ಹೊನ್ನಾವರ: ರೈತರು ಒರಟು ಮತ್ತು ಮೃದು ಸ್ವಭಾವದ ಮಲೆನಾಡ ಗಿಡ್ಡ ತಳಿಯಲ್ಲಿ ಆಯ್ದುಕೊಂಡು ಬೆಳೆಸಬೇಕಾದ ಅಗತ್ಯವಿದೆ. ಮಲೆನಾಡು ಗಿಡ್ಡ ತಳಿಯ ಹಾಲು ಶ್ರೇಷ್ಠ ಎಂದು ಅಲೌಕಿಕವಾದ, ವೈಜ್ಞಾನಿಕವಾಗಿ ಸಿದ್ಧಪಟ್ಟು. ಇದು ಲೌಕಿಕ ಸತ್ಯವಾದರೂ ಜನ ನಂಬಲು ಸಿದ್ಧರಿಲ್ಲ. ಗೃಹಿಣಿಯರು ಬೇಡವೇ ಬೇಡ ಎನ್ನುತ್ತಾರೆ. ಒಂದು ಲೋಟ ಹಾಲಿಗಾಗಿ 50 ರೂ. ಆಹಾರ ನೀಡಿ, ಹಾಲು ಕರೆಯಲು ಮುಂದೆ ಹೋದರೆ ಹಾಯುವ, ಹಿಂದೆ ಬಂದರೆ ಒದೆಯುವ ಆ ದನದ ಸಹವಾಸ ಬೇಡ ಎನ್ನುತ್ತಿದ್ದಾರೆ.
ಬೇಲಿ ಮುರಿದು ತೋಟಕ್ಕೆ ನುಗ್ಗಿ, ಎಲೆ ಬಳ್ಳಿ ತಿಂದು ಹಾಕುವ, ಅಟ್ಟಿಸಿಕೊಂಡು ಹೋದರೆ ಛಂಗನೆ ನೆಗೆದು ಮಾಯವಾಗುವ ಆ ತಳಿ ಬೇರೆ ಮನೆಯ ಮುರುಕು ಬೇಲಿ ದಾಟಿದರೂ ಬೈಗುಳ ತಪ್ಪಿದ್ದಲ್ಲ ಎನ್ನುತ್ತಾರೆ.
ಆದರೆ ಮರುಳು ಮಾಡುವ ಮಲೆನಾಡು ಗಿಡ್ಡ ತಳಿಯ ದನಗಳು ವಶೀಲಿ ಮಾಡಿ ವಸೂಲಿ ಮಾಡುವುದನ್ನು ಕಂಡು ನಗದವರಿಲ್ಲ. ಪೇಟೆಯಲ್ಲಿ ಮನೆಯಿದ್ದ ಹಲವರು ಭಕ್ತಿಯಿಂದ ಮಲೆನಾಡು ಗಿಡ್ಡ ಸಾಕುತ್ತ ಬಂದಿದ್ದಾರೆ. ಹೊಟ್ಟೆ ತುಂಬ ಆಹಾರ ಕೊಟ್ಟು, ಹಾಲು ಕರೆದು, ಮೈ ತೊಳೆದು, ಕಾಲಾಡಿಕೊಂಡು ಬರಲಿ ಎಂದು ಬಿಡುತ್ತಾರೆ. ಈ ದನಗಳು ಹೊಟ್ಟೆ ತೂಗಾಡಿಸುತ್ತ ನೇರ ಪೇಟೆ ಸುತ್ತ ತೊಡಗುತ್ತವೆ. ಕಿರಾಣಿ ಅಂಗಡಿ ಎದುರು ಹೋಗಿ ನಿಲ್ಲುತ್ತವೆ. ಹಿಂಡಿ ಕೊಟ್ಟರೆ ಮಾತ್ರ ತಿನ್ನುತ್ತವೆ. ಬಿಸ್ಕಿಟ್ ಅಥವಾ ಇನ್ನೇನು ಕೊಟ್ಟರೂ ಅದನ್ನು ಮೂಸಿ ಬಿಟ್ಟು, ಹಿಂಡಿ ಕೊಡುವವರೆಗೆ ಅಂಗಡಿ ಎದುರು ನಿಲ್ಲುತ್ತವೆ. ಒಂದಾದ ಮೇಲೆ ಇನ್ನೊಂದು ಅಂಗಡಿ, ಬಾಳೆಹಣ್ಣು ಅಂಗಡಿ. ಹೀಗೆ ತನಗೆ ಬೇಕಾದ ಆಹಾರ ಕೊಡುವ ಅಂಗಡಿಗಳ ಎದುರು ಮಾತ್ರ ನಿಲ್ಲುವ, ನಿತ್ಯ ನಿಗದಿತ ಸಮಯಕ್ಕೆ ಬಂದು ನಿಲ್ಲುವ ದನಗಳು ಮಧ್ಯಾಹ್ನ ಬಿಸಿಯಾದ ನೆಲದ ಮೇಲೆ ಮಲಗಿ ತಿಂದಿದ್ದನ್ನು ಜೀರ್ಣ ಮಾಡಿಕೊಂಡು ಸಂಜೆ ಎರಡನೇ ಸುತ್ತು ವಸೂಲಿ ಮುಗಿಸಿ ಮನೆಗೆ ಹೋಗುತ್ತದೆ. ಹಾಯದ, ಒದೆಯದ ಈ ಹಸುಗಳನ್ನು ಕಂಡು ಹಿಂಡಿ ಕೊಟ್ಟ ಅಂಗಡಿಕಾರರಿಗೂ ಖುಷಿ. ದನ ಬರದಿದ್ದರೆ ಬೇಜಾರು. ಈ ಹಸುಗಳು ಹೊತ್ತಿಗೆ ಅರ್ಧ, ಒಂದು ಲೀಟರ್ ಹಾಲು ಕೊಡುತ್ತದೆ. ಇಂತಹ ವಶೀಲಿ ಮಾಡಿ ವಸೂಲು ಮಾಡುವ ದನಗಳ ತಳಿಯನ್ನು ಗುರುತಿಸಿ, ಸಾಕಿ ಬೆಳೆಸಬೇಕಾಗಿದೆ. ಇವುಗಳ ಗಂಡು ಸಂತತಿಯನ್ನು ಗದ್ದೆ ಹೂಡಲು ಕೊಡದೆ ಉಳಿಸಿಕೊಡಬೇಕಾಗಿದೆ. ಈ ಮಾರ್ಗದಲ್ಲಿ ಆಗಬೇಕಾದ ಕೆಲಸ ಸಾಕಷ್ಟಿದೆ.
ಸಹವಾಸ ಬೇಡ ಎನ್ನುತ್ತಾರೆ ಜನ
ಮಲೆನಾಡು ಗಿಡ್ಡ ತಳಿಯ ಹಾಲು ಶ್ರೇಷ್ಠ ಎಂಬುವುದು ವೈಜ್ಞಾನಿಕವಾಗಿ ಸತ್ಯ. ಇದು ಲೌಕಿಕ ಸತ್ಯವಾದರೂ ಜನ ನಂಬಲು ಸಿದ್ಧರಿಲ್ಲ. ಒಂದು ಲೋಟ ಹಾಲಿಗಾಗಿ 50 ರೂ. ಆಹಾರ ನೀಡಿ, ಹಾಲು ಕರೆಯಲು ಮುಂದೆ ಹೋದರೆ ಹಾಯುವ, ಹಿಂದೆ ಬಂದರೆ ಒದೆಯುವ ಮಾತ್ರವಲ್ಲ, ಕರೆಯಲು ಕೂತರೆ ಲೋಟ ಹಾರಿಹೋಗುವಂತೆ ಒದೆಯುವ, ಕೈ ಬಳೆಗಳನ್ನು ಪುಡಿಗಟ್ಟಿಸುವ ಆ ದನದ ಸಹವಾಸ ಬೇಡ ಎನ್ನುತ್ತಿದ್ದಾರೆ. ಆದರೆ ಇದನ್ನು ಪೇಟೆಯಲ್ಲಿ ಮನೆಯಿದ್ದ ಹಲವರು ಭಕ್ತಿಯಿಂದ ಮಲೆನಾಡು ಗಿಡ್ಡ ಸಾಕುತ್ತ ಬಂದಿದ್ದಾರೆ. ಇದೇ ಅವರಿಗೊಂದು ಖುಷಿ.