲಿದ್ದಾರೆ. ತಂಡದ ನಾಯಕ ದಿಮುತ್‌ ಕರುಣರತ್ನೆ ಈ ವಿಷಯವನ್ನು ತಿಳಿಸಿದ್ದಾರೆ.

Advertisement

ಬಾಂಗ್ಲಾದೇಶ 3 ಪಂದ್ಯಗಳ ಸರಣಿಯನ್ನಾಡಲಿದ್ದು, ಜು. 26ರಂದು ಮೊದಲ ಮುಖಾಮುಖೀ ನಡೆಯಲಿದೆ. ಇದು ಮಾಲಿಂಗ ಅವರ ಕೊನೆಯ ಏಕದಿನ ಪಂದ್ಯವಾಗಲಿದೆ ಎಂದು ಕರುಣರತ್ನೆ ಹೇಳಿದರು.

35ರ ಹರೆಯದ ಮಾಲಿಂಗ ಏಕದಿನದಲ್ಲಿ ಅತ್ಯಧಿಕ ವಿಕೆಟ್‌ ಉರುಳಿಸಿದ ಲಂಕೆಯ 3ನೇ ಬೌಲರ್‌ ಆಗಿದ್ದಾರೆ (219 ಇನ್ನಿಂಗ್ಸ್‌, 335 ವಿಕೆಟ್‌). 2011ರಲ್ಲೇ ಟೆಸ್ಟ್‌ ಕ್ರಿಕೆಟ್‌ನಿಂದ ದೂರ ಸರಿದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next