Advertisement

ಸೈನಿಕರು ಮಹಿಳಾ ಕಮಾಂಡರ್‌ಗಳನ್ನು ಒಪ್ಪುತ್ತಿಲ್ಲ: ಸರಕಾರ

10:09 AM Feb 07, 2020 | Hari Prasad |

ಹೊಸದಿಲ್ಲಿ: ಮಹಿಳಾ ಅಧಿಕಾರಿಗಳ ನೇತೃತ್ವವನ್ನು ಒಪ್ಪಿಕೊಳ್ಳಲು ಪುರುಷ ಸೈನಿಕರು ಮಾನಸಿಕವಾಗಿ ಸಿದ್ಧರಿಲ್ಲದ ಕಾರಣ, ಪುರುಷರ ಪಡೆಗಳ ಕಮಾಂಡರ್‌ ಹುದ್ದೆಗೆ ಮಹಿಳೆಯರು ಸರಿ ಹೊಂದುವುದಿಲ್ಲ ಎಂದು ಕೇಂದ್ರ ಸರಕಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

Advertisement

ಸೇನೆಯಲ್ಲಿನ ಉನ್ನತ ಹುದ್ದೆಗೆ ಖಾಯಂ ನೇಮಕ ಮಾಡಿಕೊಳ್ಳುವ ಸಂಬಂಧ ಮಹಿಳಾ ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ನ್ಯಾಯಪೀಠಕ್ಕೆ ಮಾಹಿತಿ ನೀಡಿದ ಸರಕಾರದ ಪರ ವಕೀಲರು, ದೈಹಿಕ ಸಾಮರ್ಥ್ಯದ ದೃಷ್ಟಿಯಿಂದ ನೋಡಿದಾಗ ಮಹಿಳೆಯರು ಪುರುಷ ಸೈನಿಕರಿಗೆ ಸಮನಾಗಲು ಸಾಧ್ಯವಿಲ್ಲ.

ಮುಖ್ಯವಾಗಿ ಒಂದೊಮ್ಮೆ ಅವರು ಯುದ್ಧ ಕೈದಿಗಳಾಗಿ ಸೆರೆಯಾದರೆ ಪರಿಸ್ಥಿತಿಯನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಇದರೊಂದಿಗೆ ಗ್ರಾಮೀಣ ಹಾಗೂ ಸಂಪ್ರದಾಯಸ್ಥ ಕೌಟುಂಬಿಕ ಹಿನ್ನೆಲೆ ಹೊಂದಿರುವ ಸೈನಿಕರು ಮಹಿಳಾ ಅಧಿಕಾರಿಗಳನ್ನು ಒಪ್ಪಿಕೊಳ್ಳುತ್ತಿಲ್ಲ ಎಂದು ಕಾರಣ ನೀಡಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ನ್ಯಾ|ಡಿ.ವೈ.ಚಂದ್ರಚೂಡ್‌ ಮತ್ತು ನ್ಯಾ| ಅಜಯ್‌ ರಸ್ತೋಗಿ ಅವರನ್ನು ಒಳಗೊಂಡ ನ್ಯಾಯ ಪೀಠ, ‘ಸರಕಾರದ ಬದ್ಧತೆ ಮತ್ತು ಮನಸ್ಥಿತಿ ಯಲ್ಲಿನ ಬದಲಾವಣೆಯಿಂದ ಲಿಂಗ ತಾರತಮ್ಯವನ್ನು ಹೊಡೆ ದೋಡಿಸಲು ಸಾಧ್ಯವಿದೆ’ ಎಂದು ಅಭಿಪ್ರಾಯಪಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next