Advertisement
ದಾವಣಗೆರೆಯಲ್ಲಿ ಕ್ವಾರಂಟೈನ್ ಕರ್ತವ್ಯ ನಿರ್ವಹಿಸುತ್ತಿದ್ದ ಪೇದೆಯೊಬ್ಬರ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು. ಪೇದೆಗೆ ಕೋವಿಡ್ ಪಾಸೀಟೀವ್ ಬಂದಿದೆ. ಮಲೇ ಬೆನ್ನೂರಿನ ಗೌಸ್ ನಗರದಲ್ಲಿರುವ ಅವರ ಅಣ್ಣನ ಮನೆಗೆ ರಂಜಾನ್ ಹಬ್ಬಕ್ಕೆ ಬಂದಿದ್ದರು. ಪೇದೆಯ ಮಗನನ್ನು ಮಲೇಬೆನ್ನೂರಿನ ತನ್ನ ಅಣ್ಣನ ಮನೆಯಲ್ಲಿ ಬಿಟ್ಟಿದ್ದನು. ತನ್ನ ಮಗನ ಹುಟ್ಟುಹಬ್ಬಕ್ಕೆಂದು ಮಲೇಬೆನ್ನೂರಿಗೆ ಬಂದಾಗ ಆತನಿಗೆ ಕೋವಿಡ್ ಪಾಸೀಟೀವ್ ಬಂದಿದೆ ಎಂದು ಲ್ಯಾಬ್ ರಿಪೋರ್ಟ್ ಬಂದಿದೆ. ಪೇದೆ ಮತ್ತು ಮಗ ಸೇರಿದಂತೆ ಪ್ರಾಥಮಿಕ ಸಂಪರ್ಕದಲ್ಲಿದ್ದ ನಾಲ್ಕು ಜನರು ಜಿಲ್ಲಾ ಆಸ್ಪತ್ರೆಯಲ್ಲಿ ಐಸೊಲೇಶನ್ ಮಾಡಲಾಗಿದೆ. ಮಲೇಬೆನ್ನೂರಿನ ಆತನ ಅಣ್ಣನ ಮನೆಯವರ ಮತ್ತು ಪಕ್ಕದ ಮನೆಯವರ ಸದಸ್ಯರನ್ನು ಪೇದೆಯ ದ್ವಿತೀಯ ಸಂಪರ್ಕದಲ್ಲಿದ್ದ 9ಜನ ಮತ್ತು ಐದು ಮಕ್ಕಳು, ಒಬ್ಬಳು ಬಾಣಂತಿ ಮತ್ತು 5 ತಿಂಗಳ ಹಸುಗೂಸು ಸೇರಿದಂತೆ ಒಟ್ಟು 14 ಜನರನ್ನು ಮನೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಮಲೇಬೆನ್ನೂರಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ 7 ಜನರ ಗಂಟಲು ದ್ರವ ಸಂಗ್ರಹಿಸಲಾಗಿದ್ದು, ಉಳಿದ 7 ಜನರ ಗಂಟಲು ದ್ರವ ಸಂಗ್ರಹಿಸಲು ಹರಿಹರದ ಆಸ್ಪತ್ರೆಗೆ 108 ತುರ್ತು ವಾಹನದಲ್ಲಿ ಕಳುಹಿಸಿ ಕೊಡಲಾಗಿದೆ. ಇನ್ನೆರಡು ದಿನಗಳಲ್ಲಿ ವರದಿ ಬರಲಿದೆ.
Advertisement
ಪೊಲೀಸ್ ಪೇದೆಯ 14 ಜನ ಸಂಬಂಧಿಕರು ಕ್ವಾರಂಟೈನ್‌ಗೆ
11:16 AM Jun 03, 2020 | Naveen |
Advertisement
Udayavani is now on Telegram. Click here to join our channel and stay updated with the latest news.