Advertisement

ಸಡಗರದ ಬಸವೇಶ್ವರ ರಥೋತ್ಸವ

04:37 PM Feb 29, 2020 | Naveen |

ಮಲೇಬೆನ್ನೂರು: ಪಟ್ಟಣದ ಬಸವೇಶ್ವರ ದೇವರ ರಥೋತ್ಸವವು ಅಪಾರ ಭಕ್ತರ ಸಮ್ಮುಖದಲ್ಲಿ ಶುಕ್ರವಾರ ಸಂಜೆ ಸಡಗರ, ಸಂಭ್ರಮದಿಂದ ನೆರವೇರಿತು. ಶ್ರೀ ಬೀರಲಿಂಗೇಶ್ವರಸ್ವಾಮಿ, ಶ್ರೀ ಕೋಡಿ ಮಾರಮ್ಮ, ಶ್ರೀ ಏಕನಾಥೇಶ್ವರಿ ದೇವಿ, ಶ್ರೀ ಆಂಜನೇಯ ಸ್ವಾಮಿ, ಶ್ರೀ ಬಸವೇಶ್ವರ ದೇವರುಗಳು ರಥದ ಸುತ್ತ ಪ್ರದಕ್ಷಿಣೆ ಹಾಕಿದ ನಂತರ ರಥಕ್ಕೆ ಬಲಿ ಹಾಕಲಾಯಿತು.

Advertisement

ಉಪತಹಶೀಲ್ದಾರ್‌ ರವಿ ಮತ್ತು ಗ್ರಾಮದ ಹಿರಿಯರು ರಥಕ್ಕೆ ಪೂಜೆ ಸಲ್ಲಿಸಿ ರಥದ ಗಾಲಿಗೆ ತೆಂಗಿನಕಾಯಿ ಒಡೆಯುವುದರ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ಸಂಪ್ರದಾಯದಂತೆ ಯಲವಟ್ಟಿ, ಜಿಗಳಿ, ವಡೆಯರ ಬಸವಾಪುರ, ಬೇವಿನಹಳ್ಳಿ, ಹಳ್ಳಿಹಾಳ್‌, ಕೊಕ್ಕನೂರು, ಕೊಮಾರನಹಳ್ಳಿ, ಕುಂಬಳೂರು, ನಿಟ್ಟೂರು, ದಿಬ್ಬದಹಳ್ಳಿ, ಹರಳಹಳ್ಳಿ, ಹಾಲಿವಾಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನೂತನ ವಧೂವರರು ಕೈ ಕೈ ಹಿಡಿದು ರಥದ ಕಳಸ ವೀಕ್ಷಿಸಿ, ನಮಸ್ಕರಿಸಿದರು.

ಭಕ್ತರು ರಥದ ಕಳಸಕ್ಕೆ ಬಾಳೆಹಣ್ಣು, ಮೆಣಸಿನಕಾಳುಗಳನ್ನು ಎಸೆದು ಭಕ್ತಿ ಸಮರ್ಪಿಸಿದರು. ಮೆರವಣಿಗೆಯಲ್ಲಿ ಕೀಲುಕುದುರೆ, ಭಜನಾ ಮೇಳ, ಜಾಂಜ್‌, ಕುದುರೆ ಕುಣಿತ, ಹಲಗೆ ಮತ್ತು ಡೊಳ್ಳು ರಥೋತ್ಸವಕ್ಕೆ ಮೆರುಗು ತಂದಿತ್ತು.

ರಥೋತ್ಸವದ ಪ್ರಯುಕ್ತ ಜಾತ್ರಾ ಅಂಗಡಿಗಳು ಇದ್ದವು. ಪಟ್ಟಣದ ಕಾಲಭೆ„ರವ ಯುವಕ ಸಂಘದ ವತಿಯಿಂದ ಸಾರ್ವಜನಿಕರಿಗೆ 4
ಬ್ಯಾರಲ್‌ ಮಜ್ಜಿಗೆ ವಿತರಿಸಿದರು. ಪೊಲೀಸರು ಭದ್ರತೆ ಒದಗಿಸಿದ್ದರು. ಹರಿಹರ -ಹೊನ್ನಾಳಿ ಮುಖ್ಯ ರಸ್ತೆ ರಥೋತ್ಸವ ಮುಗಿಯುವವರೆಗೆ ಬಂದ್‌ ಮಾಡಲಾಗಿತ್ತು. ವಾಹನಗಳ ಸಂಚಾರಕ್ಕೆ ಬದಲಿ ಮಾರ್ಗದ ವ್ಯವಸ್ಥೆ ಮಾಡಲಾಗಿತ್ತು.

ರಥೋತ್ಸವದ ಪ್ರಾರಂಭದಲ್ಲಿ ಶ್ರೀ ಬೀರಲಿಂಗೇಶ್ವರ ಕಾರ್ಣಿಕ ನಡೆಯಿತು. ಆವಾಹಿತನು ಬಿಲ್ಲನ್ನು ಏರಿ ಸದ್ದು ಎಂದು ಮುತ್ತಿನ ರಾಶಿಗೆ ಮುತ್ತಿನ ಹನಿ ಸುರಿದು ಸಂಪಾತಲೇ ಪರಾಕ್‌” ಎಂದು ಕಾರ್ಣಿಕ ನುಡಿದನು.

Advertisement
Advertisement

Udayavani is now on Telegram. Click here to join our channel and stay updated with the latest news.

Next