Advertisement

ದುರುದ್ದೇಶದ ದಾಳಿ: ಗೃಹ ಸಚಿವ

11:47 AM Mar 29, 2019 | Lakshmi GovindaRaju |

ಬೆಂಗಳೂರು: ಜೆಡಿಎಸ್‌ ಮುಖಂಡರು ಹಾಗೂ ಸರ್ಕಾರಿ ಅಧಿಕಾರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಮಾಡಿರುವ ದಾಳಿ ದುರುದ್ದೇಶದಿಂದ ಕೂಡಿದೆ ಎಂದು ಗೃಹ ಸಚಿವ ಎಂ.ಬಿ. ಪಾಟೀಲ್‌ ಹೇಳಿದ್ದಾರೆ.

Advertisement

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದಾಳಿ ನಡೆಸಲು ಆದಾಯ ತೆರಿಗೆ ಇಲಾಖೆ ಸ್ವತಂತ್ರವಾಗಿದೆ. ನಿಷ್ಪಕ್ಷಪಾತವಾಗಿ ಎಲ್ಲರ ಮೇಲೂ ದಾಳಿ ನಡೆಸಬಹುದಿತ್ತು. ಚುನಾವಣೆ ಸಂದರ್ಭದಲ್ಲಿ ಸಮ್ಮಿಶ್ರ ಸರ್ಕಾರದ ಸಚಿವರು, ಶಾಸಕರ ಮನೆಗಳ ಮೇಲೆ ದಾಳಿ ನಡೆಸುತ್ತಿರುವುದು ರಾಜಕೀಯ ಪ್ರೇರಿತವಾಗಿದೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯವರು ಐಟಿ ಮತ್ತು ಸಿಬಿಐಗಳನ್ನು ದುರುಪಯೋಗಪಡೆಸಿಕೊಂಡಿದ್ದಾರೆ. ದಾಳಿಯ ಬಗ್ಗೆ ನನಗೆ ಯಾವುದೇ ಮಾಹಿತಿ ಇರಲಿಲ್ಲ. ಮುಖ್ಯಮಂತ್ರಿಗಳಿಗೆ ಗುಪ್ತಚರ ಇಲಾಖೆಯಿಂದ ಮಾಹಿತಿ ದೊರೆತಿರಬಹುದು ಎಂದು ಹೇಳಿದರು.

ಕುಸಿದು ಕುಳಿತ ಶಾಸಕಿ ಸೌಮ್ಯರೆಡ್ಡಿ: ಪ್ರತಿಭಟನೆ ವೇಳೆ ಜಯನಗರ ಶಾಸಕಿ ಸೌಮ್ಯರೆಡ್ಡಿ ಬಿಸಿಲಿನ ತಾಪ ತಾಳಲಾರದೆ, ಕುಸಿದು ಕುಳಿತ ಘಟನೆ ನಡೆಯಿತು. ತಕ್ಷಣವೇ ಮಹಿಳಾ ಕಾರ್ಯಕರ್ತೆಯರು ಅವರನ್ನು ನೆರಳಿದ್ದ ಸ್ಥಳಕ್ಕೆ ಕರೆದೊಯ್ದು ನೀರು ಕುಡಿಸಿ ಆರೈಕೆ ಮಾಡಿದರು. ನಂತರ ಕೆಲ ಹೊತ್ತು ಚೇತರಿಸಿಕೊಂಡ ಸೌಮ್ಯರೆಡ್ಡಿ ಕಾರಿನಲ್ಲಿ ತೆರಳಿದರು.

Advertisement

Udayavani is now on Telegram. Click here to join our channel and stay updated with the latest news.

Next