Advertisement

60 ವರ್ಷ ಮೇಲ್ಪಟ್ಟವರ ಮಾಹಿತಿ ಸಂಗ್ರಹ: ಉಪ ತಹಶೀಲ್ದಾರ್‌

03:25 PM May 01, 2020 | Naveen |

ಮಲೇಬೆನ್ನೂರು: ಕೋವಿಡ್ ವೈರಸ್‌ ಹಬ್ಬುವುದನ್ನು ತಡೆಗಟ್ಟಲು ಸರ್ಕಾರ ಆಪ್ತಮಿತ್ರ ಆ್ಯಪ್‌ ಸಿದ್ದಪಡಿಸುತ್ತಿದ್ದು, ಆ ತಂತ್ರಾಂಶದಲ್ಲಿ 60 ವರ್ಷ ಮೇಲ್ಪಟ್ಟವರ ಮಾಹಿತಿಯನ್ನು ಅಳವಡಿಸಲಾಗುತ್ತಿದೆ ಎಂದು ಉಪ ತಹಶೀಲ್ದಾರ್‌ ಆರ್‌. ರವಿ ತಿಳಿಸಿದರು.

Advertisement

ಅವರು ಪಟ್ಟಣದ ಸುನ್ನಿ ಜಾಮಿಯಾ ಶಾದಿಮಹಲ್‌ನಲ್ಲಿ ಹೋಬಳಿ ವ್ಯಾಪ್ತಿಯ ಬಿಎಲ್‌ಒಗಳ ಸಭೆಯಲ್ಲಿ ಮಾತನಾಡಿದ ಅವರು, ಅಂತಿಮ ಮತದಾರರ ಪಟ್ಟಿಯಲ್ಲಿನ 60 ವರ್ಷ ಮೆಲ್ಪಟ್ಟವರ, ಕೋವಿಡ್‌ ಬಾಧಿತ ಪ್ರದೇಶದಿಂದ ಬಂದವರು, ಅಸಾಂಕ್ರಾಮಿಕ ರೋಗಗಳಾದ ಸಕ್ಕರೆ ಕಾಯಿಲೆ, ಹೃದಯಕ್ಕೆ ಸಂಬಂಧಿಸಿದ ಕಾಯಿಲೆ, ರಕ್ತದೊತ್ತಡ, ಅಸ್ತಮಾ, ಎಚ್‌ಐವಿ ಇರುವಂತಹ ಸಾರ್ವಜನಿಕರ ವಿವರವನ್ನು ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ನಮೂನೆ-1 ಮತ್ತು 2ರಲ್ಲಿ ಮಾಹಿತಿ ಸಿದ್ಧಪಡಿಸಿ ಒಂದು ವಾರದೊಳಗೆ ನೀಡಬೇಕು. ನಮೂನೆ 1ರಲ್ಲಿ 60 ವರ್ಷ ಮೇಲ್ಪಟ್ಟವರ ಆಧಾರ್‌, ಚುನಾವಣೆ ಗುರುತಿನ ಚೀಟಿ, ಪಡಿತರ ಚೀಟಿ ಜೊತೆಗೆ ಅವರ ಆರೋಗ್ಯದ ಸ್ಥಿತಿಗತಿಗಳನ್ನು ನಮೂದಿಸಬೇಕು. ನಮೂನೆ 2ರಲ್ಲಿ ಮತದಾರರಲ್ಲದವರ ಹಾಗೂ ಮಕ್ಕಳ ವಿವಿರ ದಾಖಲಿಸಬೇಕು ಎಂದರು.

ತಾಲೂಕು ವೈದ್ಯಾಧಿಕಾರಿ ಡಾ| ಚಂದ್ರಮೋಹನ್‌ ಬಿಎಲ್‌ ಒಗಳಿಗೆ ತರಬೇತಿ ನೀಡಿ ಮಾತನಾಡಿ, ಹರಿಹರ ತಾಲೂಕಿನಲ್ಲಿ 3,899 ಜನರ ಹೋಂ ಕ್ವಾರಂಟೈನ್‌ ಪೂರ್ಣಗೊಂಡಿದೆ. 31 ಪುರುಷರು, 17 ಮಹಿಳೆಯರು, ಐವರು ಮಕ್ಕಳು ಸೇರಿದಂತೆ 53 ಜನರು ವಿದೇಶದಿಂದ ಹರಿಹರ ತಾಲೂಕಿಗೆ ಬಂದಿದ್ದು ಅವರೆಲ್ಲಾ ಹೋಂ ಕ್ವಾರಂಟೈನ್‌ ಪೂರ್ಣಗೊಳಿಸಿದ್ದಾರೆ ಎಂದರು. ಚುನಾವಣಾ ವಿಭಾಗದ ಅ ಧಿಾರಿ ಸೋಮಶೇಖರ್‌ ಇದ್ದರು. ಸರ್ವೆ ಮಾಡಿ ದತ್ತಾಂಶ ಸಂಗ್ರಹಣೆ ಮಾಡಲು ಒಂದು ವಾರ ಸಾಕಾಗುವುದಿಲ್ಲ ಹೆಚ್ಚಿನ ಕಾಲಾವಕಾಶ ನೀಡುವಂತೆ ಸಭೆಯಲ್ಲಿದ್ದ ಬಿಎಲ್‌ಒಗಳು ಮನವಿ ಮಾಡಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next