Advertisement

ಮಲೆಂಗಲ್ಲು: ರಿಷಿ ಯಕ್ಷ ವೃಕ್ಷ ಸಂಭ್ರಮ

03:45 AM Jul 13, 2017 | Team Udayavani |

ಬೆಳ್ತಂಗಡಿ: ಬೆಳ್ತಂಗಡಿಯ ಕಣಿಯೂರು ಗ್ರಾಮದ ಮಲೆಂಗಲ್ಲುನಲ್ಲಿ ರಿಷಿ ಸಾಮಾಜಿಕ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ರಿಷಿ ಯಕ್ಷ ವೃಕ್ಷ ಸಂಭ್ರಮ  ಕಾರ್ಯಕ್ರಮ ನಡೆಯಿತು.

Advertisement

ಮಲೆಂಗಲ್ಲು  ಪ್ರಧಾನ ಅರ್ಚಕ ವಿಜಯ ಕುಮಾರ್‌ ತಂತ್ರಿ  ಕಾರ್ಯಕ್ರಮ ಉದ್ಘಾಟಿಸಿದರು. ಸಾಮಾಜಿಕ ಕಾರ್ಯಕರ್ತ ಕೊಲ್ಲೊಟ್ಟು ವಿಟuಲ ಶೆಟ್ಟಿ ಉಪಸ್ಥಿತರಿದ್ದರು. ಮುಖ್ಯ ಅತಿಥಿ, ಪತ್ರಕರ್ತ ದಾಮೋದರ ದೊಂಡೊಲೆ ಮಾತನಾಡಿ, ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಸಾಮಾಜಿಕ ಕಳಕಳಿ ಹೊಂದಿರುವುದು ಮಾದರಿ. ಇಂತಹ  ವಿಭಿನ್ನ ಪ್ರಯೋಗಗಳು ನಿರಂತರ ನಡೆಯಬೇಕು ಎಂದರು.

ಉಪನ್ಯಾಸಕ ನಾರಾಯಣ ಗೌಡ ಮುಚ್ಚಾರು ಮಾತನಾಡಿ, ಪದು¾ಂಜದಂತಹ ಪುಟ್ಟ ಗ್ರಾಮೀಣ ಭಾಗದಲ್ಲಿ ಇಂತಹ ಕಾರ್ಯಕ್ರಮ ನಡೆಯುವುದರಿಂದ ಮಕ್ಕಳಲ್ಲಿ ಎಳವೆಯಿಂದಲೇ ಯಕ್ಷಗಾನದತ್ತ ಆಸಕ್ತಿ, ಪರಿಸರ ಪ್ರೇಮ ಬೆಳೆಸಿಕೊಳ್ಳಲು ಪ್ರೇರಣೆಯಾಗುತ್ತದೆ ಎಂದರು. ರಾಮಣ್ಣ ಮೇಲಾಂಟ ಮುಗರೋಡಿ ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ಕಾಯರ್ತೋಡಿ ಮಹಾವಿಷ್ಣು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಜಗದೀಶ್‌ ಪಡು  ಮುಖ್ಯ ಅತಿಥಿಯಾಗಿದ್ದರು. ಹಿರಿಯ ಭಾಗವತ ಲಕ್ಷ್ಮೀನಾರಾಯಣ ಶೆಟ್ಟಿ ಅವರನ್ನು ಈ ವೇಳೆ ಸಮ್ಮಾನಿಸಲಾಯಿತು. ಯಕ್ಷಗಾನ ವೈಭವ ಮತ್ತು ತಾಳಮದ್ದಳೆ ನಡೆಯಿತು. ಮಲೆಂಗಲ್ಲು ಪರಿಸರದಲ್ಲಿ ಗಿಡ ನೆಡಲಾಯಿತು. ಯಕ್ಷಗಾನ ಕಲಾವಿದ ಪ್ರಶಾಂತ ಶೆಟ್ಟಿ ನೆಲ್ಯಾಡಿ, ಪ್ರತಿಷ್ಠಾನದ ಅಧ್ಯಕ್ಷ ದಿವಾಕರ ಪದು¾ಂಜ, ಉಪಾಧ್ಯಕ್ಷ ಜಯರಾಮ ಗುಣಾಜೆ, ಕುಂಞಿ  ಮೂಲ್ಯ, ಆನಂದ ಪದು¾ಂಜ ಮತ್ತಿತರರು ಉಪಸ್ಥಿತರಿದ್ದರು. ಪ್ರತಿಷ್ಠಾನದ ಕಾರ್ಯದರ್ಶಿ ವಿಶ್ವನಾಥ ಪದು¾ಂಜ ಸ್ವಾಗತಿಸಿದರು. ಶಿಕ್ಷಕ ಸದಾಶಿವ  ಕಾರ್ಯಕ್ರಮ ನಿರೂಪಿಸಿದರು.

ಹಿರಿಯ ಭಾಗವತ ಲಕ್ಷ್ಮೀನಾರಾಯಣ ಶೆಟ್ಟಿ ಅವರನ್ನು   ಸಮ್ಮಾನಿಸಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next