Advertisement

Indian army ಮರಳಲು ಮಾಲ್ದೀವ್ಸ್‌ ಅಧ್ಯಕ್ಷ ಗಡುವು

12:11 AM Feb 06, 2024 | Team Udayavani |

ಮಾಲೆ: “ಮಾ.10ರೊಳಗೆ ಮೊದಲ ಹಂತದ ಭಾರತದ ಸೇನಾ ಸಿಬ್ಬಂದಿಯನ್ನು ಮರಳಿ ಕಳಿಸಲಾಗು ವುದು. ಮೇ 10ರೊಳಗೆ ಉಳಿದ ಸೇನಾ ಸಿಬ್ಬಂದಿ ದೇಶ ತೊರೆಯಬೇಕು’ - ಹೀಗೆಂದು ಚೀನಾ ಕುಮ್ಮಕ್ಕಿ ನೊಂದಿಗೆ ಅಧಿಕಾರಕ್ಕೆ ಬಂದಿರುವ ಮಾಲ್ದೀವ್ಸ್‌ಅಧ್ಯಕ್ಷ ಮೊಹಮ್ಮದ್‌ ಮುಯಿಜ್ಜು ಸವಾಲು ಹಾಕಿದ್ದಾರೆ. ತಮಾಷೆಯೆಂದರೆ ಒಟ್ಟು 81 ಮಂದಿ ಸಂಸದರು ಇರುವ ಸಂಸತ್‌ನಲ್ಲಿ ಅಧ್ಯಕ್ಷರ ಭಾಷಣ ಕೇಳಲು ಇದ್ದದ್ದು ಕೇವಲ 24 ಸದಸ್ಯರು ಮಾತ್ರ. ಉಳಿದ 56 ಮಂದಿ ಸದಸ್ಯರು ಬಹಿಷ್ಕರಿಸಿದ್ದರು.

Advertisement

ಕಳೆದ ವರ್ಷದ ಚುನಾವಣೆಯಲ್ಲಿ ಜಯಗಳಿಸಿದ ಬಳಿಕ ಮೊದಲ ಬಾರಿಗೆ ಸಂಸತ್‌ ಅಧಿವೇಶನ ಉದ್ದೇಶಿಸಿ ಮಾತನಾಡಿದ ಮುಯಿಜ್ಜು “ಮಾಲ್ಡೀವ್ಸ್‌ನ ಬಹುತೇಕರು ನನ್ನ ಆಡಳಿತವನ್ನು ಬೆಂಬಲಿಸುತ್ತಾರೆ. ವಿದೇಶಿ ಸೇನೆಯ ಉಪಸ್ಥಿತಿ ಕಿತ್ತೂಗೆಯುವ, ಹಿಂದೂ ಮಹಾ ಸಾಗರದಲ್ಲಿ ಕಳೆದು ಕೊಂಡಿರುವ ಮಾಲ್ದೀವ್ಸ್‌ಹಿಡಿತ ವನ್ನು ಮರುಸ್ಥಾಪಿಸುವ ಉದ್ದೇಶಕ್ಕೆ ಜನರ ಬೆಂಬಲ ಇದೆ’ ಎಂದು ಹೇಳಿ ಕೊಂಡಿದ್ದಾರೆ.

ಭಾರತದ ಸೇನಾ ಸಿಬ್ಬಂದಿ ಬಗ್ಗೆ ಮಾತನಾಡಿದ ಅವರು, ಮಾ.10ರಂದು ಮೊದಲ ಹಂತದಲ್ಲಿ ಒಂದಷ್ಟು ಸಿಬ್ಬಂದಿ, ಮೇ 10ರ ಒಳಗಾಗಿ ಪೂರ್ಣ ಪ್ರಮಾಣದಲ್ಲಿ ಪೂರ್ಣ ಪ್ರಮಾಣದಲ್ಲಿ ವಾಪಸಾಗಬೇಕು ಎಂದಿದ್ದಾರೆ. ಈ ಬಗ್ಗೆ ಭಾರತ ಸರಕಾರದ ಜತೆಗೆ ಮಾತುಕತೆಯೂ ನಡೆದಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.