Advertisement
ಸ್ವಯಂಪ್ರಭಾ ಎಂಟರ್‌ಟೈನ್‌ಮೆಂಟ್ ಹಾಗೂ ಪ್ರೊಡಕ್ಷನ್ ಅರ್ಪಿಸಿದ ಕೆ. ರತ್ನಾಕರ್ ಕಾಮತ್ ನಿರ್ಮಾಣ, ಕಿಶೋರ್ ಮೂಡುಬಿದಿರೆ ಕಥೆ-ಚಿತ್ರಕಥೆ, ನಿರ್ದೇಶನದ ಸಿನೆಮಾವಿದು. ಕಿಶೋರ್ ಅವರ ಅಪ್ಪೆ ಟೀಚರ್ ಸಕ್ಸಸ್ ಆಗುತ್ತಿದ್ದಂತೆ ಅವರ ಮುಂದಿನ ಸಿನೆಮಾ ಯಾವುದು? ಎಂಬ ಕುತೂಹಲ ಶುರುವಾಗಿತ್ತು. ಕೋಸ್ಟಲ್‌ವುಡ್‌ನಲ್ಲಿಯೇ ತೊಡಗಿಸಲಿದ್ದಾರೆಯೇ? ಅಥವಾ ಸ್ಯಾಂಡಲ್‌ವುಡ್‌ನತ್ತ ಪಯಣಿಸಲಿದ್ದಾರೆಯೇ? ಎಂಬ ಪ್ರಶ್ನೆ ಎದುರಾಗಿತ್ತು. ಈಗ ಈ ಪ್ರಶ್ನೆಗಳಿಗೆ ಉತ್ತರ ದೊರಕಿದೆ.
ವಿಶೇಷ ಪಾತ್ರದ ಮೊದಲ ಪೋಸ್ಟರ್ ಈಗ ಸಾಕಷ್ಟು ಸುದ್ದಿ ಮಾಡುತ್ತಿದೆ. ವಿಜಯ ರಾಘವೇಂದ್ರರ ವೃತ್ತಿ ಜೀವನದಲ್ಲಿ ಇದೊಂದು ವಿಶೇಷ ಸಿನೆಮಾ. ಏಕೆಂದರೆ ಇಲ್ಲಿ ಅವರು ಹಿಂದೆಂದೂ ನಿರ್ವಹಿಸದ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
Related Articles
Advertisement
ಒಟ್ಟು 60 ದಿನಗಳ ಚಿತ್ರೀಕರಣವನ್ನು ಬೆಂಗಳೂರು, ಮಂಗಳೂರು, ಮೈಸೂರು, ಶಿವಮೊಗ್ಗ, ತೀರ್ಥಹಳ್ಳಿ, ಪಾಂಡಿಚೇರಿ, ಬಾಳೆಹೊನ್ನೂರು, ಕಳಸ, ಶೃಂಗೇರಿ, ಆಗುಂಬೆಯ ಸುತ್ತಮುತ್ತ ಮಾಡಲಾಗಿದೆ. ಗಗನ್ ಬಡೇರಿಯಾ ಸಂಗೀತ ನೀಡಿದ್ದು, ಒಟ್ಟು 6 ಹಾಡುಗಳಿವೆ. ಪ್ರದೀಪ್ ನಾಯಕ್ ಸಂಕಲನ, ಉದಯ್ ಲೀಲಾ ಕೆಮರಾ ಕೈಚಳಕವಿದೆ.
ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ರವಿಶಂಕರ್ ಪೈ, ಪೋಸ್ಟರ್ ಡಿಸೈನರ್ ಆಗಿ ಅಶ್ವಿನ್ ರಮೇಶ್, ಕಾಸ್ಟೂಮ್ ಡಿಸೈನರ್ ಶಿಲ್ಪಾ ಹೆಗ್ಡೆ ಮತ್ತು ರೋಷನ್ ಅಯ್ಯಪ್ಪ ನಿರ್ವಹಿಸಿದ್ದಾರೆ. ವಿಜಯ ರಾಘವೇಂದ್ರ ಅವರ ವಿಶೇಷ ಪಾತ್ರದ ಪ್ರೊಸ್ತೆಟಿಕ್ ಮೇಕಪ್‌ನ್ನು ಕೇರಳ ಮೂಲದ ರೋಷನ್ ಎನ್.ಜಿ. ಮಾಡಿದ್ದಾರೆ. ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಶೀಘ್ರದಲ್ಲಿ ಸಿನೆಮಾ ಬಿಡುಗಡೆಯ ನಿರೀಕ್ಷೆಯಲ್ಲಿದೆ.
- ದಿನೇಶ್ ಇರಾ