Advertisement

PM Modi ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಮಾಲ್ಡೀವ್ಸ್ 3 ಸಚಿವರ ಅಮಾನತು!

10:18 PM Jan 07, 2024 | Team Udayavani |

ಮಾಲ್ಡೀವ್ಸ್ : ಪ್ರಧಾನಿ ನರೇಂದ್ರ ಮೋದಿಯವರ ಇತ್ತೀಚಿನ ಲಕ್ಷದ್ವೀಪ ಪ್ರವಾಸದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಹೇಳಿಕೆಗಳನ್ನು ಹಂಚಿಕೊಂಡ ನಂತರ ಮಾಲ್ಡೀವ್ಸ್ ಸರಕಾರ ತನ್ನ ಮೂವರು ಸಚಿವರನ್ನು ಭಾನುವಾರ ಅಮಾನತುಗೊಳಿಸಿದೆ.

Advertisement

ಭಾರತವು ದ್ವೀಪ ರಾಷ್ಟ್ರ ದೊಂದಿಗೆ ಈ ಗಂಭೀರ ವಿಚಾರವನ್ನು ಪ್ರಸ್ತಾಪಿಸಿದ ನಂತರ ಸಚಿವರಾದ ಮಲ್ಶಾ ಶರೀಫ್, ಮರಿಯಮ್ ಶಿಯುನಾ ಮತ್ತು ಅಬ್ದುಲ್ಲಾ ಮಹಜೂಮ್ ಮಜೀದ್ ಅವರನ್ನು ತಮ್ಮ ಸ್ಥಾನಗಳಿಂದ ಅಮಾನತುಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಮಾಲ್ಡೀವ್ಸ್ ವಕ್ತಾರರು ತಿಳಿಸಿದ್ದಾರೆ.

ಗಮನಾರ್ಹ ವಿಚಾರವೆಂದರೆ , ಪ್ರಧಾನಿ ಮೋದಿ ಲಕ್ಷದ್ವೀಪ ಭೇಟಿಯ ಚಿತ್ರಗಳನ್ನು ಪೋಸ್ಟ್ ಮಾಡಿದ ನಂತರ ಮತ್ತು ಭಾರತೀಯರಿಗೆ ಪ್ರವಾಸಿ ತಾಣವಾಗಿ ದ್ವೀಪವನ್ನು ಪ್ರವಾಸಿ ತಾಣವಾಗಿ ಬೆಳೆಸಬೇಕೆಂದು ಕರೆ ನೀಡಿದ ಬಳಿಕ, ಪ್ರಧಾನಿ ಮೋದಿಯವನ್ನು ವಿದೂಷಕ ಮತ್ತು ಗೊಂಬೆ ಎಂದು ಕರೆದಿದ್ದರು. ಸದ್ಯ ಸಚಿವರುಗಳು ಮಾಡಿದ ಎಕ್ಸ್ ಪೋಸ್ಟ್ ಗಳನ್ನು ಅಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next