Advertisement

ಶಂಕರ್‌ನಾಗ್‌ ನೆನಪಲ್ಲಿ ಮಾಲ್ಗುಡಿ ಡೇಸ್‌ ಚಿತ್ರತಂಡ

12:28 AM Dec 24, 2019 | Lakshmi GovindaRaj |

ಬೆಂಗಳೂರು: ಶಂಕರ್‌ನಾಗ್‌ ಈಗ ಬದುಕಿರುತ್ತಿದ್ದರೆ 65 ವರ್ಷ ತುಂಬುತ್ತಿತ್ತು. ಆದರೆ ಅವರಿಲ್ಲ, ಅವರ ಚಿತ್ರಗಳಿವೆ, ಅವರ ಕನಸುಗಳಿವೆ. ಜತೆಗೆ ಅವರ ನೆನಪುಗಳು ನಮ್ಮ ನಡುವೆ ಇವೆ. ಶಂಕರ್‌ನಾಗ್‌ ಎಂದಾಕ್ಷಣ ನೂರಾರು ವಿಷಯಗಳು ಕಣ್ಣ ಮುಂದೆ ಬರುತ್ತವೆ. ಆದರೆ, ಅದರಲ್ಲಿ ಪ್ರಮುಖವಾಗಿ ಕಾಣಸಿಗುವುದು ಮಾಲ್ಗುಡಿ ಡೇಸ್‌. ಒಂದು ಕೃತಿಗೆ ದೃಶ್ಯ ರೂಪಕೊಟ್ಟು ಅದನ್ನು ಈಡೀ ಜಗತ್ತು ನೋಡುವಂತೆ ಮಾಡಿದವರು ಶಂಕರ್‌ನಾಗ್‌.

Advertisement

ಧಾರವಾಹಿ ಬಿಡುಗಡೆ ಆಗಿ 32 ವರುಷ ಸಂದರೂ ಜನ ಅದನ್ನು ಸ್ಮರಿಸುತ್ತಾರೆ. ಅಂದರೆ ಅದು ಶಂಕರ್‌ನಾಗ್‌ ಎನ್ನುವ ನಿರ್ದೇಶಕನೊಳಗಿದ್ದ ತಾಂತ್ರಿಕ ಶಕ್ತಿ. ಇದೀಗ ಅದೇ ಶೀರ್ಷಿಕೆಯಿಂದ ವಿಜಯ ರಾಘವೇಂದ್ರರವರು ಮುಖ್ಯ ಭೂಮಿಕೆಯಲ್ಲಿ ಇರುವ ಸಿನಿಮಾ ಬರುತ್ತಿದೆ. ಹಿಂದೆ ಚಿತ್ರೀಕರಣ ಮುಗಿಸಿದ್ದ ಚಿತ್ರ ತಂಡ, ಮೊದಲ ಪೋಸ್ಟರ್‌ ಬಿಡುಗಡೆ ಮಾಡಿತ್ತು. ಮೊದಲ ಪೋಸ್ಟರ್‌ನಲ್ಲಿ ವಿಭಿನ್ನ ಗೆಟಪ್‌ನಲ್ಲಿರುವ ವಿಜಯ ರಾಘವೇಂದ್ರ, 65-70ರ ಆಸುಪಾಸಿನ ಸಾಹಿತಿ ಲಕ್ಷ್ಮೀನಾರಾಯಣ ಮಾಲ್ಗುಡಿ ಆಗಿ ಕಾಣಿಸಿಕೊಂಡಿದ್ದಾರೆ.

ವಿಜಯ ರಾಘವೇಂದ್ರ ಅವರ ಸಿನಿ ಜೀವನದಲ್ಲಿ ದೊಡ್ಡ ತಿರುವು ನೀಡುವ ಚಿತ್ರ ಇದಾಗಲಿದೆ ಎನ್ನುವ ಮಾತುಗಳು ಹರಿದಾಡಲು ಶುರುವಾದವು. ಇದೀಗ ಮಾಲ್ಗುಡಿ ಡೇಸ್‌ ಚಿತ್ರತಂಡ ಅವರ ಹುಟ್ಟು ಹಬ್ಬದ ಈ ಸಂದರ್ಭದಲ್ಲಿ ಸಿನಿಮಾವನ್ನು ಶಂಕರ್‌ನಾಗ್‌ ಅವರಿಗೆ ಅರ್ಪಿಸಿದೆ. ಈ ಮೂಲಕ ಶಂಕರ್‌ನಾಗ್‌ರವರಿಗೆ ಅವರ 65ನೇ ಹುಟ್ಟು ಹಬ್ಬದ ಈ ಸಂದರ್ಭದಲ್ಲಿ ಗೌರವವನ್ನು ಸೂಚಿಸಿದೆ. ಮಾಲ್ಗುಡಿ ಡೇಸ್‌ ಜನಜನಿತವಾಗಲು ಶಂಕರ್‌ನಾಗ್‌ ಕಾರಣ ಹಾಗಾಗಿ ಈ ಸಿನಿಮಾದ ಮೂಲಕ ನಾವು ಅವರನ್ನು ನೆನೆಯುತ್ತಿದ್ದೇವೆ ಎಂದಿದೆ ಚಿತ್ರತಂಡ.

Advertisement

Udayavani is now on Telegram. Click here to join our channel and stay updated with the latest news.

Next