Advertisement

Maldives: ಭಾರತ ಜತೆ ಕೈಜೋಡಿಸಿದರೆ ವಿತ್ತೀಯ ಬಿಕ್ಕಟ್ಟು ಶಮನ: ಮುಯಿಜ್ಜುಗೆ ಸಲಹೆ

08:31 AM Mar 26, 2024 | Team Udayavani |

ಮಾಲೆ: ಭಾರತದ ಜತೆಗೆ ಯಾವತ್ತೂ ಸ್ನೇಹವನ್ನು ಕಾಯ್ದುಕೊಂಡು ಬರಬೇಕು. ಆಗ ಮಾತ್ರ ಆರ್ಥಿಕ ಬಿಕ್ಕಟ್ಟಿನಿಂದ ನಾವು ಹೊರಬರಲು ಸಾಧ್ಯ ಎಂದು ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್‌ ಮುಯಿಜ್ಜು ಅವರಿಗೆ ಮಾಜಿ ಇಬ್ರಾಹಿಂ ಮೊಹಮ್ಮದ್‌ ಸೋಲಿಹ್‌ ಒತ್ತಾಯಿಸಿದ್ದಾರೆ.

Advertisement

ಭಾರತದಿಂದ ಪಡೆದಿರುವ ಸಾಲವನ್ನು ಮರು ಪಾವತಿ ಮಾಡುವ ನಿಟ್ಟಿನಲ್ಲಿ ಹೆಚ್ಚಿನ ಸಮಯಾವಕಾಶ ಕೊಡಬೇಕು ಎಂದು ಮುಯಿಜ್ಜು ಮನವಿ ಮಾಡಿರುವಂತೆಯೇ ಈ ಬೆಳವಣಿಗೆ ನಡೆದಿದೆ. ದೇಶಕ್ಕೆ ಉಂಟಾಗಿರುವ ವಿತ್ತೀಯ ಬಿಕ್ಕಟ್ಟು ಭಾರತದಿಂದ ಪಡೆದ ಸಾಲದಿಂದ ಉಂಟಾಗಿಲ್ಲ. ಚೀನಾದಿಂದ ಮಾಲ್ಡೀವ್ಸ್‌  97 ಸಾವಿರ ಕೋಟಿ ರೂ. ಸಾ ಲ ಪಡೆದಿದ್ದರೆ, ಭಾರತದಿಂದ 43216 ಕೋಟಿ ರೂ. ಸಾಲ ಪಡೆದಿದೆ.

ಭಾರತದ ಜತೆಗೆ ಸ್ನೇಹದ ಹಸ್ತ ಚಾಚಿದರೆ, ನಿಜಕ್ಕೂ ವಿತ್ತೀಯ ಸಂಕಷ್ಟದಿಂದ ಪಾರಾಗಲು ಸಾಧ್ಯವಿದೆ. ಈ ಬಗ್ಗೆ ಅಧ್ಯಕ್ಷ ಮುಯಿಜ್ಜು ಮನಸ್ಸು ಮಾಡಬೇಕಾಗಿದೆ ಎಂದು ಹೇಳಿದ್ದಾರೆ. ಮುಯಿಜ್ಜು ಭಾರತದ ಜತೆ ಸುಖಾಸುಮ್ಮನೆ ಕಾಲು ಕೆರೆದುಕೊಂಡು ಬರುತ್ತಿರುವ ಹೊತ್ತಲ್ಲೇ ಸೋಲಿಹ್‌ರಿಂದ ಈ ಸಲಹೆ ಕೇಳಿಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next