Advertisement

ಮಲೆಬೆನ್ನೂರು: 9 ಜನರಲ್ಲಿ ಸೋಂಕು ದೃಢ

01:34 PM Jul 19, 2020 | Suhan S |

ಮಲೇಬೆನ್ನೂರು: ಪಟ್ಟಣದಲ್ಲಿ ಶನಿವಾರ 8 ಜನರು ಹಾಗೂ ಪಕ್ಕದ ಹರಳಹಳ್ಳಿ ಗ್ರಾಮದಲ್ಲಿ ಒಬ್ಬರಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ.

Advertisement

ಜು. 5 ರಂದು ಪಟ್ಟಣದ ಎಸ್‌.ಎಚ್‌. ರಸ್ತೆಯಲ್ಲಿರುವ ಅಸ್ಲಾಂ ಎಂಬುವವರ ಅಂತ್ಯಕ್ರಿಯೆಗೆ ದಾವಣಗೆರೆಯ ಚೌಕಿಪೇಟೆ ನಿವಾಸಿ ಬಂದಿದ್ದ. ಈ ವೇಳೆ ಆತನಲ್ಲಿ ಕೋವಿಡ್ ಪಾಸಿಟಿವ್‌ ದೃಢಪಟ್ಟಿದ್ದು, ತಕ್ಷಣ ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. 12ನೇ ವಾರ್ಡ್‌ನಲ್ಲಿರುವ ಆಸ್ಲಾಂ ಮನೆಯವರನ್ನು ಹಾಗೂ ದಾವಣಗೆರೆಯ ವ್ಯಕ್ತಿ ಉಳಿದುಕೊಂಡಿದ್ದ 17ನೇ ವಾರ್ಡ್‌ನಲ್ಲಿರುವ ಮನೆಯವರನ್ನು ಹೋಂ ಕ್ವಾರಂಟೈನ್‌ ಮಾಡಿ ಅವರ ಗಂಟಲುದ್ರವವನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು. ಶನಿವಾರ 12ನೇ ವಾರ್ಡ್‌ನ ಮನೆಯಲ್ಲಿ 4 ಜನ ಮತ್ತು 17ನೇ ವಾರ್ಡ್‌ನಲ್ಲಿ 4 ಜನರಿಗೆ ಕೊರೊನಾ ಪಾಸಿಟಿವ್‌ ವರದಿ ಬಂದಿದೆ. ಅವರನ್ನು ತುರ್ತು ವಾಹನದಲ್ಲಿ ಹರಿಹರ ಮತ್ತು ದಾವಣಗೆರೆ ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಡಲಾಗುವುದು ಎಂದು ಸಮುದಾಯ ಆಡಳಿತಾಧಿಕಾರಿ ಡಾ| ಲಕ್ಷ್ಮೀದೇವಿ ತಿಳಿಸಿದ್ದಾರೆ.

ಪಟ್ಟಣದಲ್ಲಿ ಸಾರ್ವಜನಿಕರು ಮಾಸ್ಕ್ ಹಾಕದೆ ಓಡಾಡುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಇದ್ದರೆ ಮುಂದಿನ ದಿನಗಳಲ್ಲಿ ಕೋವಿಡ್ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ ಓಡಾಡಬೇಕು. ಇಲ್ಲವಾದಲ್ಲಿ ನಿರ್ದಾಕ್ಷಿಣ್ಯವಾಗಿ ದಂಡ ವಿಧಿಸಲಾಗುವುದು ಎಂದು ಪಿಎಸ್‌ಐ ವೀರಬಸಪ್ಪ ಕುಸಲಾಪುರ್‌ ಎಚ್ಚರಿಸಿದ್ದಾರೆ. ಪುರಸಭೆ ಸಿಬ್ಬಂದಿ 12ನೇ ಮತ್ತು 17ನೇ ವಾರ್ಡ್ ನಲ್ಲಿ ಕೋವಿಡ್ ಪಾಸಿಟಿವ್‌ ಬಂದಿರುವ ಮನೆಯ 100 ಮೀಟರ್‌ ಸುತ್ತ ಬ್ಯಾರಿಕೇಡ್‌ ಹಾಕಿ ಲಾಕ್‌ಡೌನ್‌ ಮಾಡಲಾಗಿದೆ. 200 ಮೀಟರ್‌ ಸುತ್ತ ಬಫರ್‌ ಝೋನ್‌ ಎಂದು ಗುರುತಿಸಲಾಗಿದೆ ಎಂದು ಹಿರಿಯ ಆರೋಗ್ಯ ಅಧಿಕಾರಿ ಗುರುಪ್ರಸಾದ್‌ ತಿಳಿಸಿದ್ದಾರೆ.

ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರಕುಮಾರ್‌, ಉಪತಹಶೀಲ್ದಾರ್‌ ಆರ್‌. ರವಿ, ಪಿಎಸ್‌ಐ ವೀರಬಸಪ್ಪ ಕುಸಲಾಪುರ್‌, ವಾರ್ಡ್‌ ಸದಸ್ಯರು, ಪರಿಸರ ಅಭಿಯಂತರ ಉಮೇಶ್‌, ಕಿರಿಯ ಆರೋಗ್ಯ ಅಧಿಕಾರಿ ನವೀನ್‌ ಕಟ್ಟಿàಮನಿ, ಎಎಸ್‌ಐ ಬಸವರಾಜ್‌, ಆರೋಗ್ಯ ಇಲಾಖೆಯ ಕಿರಣ್‌ ಕುಮಾರ್‌, ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕ ಸಮೀರ್‌ ಇನ್ನಿತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next