Advertisement

Malebennur: ಅಪಾಯ ಮಟ್ಟ ಮೀರಿ ಹರಿಯುತ್ತಿರುವ ತುಂಗಾಭದ್ರಾ ನದಿ

05:48 PM Jul 17, 2024 | Team Udayavani |

ಮಲೇಬೆನ್ನೂರು: ಮಲೆನಾಡಿನ ಭಾಗದಲ್ಲಿ ಪುನರ್ವಸು ಮಳೆ ಆರ್ಭಟಕ್ಕೆ ತುಂಗಾ ಮತ್ತು ಭದ್ರಾ ನದಿಗಳ ನೀರಿನ ಮಟ್ಟ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ಮಲೇಬೆನ್ನೂರು ಸಮೀಪದ ಉಕ್ಕಡಗಾತ್ರಿ ಗ್ರಾಮದ ಬಳಿ ತುಂಗಾಭದ್ರಾ ನದಿ ಅಪಾಯ ಮಟ್ಟ ಮೀರಿ ಹರಿಯತ್ತಿದೆ.

Advertisement

ಕುದುರೆ ಮುಖ, ಬಾಳೆಹೊನ್ನೂರು, ಕಳಸ, ಹೊರನಾಡು, ಎನ್. ಆರ್. ಪುರ ಭಾಗಗಳಲ್ಲಿ ಪುನರ್ವಸು ಮಳೆ ಎಡಬಿಡದೆ ಸುರಿಯುತ್ತಿರುವುದರಿಂದ ಶಿವಮೊಗ್ಗ ಸಮೀಪದ ಗಾಜನೂರಿನ ತುಂಗಾಜಲಾಶಯ ತುಂಬಿ ನದಿಗೆ ಸುಮಾರು 55 ಕ್ಯೂಸೆಕ್ ಗಿಂತಲೂ ಹೆಚ್ಚು ನೀರು ನದಿಗೆ ಬಿಡುತ್ತಿರುವುದರಿಂದ ಮಲೇಬೆನ್ನೂರು ಸಮೀಪದ ಉಕ್ಕಡಗಾತ್ರಿ ಗ್ರಾಮವು ತುಂಗಾಭದ್ರಾ ನದಿ ದಡದಲ್ಲಿದ್ದು ಅಲ್ಲಿನ ಪವಾಡಪುರುಷ ಶ್ರೀ ಕರಿಬಸವೇಶ್ವರ ದೇವಸ್ಥಾನದ ಜವಳದ ಕೊಠಡಿಗಳು, ಹಣ್ಣುಕಾಯಿ ಅಂಗಡಿಗಳು, ನದಿಡದಲ್ಲಿ ಇತ್ತೀಚೆಗೆ ಪ್ರತಿಷ್ಠಾಪಿಸಿದ್ದ ಗಣೇಶನ ಮೂರ್ತಿ ಮತ್ತು ಪತ್ತೇಪುರ ಮಾರ್ಗವಾಗಿ ಉಕ್ಕಡಗಾತ್ರಿಗೆ ಹೋಗುವ ರಸ್ತೆ ಹಾಗೂ ನೂರಾರು ಎಕರೆ ಗೆದ್ದೆ, ತೋಟಗಳು ಮುಳುಗಡೆಯಾಗಿವೆ.

ಭದ್ರಾ ಜಲಾಶಯಕ್ಕೆ ಮಂಗಳವಾರ 27839 ಸಾವಿರ ಕ್ಯೂಸೆಕ್ ನೀರಿನ ಒಳ ಹರಿವು ಇದ್ದು, 144.7 ಅಡಿ ನೀರು ಸಂಗ್ರಹವಾಗಿತ್ತು. ಬುಧವಾರ 34544 ಸಾವಿರ ಕ್ಯೂಸೆಕ್ ನೀರು ಒಳಹರಿವು ಗಣನೀಯವಾಗಿ ಹೆಚ್ಚಳ ಆಗಿದ್ದರಿಂದ ಪ್ರಸ್ತುತ 148.6 ಅಡಿ ನೀರು ಸಂಗ್ರವಾಗಿದೆ. ಕಳೆದ ವರ್ಷ 141.4 ಅಡಿ ನೀರು ಸಂಗ್ರಹವಾಗಿತ್ತು.

ಪ್ರತಿ ಮಳೆಗಾಲದಲ್ಲಿ ಈ ತರಹ ಮುಳುಗಡೆ ಸಾಮಾನ್ಯ. ಅಜ್ಜಯ್ಯನ ದರ್ಶನಕ್ಕೆ ಬರುವ ಭಕ್ತರು ತಮ್ಮಿನಕಟ್ಟೆ ರಸ್ತೆ ಮತ್ತು ಕುಪ್ಪೇಲೂರು ರಸ್ತೆ ಮೂಲಕ ಬರಬಹುದಾಗಿದೆ ಎಂದು ದೇವಸ್ಥಾನ ಕಮಿಟಿ ಕಾರ್ಯದರ್ಶಿ ಸುರೇಶ್ ಮಾಹಿತಿ ನೀಡಿದರು.

Advertisement

Advertisement

Udayavani is now on Telegram. Click here to join our channel and stay updated with the latest news.

Next