Advertisement

Maldives Effect; ಜಾಲತಾಣದಲ್ಲಿ ಸದ್ದು ಮಾಡಿದ ಮರವಂತೆಯ ಕಡಲ ಅಲೆಗಳು

01:13 AM Jan 09, 2024 | Team Udayavani |

ಕುಂದಾಪುರ: ಭಾರತವನ್ನು ಕೆಣಕಲು ಹೋಗಿ ತನ್ನ ಆದಾಯ ಮೂಲಕ್ಕೆ ಕೊಡಲಿ ಏಟು ಹಾಕಿಸಿಕೊಂಡ ಮಾಲ್ಡೀವ್ಸ್‌ ಪರಿಣಾಮ ಮರವಂತೆ ಕಡಲತೀರದಲ್ಲೂ ಕಾಣಿಸಿ ಕೊಂಡಿದೆ. ದೇಶದ ಪ್ರತಿಷ್ಠಿತರು ಮರವಂತೆ ಕಡಲತಡಿಯ ಛಾಯಾಚಿತ್ರಗಳನ್ನು ವಿವಿಧ ಸಾಮಾಜಿಕ ಜಾಲತಾಣ ಗಳಲ್ಲಿ ಹಂಚಿಕೊಂಡು ಪ್ರವಾಸಕ್ಕೆ ಮಾಲ್ಡೀವ್ಸ್‌ಗೇ ಹೋಗಬೇಕಿಲ್ಲ. ಮರವಂತೆ ಯಲ್ಲೇ ಸೊಬಗಿದೆ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಕರ್ನಾಟಕದ ಉಡುಪಿಯ ಕಡಲ ಅಲೆ ಜಗತ್ತಿನೆಲ್ಲೆಡೆ ಸದ್ದು ಮಾಡಿದೆ.

Advertisement

ಸೆಹ್ವಾಗ್‌ ಬ್ಯಾಟಿಂಗ್‌
ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್‌ ಸೇರಿದಂತೆ ಜಾಲ ತಾಣದಲ್ಲಿ ನೂರಾರು ಮಂದಿ ಭಾರತದ ಕಡಲ ತೀರದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸೆಹ್ವಾಗ್‌ ಅಂತೂ ಮರವಂತೆಯ ಫೋಟೋ ಹಾಕಿ, ಉಡುಪಿಯ ಸುಂದರ ಕಡಲತೀರಗಳು, ಪುದುಚೇರಿಯ ಪ್ಯಾರಡೈಸ್‌ ಬೀಚ್‌, ಅಂಡಮಾನ್‌ನ ನೀಲ್‌ ಮತ್ತು ಹ್ಯಾವ್ಲಾಕ್‌ ಮತ್ತು ದೇಶದಾದ್ಯಂತ ಅನೇಕ ಸುಂದರ ಕಡಲತೀರಗಳಿವೆ. ಇನ್ನೂ ಅನೇಕ ಅನ್ವೇಷಿಸದ ಸ್ಥಳಗಳಿವೆ. ಎಲ್ಲ ಅವಘಡಗಳನ್ನು ಅವಕಾಶಗಳಾಗಿ ಪರಿವರ್ತಿಸಲು ಭಾರತ ಹೆಸರುವಾಸಿ. ಮಾಲ್ಡೀವ್ಸ್‌ ಮಂತ್ರಿಗಳು ನಮ್ಮ ದೇಶ ಮತ್ತು ನಮ್ಮ ಪ್ರಧಾನಿಯನ್ನು ಟೀಕಿಸಿದ್ದರಿಂದ, ದೇಶೀಯ ಪ್ರವಾಸಿತಾಣಗಳನ್ನು ಆಕರ್ಷಕವಾಗಿಸಲು, ನಮ್ಮ ಆರ್ಥಿಕತೆಯನ್ನು ಹೆಚ್ಚಿಸಲು ಮೂಲ ಸೌಕರ್ಯ ಒದಗಿಸಲು ಭಾರತಕ್ಕೆ ದೊಡ್ಡ ಅವಕಾಶ ದೊರೆತಂತಾಗಿದೆ.

ದಯವಿಟ್ಟು ನಿಮ್ಮ ನೆಚ್ಚಿನ ಅನ್ವೇಷಿಸದ ಸುಂದರ ಸ್ಥಳಗಳನ್ನು ಹೆಸರಿಸಿ ಎಂದು ಸೆಹ್ವಾಗ್‌ ಎಕ್ಸ್‌ನಲ್ಲಿ ಹಾಕಿದ್ದಾರೆ. ಇದನ್ನು ನಟ ಅಮಿತಾಭ್‌ ಬಚ್ಚನ್‌ ಸೇರಿದಂತೆ 13 ಸಾವಿರ ಜನ ಅನುಮೋದಿಸಿ ಹಂಚಿ ಕೊಂಡಿದ್ದಾರೆ. 75 ಸಾವಿರ ಮಂದಿ ಮೆಚ್ಚುಗೆ ಸೂಚಿಸಿದ್ದಾರೆ. ಬಹುತೇಕ ಉತ್ತರ ಭಾರತದ ಮಂದಿ ಎಕ್ಸ್‌ನಲ್ಲಿ ಸೆಹ್ವಾಗ್‌ ಪೋಸ್ಟ್‌ ಹಂಚಿಕೊಂಡಿದ್ದು ದಕ್ಷಿಣ ಭಾರತದ ಪ್ರವಾಸಿ ತಾಣ ದೇಶ ದೆಲ್ಲೆಡೆ ಜನ ನೋಡು ವಂತಾಗಿದೆ. ನೆಟ್ಟಿಗರ ಪ್ರಶ್ನೆಗೆ ಸಹಮತ ಸೂಚಿಸಿದ ಸೆಹ್ವಾಗ್‌ ಉಡುಪಿಯ ಕಡಲ ತಡಿ, ದೇಗುಲಗಳು, ರುಚಿಯಾದ ಆಹಾರ ಅದ್ಭುತ ಎಂದಿದ್ದಾರೆ.


ವಿರೋಧ
ಅವರು ಭಾರತ ವನ್ನು ಹೊರ ಗಿಡಿ ಎಂದರು. ಮಾಲ್ಡೀವ್ಸ್‌ ನ ಅಗತ್ಯ ಇಲ್ಲದಷ್ಟು ಪ್ರವಾಸಿ ತಾಣಗಳು ನಮ್ಮಲ್ಲಿವೆ ಎಂದು ಕೆಲವರು ಬರೆದು ಕೊಂಡುಮರವಂತೆ ಕಡಲ ತೀರದ ಸೊಬಗನ್ನು ಹಂಚಿ ದ್ದಾರೆ.

ರಾ.ಹೆ. 66ರ ಒಂದು ಬದಿಯಲ್ಲಿ ಸಮುದ್ರ ಮತ್ತು ಇನ್ನೊಂದು ಬದಿಯಲ್ಲಿ ನದಿಯು ಇರುವ ಕಾರಣದಿಂದ ಮರವಂತೆಯನ್ನು ವಿಶಿಷ್ಟ ಬೀಚ್‌ ಎಂದು ಗುರುತಿಸುತ್ತಾರೆ. ಈ ದೃಶ್ಯ ದೇಶದಲ್ಲಿ ಬೇರೆಲ್ಲೂ ಸಿಗದು. ಅಲ್ಲದೆ ಈ ಕಡಲತೀರವು ತುಂಬಾ ಉದ್ದ. ಇದು ದೀರ್ಘ‌ ನಡಿಗೆ, ಜಾಗಿಂಗ್‌, ಸೂರ್ಯ ಸ್ನಾನ, ವಿಶ್ರಾಂತಿಗೆ ಸೂಕ್ತ. ಡೆಲ್ಟಾ ಪಾಯಿಂಟ್‌ಗಳಲ್ಲಿ, ರಸ್ತೆಯ ಒಂದು ಬದಿಯಲ್ಲಿ ಸಮುದ್ರ ಮತ್ತು ಇನ್ನೊಂದು ಬದಿ ನದಿಯನ್ನು ನೋಡುತ್ತೇವೆ. ಆದರೆ ಮರವಂತೆಯಲ್ಲಿ ಡೆಲ್ಟಾ ಪಾಯಿಂಟ್‌ ಇಲ್ಲ. ಸೌಪರ್ಣಿಕಾ ನದಿಯು ಯು- ಟರ್ನ್ ಮಾಡುವ ಮೊದಲು ಸಮುದ್ರಕ್ಕೆ ಅತ್ಯಂತ ಬಳಿ ಬಂದು, ಕುಂದಾಪುರದಲ್ಲಿ ಸಮುದ್ರ ಸೇರುತ್ತದೆ.

Advertisement

ಸ್ಕೂಬಾ, ಕಯಾಕಿಂಗ್‌
ಸೌಪರ್ಣಿಕಾ ನದಿಯಲ್ಲಿ ದೋಣಿ ವಿಹಾರ ಮತ್ತು ಕಯಾಕಿಂಗ್‌ ಇದೆ. ಸ್ಥಳೀಯ ಮೀನುಗಾರರು ಸೌಪರ್ಣಿಕೆಯಲ್ಲಿ ಬೋಟಿಂಗ್‌ ಮತ್ತು ಕಯಾಕಿಂಗ್‌ ಚಟುವಟಿಕೆಗಳನ್ನು ಒದಗಿಸುತ್ತಾರೆ. ಈ ಸಾಹಸವನ್ನು ಮಾಡಲು ಅಕ್ಟೋಬರ್‌ನಿಂದ ಮೇ ವರೆಗೆ ಸೂಕ್ತಕಾಲ. ದೋಣಿ ವಿಹಾರ ಸಂದರ್ಭ ಅನೇಕ ಕುದ್ರುಗಳನ್ನು ನೋಡಬಹುದು. ಮಾರಸ್ವಾಮಿ ದೇವಾಲಯದಲ್ಲಿ ಕುದ್ರು ಒಂದಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಯಿದೆ. ಇತ್ತೀಚೆಗೆ ಸ್ಕೂಬಾ ಡೈವಿಂಗ್‌ ಕೂಡ ಕುಂದಾಪುರ ಪರಿಸರದಲ್ಲಿ ಆರಂಭವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next