Advertisement
ಈ ಸಂದರ್ಭದಲ್ಲಿ ಆರೋಪಕ್ಕೆ ಗುರಿಯಾದ ಎಲ್ಲರೂ ಕೋರ್ಟ್‌ನಲ್ಲಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪ್ರಸಾದ್ ಪುರೋಹಿತ್, ಯಾರೂ ನನ್ನ ಪ್ರಾಮಾಣಿಕತೆಯನ್ನು ಸಂಶಯಿಸುವಂತಿಲ್ಲ ಎಂದು ಹೇಳಿದ್ದಾರೆ. ಸಾಧ್ವಿ ಪ್ರಜ್ಞಾ ಸಿಂಗ್ ಪ್ರತಿಕ್ರಿಯೆ ನೀಡಿ, ಎನ್‌ಐಎ ಕ್ಲೀನ್‌ಚಿಟ್ ನೀಡಿದ್ದ ಹೊರತಾಗಿಯೂ ನನ್ನ ಮೇಲೆ ಆರೋಪ ಹೊರಿಸಲಾಗಿದೆ. ಹೋರಾಟ ಮುಂದುವರಿಯಲಿದೆ ಎಂದಿದ್ದಾರೆ.
ಈ ಹಿಂದೆ ಆರೋಪಿಗಳ ವಿರುದ್ಧ ಮಹಾರಾಷ್ಟ್ರ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (ಮಕೋಕಾ) ಅನ್ವಯ ಗಂಭೀರ ಆರೋಪಗಳನ್ನು ಹೊರಿಸಲಾಗಿತ್ತು. ಇತ್ತೀಚೆಗಷ್ಟೇ ಈ ಕುರಿತು ಆದೇಶ ಹೊರಡಿಸಿದ್ದ ಎನ್‌ಐಎ ಕೋರ್ಟ್, ಮಕೋಕಾ ಕಾಯ್ದೆಯನ್ವಯ ಇರುವಂಥ ಆರೋಪಗಳನ್ನು ಕೈಬಿಟ್ಟು, ಯುಎಪಿಎ ಮತ್ತು ಐಪಿಸಿ ಕಾಯ್ದೆಯಡಿ ಮಾತ್ರವೇ ಆರೋಪ ಹೊರಿಸುವಂತೆ ಸೂಚಿಸಿತ್ತು. 2008ರ ಸೆ.29ರಂದು ಮಾಲೇಗಾಂವ್‌ನಲ್ಲಿ ಸ್ಫೋಟ ಸಂಭವಿಸಿ 6 ಮಂದಿ ಅಸುನೀಗಿ, 100 ಮಂದಿ ಗಾಯಗೊಂಡಿದ್ದರು.