Advertisement

ಭಾರತಕ್ಕೆ ಪ್ರತಿನಿಧಿ ಕಳಿಸಿದಕ್ಕೆ ಮಾಲ್ಡೀವ್ಸ್‌ ರಾಯಭಾರಿ ಸ್ಪಷ್ಟನೆ

08:15 AM Feb 09, 2018 | |

ಹೊಸದಿಲ್ಲಿ, /ಮಾಲೆ: ಮಾಲ್ಡೀವ್ಸ್‌ ನಲ್ಲಿ ತುರ್ತು ಪರಿಸ್ಥಿತಿ ಜಾರಿಯಾದ ಬಳಿಕ ಅಧ್ಯಕ್ಷ ಅಬ್ದುಲ್ಲಾ ಯಮೀನ್‌ರ ವಿಶೇಷ ಪ್ರತಿನಿಧಿ ಮೊದಲಾಗಿ ಭಾರತಕ್ಕೇ ಆಗಮಿಸುವವರಿದ್ದರು. ಆದರೆ ಭಾರತದ ನಾಯಕರು ವಿದೇಶ ಪ್ರವಾಸಗಳಲ್ಲಿ ನಿಗದಿಯಾಗಿದ್ದುದರಿಂದ ಚೀನಾ, ಪಾಕಿಸ್ಥಾನ, ಸೌದಿ ಅರೇಬಿಯಾಗೆ ಅವರನ್ನು ಕಳುಹಿಸಲಾಗಿದೆ ಎಂದು ಭಾರತದಲ್ಲಿರುವ ಮಾಲ್ಡೀವ್ಸ್‌ ರಾಯಭಾರಿ ಅಹ್ಮದ್‌ ಮೊಹಮ್ಮದ್‌ ಹೇಳಿದ್ದಾರೆ. 

Advertisement

ಸಂದರ್ಶನವೊಂದರಲ್ಲಿ ಮಾತನಾಡಿದ ಅವರು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಈಗಾಗಲೇ ವಿದೇಶ ಪ್ರವಾಸದಲ್ಲಿದ್ದಾರೆ. ಪ್ರಧಾನಿ ಮೋದಿ  ಫೆ.9ರಿಂದ ವಿದೇಶ ಪ್ರವಾಸ ಕೈಗೊಳ್ಳಲಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಮಾಲ್ಡೀವ್ಸ್‌ ಪ್ರತಿನಿಧಿ ನವದಿಲ್ಲಿಗೆ ಆಗಮಿಸಲಿದ್ದಾರೆ ಎಂದರು.

ಲಂಚ ಸ್ವೀಕಾರ: ಈ ನಡುವೆ ಮಾಲ್ಡೀವ್ಸ್‌ ನಲ್ಲಿ ಅಸ್ಥಿರತೆ ಉಂಟು ಮಾಡಲು “ಕೆಲವರು’ ಪ್ರಯತ್ನಿಸುತ್ತಿದ್ದಾರೆ ಎಂದು ಅಧ್ಯಕ್ಷ ಅಬ್ದುಲ್ಲ ಯಮೀನ್‌ ಆರೋಪಿಸಿದ್ದಾರೆ. ಸುಪ್ರೀಂಕೋರ್ಟ್‌ನ ಕೆಲ ನ್ಯಾಯಮೂರ್ತಿಗಳು ಸರ್ಕಾರದ ವಿರುದ್ಧ ದಂಗೆ ನಡೆಸಲು ಕೋಟ್ಯಂತರ ರೂ. ಮೊತ್ತವನ್ನು ಸ್ವೀಕರಿಸಿದ್ದಾರೆ ಎಂದು ದೂರಿದ್ದಾರೆ.  ಈ ನಡುವೆ ಬಂಧನದಲ್ಲಿರುವ ಮುಖ್ಯ ನ್ಯಾಯಮೂರ್ತಿ ಅಬ್ದುಲ್ಲ ಸಯೀದ್‌ ಪರ ನ್ಯಾಯವಾದಿ ಮಾತನಾಡಿ ಬಂಧನದಿಂದ ಮೊದಲು ಸಯೀದ್‌ಗೆ ತೀರ್ಪು ಬದಲಿಸದೇ ಇದ್ದರೆ ಕತ್ತರಿಸಿ ತುಂಡು ಮಾಡಲಾಗುತ್ತದೆ ಎಂಬ ಬೆದರಿಕೆ ಬಂದಿತ್ತು ಎಂದು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next