Advertisement

Viral Video: ಪುರುಷ ಸಿಬಂದಿ ಮುಂದೆಯೇ ಶಾರ್ಟ್ಸ್ ಬಿಚ್ಚಿ ಟ್ರಯಲ್ ನೋಡಿದ ಯುವತಿ!

04:51 PM Apr 13, 2024 | Team Udayavani |

ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯ ಪಾಲಿಕಾ ಬಜಾರ್‌ನಲ್ಲಿ ನಡೆದಿದೆ ಎನ್ನಲಾದ ಘಟನೆಯ ವೀಡಿಯೋವೊಂದು ವೈರಲ್ ಆಗುತ್ತಿದೆ. ಬಟ್ಟೆ ಅಂಗಡಿಯಲ್ಲಿ ಯುವತಿಯೊಬ್ಬಳು ಅಂಗಡಿಯ ಪುರುಷ ಸಿಬಂದಿಯ ಎದುರೇ ಶಾರ್ಟ್ಸ್ ತೆಗೆದು ಬಟ್ಟೆ ಬದಲಾಯಿಸಿದ್ದಾಳೆ.

Advertisement

ಘಟನೆಯ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹೆಚ್ಚಿನ ಸಾಮಾಜಿಕ ತನದಲ್ಲಿನ ಪೋಸ್ಟ್ ಗಳು ದೆಹಲಿಯ ಪಾಲಿಕಾ ಬಜಾರ್‌ನಳ್ಳಿ ನಡೆದಿದೆ ಎಂದು ಹೇಳಿಕೊಂಡಿದ್ದರೂ, ಕೆಲವರು ಗೋವಾದ ಬಟ್ಟೆ ಅಂಗಡಿಯಲ್ಲಿ ನಡೆದ ಘಟನೆ ಎಂದೂ ಹೇಳಿದ್ದಾರೆ.

ಇಂತಹ  ರೀಲ್ ಜ್ವರವು ಸಾರ್ವಜನಿಕ ಸ್ಥಳಗಳಾದ ಮೆಟ್ರೋಗಳು, ಬಸ್‌ಗಳು ಮತ್ತು ಇತರ ರೀತಿಯ ಸಾರ್ವಜನಿಕ ಸಾರಿಗೆಯನ್ನು ಆಕ್ರಮಿಸಿಕೊಂಡಿದ್ದು, ಜನರಿಗೆ ಉಪದ್ರವದ ಮೂಲವಾಗಿದೆ ಎಂದು ಹಲವಾರು ಮಂದಿ ಆಕ್ರೋಶ ಹೊರ ಹಾಕಿದ್ದಾರೆ.

ಬಟ್ಟೆ ಬದಲಾಯಿಸುವ ಕೊಠಡಿ ಲಭ್ಯವಿದ್ದರೂ ಶಾರ್ಟ್ಸ್ ಬದಲಾಯಿಸಲು ಮಹಿಳೆ ಪುರುಷನೊಬ್ಬನ ಮುಂದೆ ವಿವಸ್ತ್ರಗೊಳ್ಳುವುದು ನಾಚಿಕೆಗೇಡಿನ ಸಂಗತಿ ಎಂದು ನೆಟಿಜನ್‌ಗಳು ಹೇಳಿದ್ದಾರೆ. ಈ ಬಾರಿ ಎಲ್ಲಾ ಮಿತಿಗಳನ್ನು ಮೀರಿದೆ ಮತ್ತು ವೀಡಿಯೋ ಕೆಟ್ಟ ಅಭಿರುಚಿಯಲ್ಲಿದೆ ಎಂದು ಹಲವಾರು ಬಳಕೆದಾರರು ಕಾಮೆಂಟ್ ಮಾಡಿದ್ದು, ಇನ್ನು ಕೆಲವರು ಇದನ್ನೇ ಪುರುಷನೊಬ್ಬ ಮಹಿಳೆಯ ಎದುರು ಮಾಡಿದ್ದರೆ ಪರಿಸ್ಥಿತಿ ಏನು ಎಂದೂ ಆಕ್ರೋಶ ಹೊರ ಹಾಕಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next