Advertisement
ಮಲೆ ಮಹದೇಶ್ವರನ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ಭಕ್ತರು ತೆರಳುವಾಗ ಸಂಗಮದ ಕೊಗ್ಗೆದೊಡ್ಡಿಯ ಬಳಿ ಕಾವೇರಿ ನದಿಯಲ್ಲಿ ಭಕ್ತರು ಕೊಚ್ಚಿ ಹೋದ ಘಟನೆ ಸಂಭವಿಸಿ ವರ್ಷವೇ ಕಳೆಯುತ್ತಾ ಬಂದಿದೆ. ಕಳೆದ ವರ್ಷಮಹಾಶಿವರಾತ್ರಿ ಅಂಗವಾಗಿ ಮಲೆ ಮಹದೇಶ್ವರನ ಬೆಟ್ಟಕ್ಕೆ ಹೋಗುವಾಗ ಸಂಗಮದ ಕಾವೇರಿ ನದಿ ದಾಟುವಾಗ ಹಲವಾರು ಭಕ್ತರು ನೀರಿನಲ್ಲಿ ಕೋಚ್ಚಿ ಹೋಗಿ ಕೆಲವರು ಪ್ರಾಣ ಕಳೆದುಕೊಂಡ ಘಟನೆ ಮರೆಯುವಂತದ್ದಲ್ಲ. ಮತ್ತೆ ಮಹಾಶಿವರಾತ್ರಿ ಸಮೀಪವಾಗುತ್ತಿದೆ. ಮಲೆ ಮಹದೇಶ್ವರನ ದರ್ಶನಕ್ಕೆಕಾಲ್ನಡಿಗೆಯಲ್ಲಿ ತೆರಳಲು ಈಗಾಗಲೇ ಲಕ್ಷಾಂತರ ಜನಭಕ್ತರು ಸಿದ್ಧತೆ ನಡೆಸಿದ್ದಾರೆ. ಕಳೆದ ವರ್ಷ ನಡೆದ ಘಟನೆ ಮಲೆ ಮಹದೇಶ್ವರನ ದರ್ಶನಕ್ಕೆ ಕಾಲ್ನಡಿಗೆಯಲ್ಲಿ ತೆರಳುವ ಭಕ್ತರಲ್ಲಿ ಆತಂಕ ಸೃಷ್ಟಿಸಿದೆ.
Related Articles
Advertisement
ಮುಂಜಾಗೃತ ಕ್ರಮ ಅಗತ್ಯ: ಸಾರಿಗೆ ಮಾರ್ಗದಲ್ಲಿ ಭಕ್ತರುಮಹದೇಶ್ವರನ ಬೆಟ್ಟತಲುಪಬೇಕಾದರೆ 180 ಕಿಲೋಮೀಟರ್ ಕಾಲ್ನಡಿಗೆಯಲ್ಲಿಸಾಗಬೇಕು. ಆದರೆ, ಸಂಗಮದಲ್ಲಿ ಕಾವೇರಿ ನದಿ ದಾಟಿ ಹೋದರೆ ಕೇವಲ 70 ಕಿಲೋಮೀಟರ್‌ನಲ್ಲಿ ಬೆಟ್ಟ ತಲುಪಬಹುದು. ಜೊತೆಗೆ ಏಳಗಳ್ಳಿಯ ತಾಯಿ ಮುದ್ದಮ್ಮನ ದರ್ಶನ ಪಡೆದು ಪಾದಯಾತ್ರೆ ಮಾಡುವುದು ಮತ್ತೂಂದು ಕಾರಣ. ಹಾಗಾಗಿ, ಮಹಾಶಿವರಾತ್ರಿ ಅಂಗವಾಗಿ ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಮಾಡುವ ಭಕ್ತರುಏಳಗಳ್ಳಿ ಗ್ರಾಮದಲ್ಲಿ ತಾಯಿ ಮುದ್ದಮ್ಮನ ದರ್ಶನ ಪಡೆದು ಹೋಗುತ್ತಾರೆ. ಹಲವಾರು ವರ್ಷಗಳಿಂದಭಕ್ತರು ಇದೇ ಮಾರ್ಗದಲ್ಲಿ ಮಾದಪ್ಪನ ದರ್ಶನಪಡೆಯುತ್ತಿದ್ದರೂ, ಜಿಲ್ಲಾಡಳಿತ ಮಾತ್ರ ಲಕ್ಷಾಂತರ ಭಕ್ತರಿಗೆ ಯಾವುದೇ ರಕ್ಷಣಾ ಅಥವಾ ಮುಂಜಾಗೃತ ಕ್ರಮ ಕೈಗೊಳ್ಳದೆ ಇರುವುದುಮಾತ್ರ ವಿಪರ್ಯಾಸ.
ಭಕ್ತರ ಧಾರ್ಮಿಕ ಯಾತ್ರೆ: ಕಾವೇರಿ ವನ್ಯ ಜೀವಿ ಧಾಮದಲ್ಲಿ ಸಾವಿರಾರು ಜನರು ಗುಂಪಾಗಿ ಓಡಾಡಲು ಅವಕಾಶವಿಲ್ಲ. ಆದರೂ, ಅರಣ್ಯ ಇಲಾಖೆ ಅಧಿಕಾರಿ ಗಳು ಲಕ್ಷಾಂತರ ಭಕ್ತರ ಧಾರ್ಮಿಕ ಯಾತ್ರೆಗೆ ಯಾವುದೇ ಅಡ್ಡಿ ಮಾಡಿಲ್ಲ. ಅಲ್ಲದೆ ಪ್ರತಿವರ್ಷ ಕಾಲ್ನಡಿಗೆಯಲ್ಲಿ ಕಾವೇರಿ ನದಿಯಲ್ಲಿ ಸಾಗುವ ಭಕ್ತರರಕ್ಷಣೆಗೆ ಒಂದು ದಡದಿಂದ ಮತ್ತೂಂದು ದಡಕ್ಕೆ ಹಗ್ಗ ಕಟ್ಟಿ ಭಕ್ತರಿಗೆ ನೆರವಾಗಿದ್ದಾರೆ. ಇನ್ನಾದರೂ ಜಿಲ್ಲಾಡಳಿತಎಚ್ಚೆತ್ತುಕೊಂಡು ಕಳೆದ ವರ್ಷ ನಡೆದ ಅವಘಡ ಸಂಭವಿಸದಂತೆ ನೊಡಿಕೊಳ್ಳಬೇಕಿದೆ.
ಆಯಾ ತಪ್ಪಿದರೆ ಅನಾಹುತ : ಬೊಮ್ಮಸಂದ್ರ ಕಾಲ್ಕಡ ಮಾರ್ಗವಾಗಿ ಸಂಗಮದ ಕೊಗ್ಗೆದೊಡ್ಡಿ ಬಳಿ ಕಾವೇರಿ ನದಿ ದಾಟಿ ಅರಣ್ಯದಲ್ಲೇ ಹೋಗುವ ಭಕ್ತರು, ಕಾಡು ಪ್ರಾಣಿಗಳು ಯಾವಾಗ ಎಲ್ಲ ಹೇಗೆ ದಾಳಿ ಮಾಡುತ್ತವೂ ಎಂಬ ಜೀವ ಭಯದಲ್ಲೆ ಸಾಗಬೇಕಾದಅನಿವಾರ್ಯತೆಯೂ ಭಕ್ತರಿಗಿದೆ. ಸಂಗಮದ ಕೊಗ್ಗೆದೊಡ್ಡಿಯ ಬಳಿ ಕಾವೇರಿನದಿ ದಾಟುವಾಗ ಭಕ್ತರು ಎಚ್ಚರಿಕೆಯಿಂದ ಜೀವ ಕೈಯಲ್ಲಿಡಿದುಕೊಂಡೆಸಾಗಬೇಕು. ಆಯಾ ತಪ್ಪಿದರೆ ಅನಾಹುತ ಕಟ್ಟಿಟ್ಟ ಬುತ್ತಿ. ನದಿಯಲ್ಲಿ ಸಾಗುವಾಗ ಕಲ್ಲುಗಳ ಮೇಲೆ ಕಾಲು ಜಾರಿ ಬಿದ್ದಿರುವ ಉದಾಹರಣೆಗಳು ಇವೆ.
ಅಗತ್ಯ ಕ್ರಮ ಕೈಗೊಳ್ಳಿ :
ಈಗಾಗಲೇ ಮಹಾಶಿವರಾತ್ರಿ ಸಮೀಪವಾಗುತ್ತಿದೆ. ಮಹಾದೇಶ್ವರನ ಬೆಟ್ಟಕ್ಕೆ ಕಾಲ್ನಡಿಗೆ ತೆರಳಲು ಭಕ್ತರು ಸಹ ಸಿದ್ಧತೆಯಲ್ಲಿದ್ದಾರೆ. ಹಾಗಾಗಿ, ಮಹದೇಶ್ವರನ ಬೆಟ್ಟಕ್ಕೆ ಕನ್ನಡಿಗೆಯಲ್ಲಿತೆರಳುವ ಭಕ್ತರು ಸಂಗಮದ ಕಾವೇರಿ ನದಿಯಲ್ಲಿ ಸುರಕ್ಷಿತವಾಗಿ ಒಂದು ಕಡೆಯಿಂದ ಮತ್ತೂಂದು ಕಡೆಗೆ ಓಡಾಡಲು ಅಗತ್ಯ ಕ್ರಮ ಕೈಗೊಂಡು ಜಿಲ್ಲಾಡಳಿತ ಭಕ್ತರಿಗೆ ರಕ್ಷಣೆ ನೀಡಬೇಕು ಎಂಬುದು ಭಕ್ತರ ಒತ್ತಾಯವಾಗಿದೆ.
ಭಕ್ತರ ರಕ್ಷಣೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪತ್ರ :
ಕಳೆದ ವರ್ಷ ಸಂಗಮದಲ್ಲಿ ನಡೆದ ಅವಘಡ ಮರುಕಳಿಸಿದಂತೆ ಎಚ್ಚರಿಕೆ ವಹಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಪ್ರತಿವರ್ಷ ಬೆಂಗಳೂರು ಗ್ರಾಮಾಂತರ ಹಾಗೂ ಜಿಲ್ಲೆಯನಾನಾ ಭಾಗಗಳಿಂದ ಲಕ್ಷಾಂತರ ಭಕ್ತರು ಮಹಾಶಿವರಾತ್ರಿ ಅಂಗವಾಗಿ ಮಲೆ ಮಹದೇಶ್ವರನ ಬೆಟ್ಟಕ್ಕೆ ಹೊಗುವ ಪದ್ಧತಿ ಇದೆ.ಕಳೆದ ವರ್ಷ ಕಾಲ್ನಡಿಗೆಯಲ್ಲಿ ತೆರಳುವಾಗ ಕಾವೇರಿ ನದಿಯಲ್ಲೇ ಐದಾರು ಮಂದಿ ಭಕ್ತರು ಕೊಚ್ಚಿ ಹೋಗಿದ್ದರು. ಹಾಗಾಗಿ,ಪ್ರತಿ ವರ್ಷದಂತೆ ಈ ವರ್ಷವೂ ಸಹ ಲಕ್ಷಾಂತರ ಮಂದಿ ಭಕ್ತರು, ಕಾಲ್ನಡಿಗೆಯಲ್ಲಿ ತೆರಳುವುದರಿಂದ ಭಕ್ತರಿಗೆಅನುಕೂಲವಾಗುವಂತೆ ನದಿಯ ನೀರನ್ನು ಕಡಿಮೆ ಮಾಡಿ ಕಾಡುಪ್ರಾಣಿಗಳಿಂದ ರಕ್ಷಣೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಭಕ್ತರಿಗೆ ಅನುಕೂಲ ಕಲ್ಪಿಸಿ ಜೊತೆಗೆ ಮುಂಜಾಗ್ರತೆ ಕ್ರಮ ಕೈಗೊಳ್ಳುವಂತೆ ಪತ್ರ ಬರೆದಿದ್ದಾರೆ.
ಕಳೆದ ವರ್ಷ ಮಾದಪ್ಪನ ಬೆಟ್ಟಕ್ಕೆ ಹೋಗುವಾಗ ನಡೆದಿರುವ ಘಟನೆ ಮರುಕಳಿಸದಂತೆ ಮುನ್ನೆಚ್ಚರಿಕೆವಹಿಸಲು ಈಗಾಗಲೇ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿಗಳು ಸಭೆ ಕರೆದು ಅಗತ್ಯ ಕ್ರಮ ಕೈಗೊಳ್ಳಲು ತಿರ್ಮಾನಿಸುವುದಾಗಿತಿಳಿಸಿದ್ದಾರೆ. ಭಕ್ತರ ಸುರಕ್ಷತೆಗೆ ಶೀಘ್ರದಲ್ಲೇ ಸಭೆಕರೆದು ತಿರ್ಮಾನ ಕೈಗೊಳ್ಳಲಾಗುವುದು.– ಶಿವಕುಮಾರ್, ಗ್ರೇಡ್-2 ತಹಶೀಲ್ದಾರ್
-ಬಿ.ಟಿ.ಉಮೇಶ್, ಬಾಣಗಹಳ್ಳಿ